ಪ್ರೊ ಕಬಡ್ಡಿ: ಗುಜರಾತ್-ಡೆಲ್ಲಿ ಸಮಬಲ, ತಲೈವಾಸ್ ಸೋಲಿಸಿದ ಟೈಟಾನ್ಸ್

ಚೆನ್ನೈ, ಅಕ್ಟೋಬರ್ 9: ಚೆನ್ನೈ ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಗುಜರಾತ್ ಫಾರ್ಚೂನ್ ಜಿಯಾಂಟ್ ಮತ್ತು ದಬಾಂಗ್ ಡೆಲ್ಲಿ ತಂಡಗಳ ಮುಖಾಮುಖಿಯಲ್ಲಿ ಎರಡೂ ತಂಡಗಳು 32-32 ಅಂತರದಿಂದ ಸಮಬಲ ಸಾಧಿಸಿವೆ. ಪಂದ್ಯಾರಂಭದಲ್ಲಿ ಹಿನ್ನಡೆಯಲ್ಲಿದ್ದ ಡೆಲ್ಲಿ ಪಂದ್ಯ ಮುಂದುವರೆದಂತೆ ಅಂಕ ಕದಿಯುತ್ತಾ ಬಂತು.
ಪಂದ್ಯದ ಪ್ರಥಮಾರ್ಧ ಮುಕ್ತಾಯದ ವೇಳೆ ಗುಜರಾತ್ 16-11ರ ಮುನ್ನಡೆಯಲ್ಲಿತ್ತು. ಗುಜರಾತ್ ನ ರೋಹಿತ್ ಗುಲಿಯಾ ಮತ್ತು ಕೆ ಪ್ರಪಂಜನ್ ತಂಡಕ್ಕೆ ಅಂಕ ಸೇರಿಸಿದ್ದರು. ಪಂದ್ಯದ ದ್ವಿತೀಯಾರ್ಧದಲ್ಲಿ ಡೆಲ್ಲಿ ಭರ್ಜರಿ ಆಟವಾಡಿ ಪಂದ್ಯವನ್ನು ಸಮಬಲಗೊಳಿಸಿಕೊಂಡಿತು.
ಮಂಗಳವಾರ ನಡೆದ 5ನೇ ಪಂದ್ಯದಲ್ಲಿ ಗುಜರಾತ್-ಡೆಲ್ಲಿ ಸಮಬಲ ಸಾಧಿಸಿದರೆ, 6ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ತಮಿಳ್ ತಲೈವಾಸ್ ತಂಡವನ್ನು 33-28ರಿಂದ ಸೋಲಿಸಿತು. ತಮಿಳ್ ತಲೈವಾಸ್ ತಂಡ ನೆನ್ನೆಯ (ಅ.8) ಪಂದ್ಯದಲ್ಲೂ ಯುಪಿ ಯೋಧ ವಿರುದ್ಧ ಸೋತಿತ್ತು.
Story first published: Tuesday, October 9, 2018, 23:22 [IST]
Other articles published on Oct 9, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications