For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಬುಲ್ಸ್ ತಂಡಕ್ಕೆ ರೋಹಿತ್ ನಾಯಕ, ರಣಧೀರ್ ಕೋಚ್!

PKL 2018: Randhir Singh continue to Coach Bengaluru Bulls squad

ಬೆಂಗಳೂರು, ಅಕ್ಟೋಬರ್ 02: ಈ ಬಾರಿಯ ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಗೆ ಎಲ್ಲಾ ತಂಡಗಳು ಸಜ್ಜಾಗುತ್ತಿವೆ. ಬೆಂಗಳೂರು ಬುಲ್ಸ್ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ. ರೋಹಿತ್ ಕುಮಾರ್ ಅವರು ಈ ಬಾರಿ ತಂಡವನ್ನು ಮುನ್ನಡೆಸಲಿದ್ದರೆ, ರಣಧೀರ್ ಸಿಂಗ್ ಅವರು ಕೋಚ್ ಆಗಿ ಮುಂದುವರೆಯಲಿದ್ದಾರೆ.

6ನೇ ಆವೃತ್ತಿಯ ಪಿಕೆಎಲ್ 2018 ಅಕ್ಟೋಬರ್ 05ರಿಂದ ಆರಂಭಗೊಳ್ಳಲಿದೆ.

ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ತೆಲುಗು ಟೈಟಾನ್ಸ್ ಸೆಣಸಲಿದೆ. ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಆಡಲಿವೆ. ಪ್ಲೇ ಆಫ್ ಪಂದ್ಯಗಳು ಕೊಚ್ಚಿ ಮತ್ತು ಮುಂಬೈನಲ್ಲಿ ನಡೆಯಲಿದ್ದು, ಜನವರಿ 5ರಂದು ಫೈನಲ್ ಪಂದ್ಯ ಮುಂಬೈನಲ್ಲಿ ನಡೆಯಲಿದೆ.

ಬುಲ್ಸ್ ತಂಡದ ಸಾಮರ್ಥ್ಯ: ಕಳೆದ ಆವೃತ್ತಿಯಲ್ಲಿ 22 ಪಂದ್ಯಗಳಲ್ಲಿ ಕೇವಲ 8ರಲ್ಲಿ ಗೆಲುವು ಸಾಧಿಸಿತ್ತು. ತಂಡದಲ್ಲಿ ರೋಹಿತ್ ಕುಮಾರ್ ಸೇರಿದಂತೆ 8 ಮಂದಿ ರೈಡರ್ ಗಳಿದ್ದಾರೆ. ಕಾಶಿ ಲಿಂಗ್ ಅಡಕೆರಂಥ ಅನುಭವಿ, ಹರೀಶ್ ನಾಯ್ಕ್ ರಂಥ ಯುವ ಪ್ರತಿಭೆಯನ್ನು ಹೊಂದಿದೆ.

8 ಮಂದಿ ಡಿಫೆಂಡರ್ಸ್ ಹಾಗೂ 4 ಮಂದಿ ಆಲ್ ರೌಂಡರ್ಸ್ ಹೊಂದಿರುವ ಬುಲ್ಸ್ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ತಂಡ ಇಂತಿದೆ:
ರೈಡರ್ಸ್
* ರೋಹಿತ್ ಕುಮಾರ್ (ನಾಯಕ)
* ಆನಂದ್ ವಿ
* ಅನಿಲ್
* ಹರೀಶ್ ನಾಯ್ಕ್
* ಕಾಶಿಲಿಂಗ್ ಅಡಕೆ
* ಪವನ್ ಕುಮಾರ್ ಶೆಹ್ರಾವತ್
* ರೋಹಿತ್
* ಸುಮಿತ್ ಸಿಂಗ್

ಡಿಫೆಂಡರ್ಸ್
* ಅಶೀಶ್ ಕುಮಾರ್
* ಮಹೇಂದ್ರ ಸಿಂಗ್ ಧಾಕ
* ನಿತೇಶ್ ಬಿ.ಆರ್
* ರಾಜು ಲಾಲ್ ಚೌಧರಿ
* ಮಹೇಂದ್ರ ಸಿಂಗ್
* ಅಮಿತ್ ಶೆರೋರಾನ್
* ಜವಾಹರ್ ವಿವೇಕ್ ಕೆ
* ಸಂದೀಪ್

ಆಲ್ ರೌಂಡರ್ಸ್
* ಡೊಂಗ್ ಜೂ ಹೊಂಗ್
* ಜಿಂಪ್ ಟಿಯೋ ಕಿಮ್
* ಜಸ್ಮೇರ್ ಸಿಂಗ್ ಗುಲಿಯಾ
* ಮಹೇಶ್ ಮಾರುತಿ ಮಗ್ದಂ

Story first published: Tuesday, October 2, 2018, 17:16 [IST]
Other articles published on Oct 2, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+