ಪ್ರೊ ಕಬಡ್ಡಿ 2018-19: ಪವನ್ ಸಾಹಸ, ಬೆಂಗಳೂರು ಚೊಚ್ಚಲ ಚಾಂಪಿಯನ್

ಮುಂಬೈ, ಜನವರಿ 5: ಮುಂಬೈಯ ಸರ್ದಾರ್ ವಲ್ಲಭ ಭಾಯ್ ಇಂಡೋರ್ ಸ್ಟೇಡಿಯಂನಲ್ಲಿ ಶನಿವಾರ (ಜ.5) ನಡೆದ ಪ್ರೊ ಕಬಡ್ಡಿ ಲೀಗ್ 2018-19ರ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಪ್ರಶಸ್ತಿ ಸುತ್ತಿನಲ್ಲಿ ಬಲಿಷ್ಟ ಬೆಂಗಳೂರು, ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವನ್ನು 38-33ರ ಅಂತರದಿಂದ ಸೋಲಿಸಿತು.
ಬೆಂಗಳೂರು ಪರ ಪವನ್ ಕುಮಾರ್ 20 ರೈಡಿಂಗ್ ಪಾಯಿಂಟ್ಸ್ ಮತ್ತು 2 ಬೋನಸ್ ಒಟ್ಟಿಗೆ 22 ಅಂಕ ಸೇರಿಸಿದ್ದು ತಂಡದ ಗೆಲುವಿಗೆ ಪ್ರಮುಖವೆನಿಸಿತು. ಎದುರಾಳಿ ಗುಜರಾತ್ ಕೂಡ ಉತ್ತಮ ಪೈಪೋಟಿ ನೀಡಿತು. ಗುಜರಾತ್ ಪರ ಸಚಿನ್ 10 ಪಾಯಿಂಟ್ಸ್ ಸೇರಿಸಿ ಗಮನ ಸೆಳೆದರು.
ಸಾಕಷ್ಟು ರೋಚಕವೆನಿಸಿದ್ದ ಪಂದ್ಯದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿ ನಡೆಸಿದವು. ಒಮ್ಮೆ ಗುಜರಾತ್ ಮತ್ತೊಮ್ಮೆ ಬೆಂಗಳೂರು ಮುನ್ನಡೆ ಸಾಧಿಸಿತು. ಅಂತಿಮವಾಗಿ ಬೆಂಗಳೂರು ಮೇಲುಗೈ ಸಾಧಿಸುತ್ತಾ ಹೋಯಿತು. ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟಿದೆ.
ಅಂತಿಮ ಪಂದ್ಯಕ್ಕೂ ಮುನ್ನ ಟೂರ್ನಿಯಲ್ಲಿ ಎ ಝೋನ್‌ನಲ್ಲಿದ್ದ ಗುಜರಾತ್ ಫಾರ್ಚೂನ್ ಜೈಂಟ್ಸ್ 22 ಪಂದ್ಯಗಳಲ್ಲಿ 17 ರಲ್ಲಿ ಜಯ ಸಾಧಿಸಿ 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು. ಇತ್ತ ಬಿ ಝೋನ್‌ನಲ್ಲಿದ್ದ ಬೆಂಗಳೂರು ಬುಲ್ಸ್ 22ರಲ್ಲಿ 13ರಲ್ಲಿ ಗೆದ್ದು 2ರಲ್ಲಿ ಸಮಬಲ ಸಾಧಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications