For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 2018: ಬೆಂಗಳೂರು ಬುಲ್ಸ್‌ಗೆ ಸೋಲುಣಿಸಿದ ಯು ಮುಂಬಾ

PKL 2018: U Mumba narrowly edge out Bengaluru Bulls by 39-32

ಮುಂಬೈ, ನವೆಂಬರ್ 15: ಮುಂಬೈಯ ಸರ್ದಾರ್ ವಲ್ಲಭಭಾಯ್ ಪಟೇಲ್ ಇಂಡೋರ್ ಸ್ಟೇಡಿಯಂನಲ್ಲಿ ಬುಧವಾರ (ನವೆಂಬರ್ 14) ನಡೆದ ಪ್ರೊ ಕಬಡ್ಡಿ ಲೀಗ್ ಯು ಮುಂಬಾ ಮತ್ತು ಬೆಂಗಳೂರು ಬುಲ್ಸ್ ಮುಖಾಮುಖಿಯಲ್ಲಿ ಯು ಮುಂಬಾ 39-32ರ ಜಯ ಸಾಧಿಸಿದೆ.

ದರ್ಶನ್ ಕಡಿಯಾನ್ ಚತುರ ಆಟದ ನೆರವಿನಿಂದ ಮುಂಬೈ ತಂಡ ಬೆಂಗಳೂರಿಗೆ ಸೋಲುಣಿಸಿತು. ರೈಡಿಂಗ್ ನಲ್ಲಿ ಮಿಂಚಿದ ದರ್ಶನ್ 9 ಪಾಯಿಂಟ್ ತಂಡಕ್ಕೆ ಸೇರಿಸಿದರು. ಜೊತೆಗೆ ಸುರೀಂದರ್ ಸಿಂಗ್ ಮತ್ತು ಅಬ್ಲೊಫ್ಝಾಲ್ ಮಾಗ್ಸೊಡ್ಲೌಮಾಲಿ ಕೂಡ ತಲಾ 5 ಅಂಕದ ಕೊಡುಗೆಯಿತ್ತರು.

ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಮತ್ತು ರೋಹಿತ್ ಕುಮಾರ್ ಕ್ರಮವಾಗಿ 8, 6 ಅಂಕಗಳನ್ನು ಸೇರಿಸಿ ತಂಡದ ಗೆಲುವಿಗಾಗಿ ಹೋರಾಟ ನಡೆಸಿದರಾದರೂ ಗೆಲುವು ಆತಿಥೇಯರ ಪರ ವಾಲಿತು. ಯು ಮುಂಬಾ ಕೊಂಚ ಒಗ್ಗಟ್ಟಿನಲ್ಲಿ ಅಂಕ ಸೇರಿಸಿ ಗೆಲುವನ್ನು ಮಡಿಲಿಗೆ ತಂದುಕೊಂಡಿತು.

ಈ ಪಂದ್ಯದ ಬಳಿಕ ಆಡಿರುವ 13 ಪಂದ್ಯಗಳಲ್ಲಿ 9 ಗೆಲುವು 1 ಪಂದ್ಯ ಡ್ರಾ ಮಾಡಿಕೊಂಡಿರುವ ಯು ಮುಂಬಾ ಭರ್ಜರಿ 51 ಅಂಕಗಳೊಂದಿಗೆ ಎ ಝೋನ್ ಅಂಕಪಟ್ಟಿಯ ಅಗ್ರ ಸ್ಥಾನದಲ್ಲಿ ಗಟ್ಟಿಯಾಗಿದೆ. 8 ಪಂದ್ಯಗಳಲ್ಲಿ ಇದು ಎರಡನೇ ಸೋಲು ಕಂಡಿರುವ ಬೆಂಗಳೂರು ಕೂಡ ಬಿ ಝೋನ್ ಅಂಕಪಟ್ಟಿಯಲ್ಲಿ 32 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನ ಅಲಂಕರಿಸಿದೆ. ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಹರ್ಯಾಣ ಸ್ಟೀಲರ್ಸ್ ತಂಡಗಳು 32-32ರ ಸಮಬಲ ಸಾಧಿಸಿವೆ.

Story first published: Thursday, November 15, 2018, 1:49 [IST]
Other articles published on Nov 15, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+