Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿಕೆಎಲ್: ತಲೈವಾಸ್ ವಿರುದ್ಧ ಜಯ, ಮುಂಬೈಯನ್ನೀಗ ಜಗ್ಗಿ ನಿಲ್ಲಿಸೋರಿಲ್ಲ!

PKL 2018: U Mumba outclass Tamil Thalaivas

ಮುಂಬೈ, ನವೆಂಬರ್ 16: ಮುಂಬೈಯಲ್ಲಿನ ಸರ್ದಾರ್ ವಲ್ಲಭ ಭಾಯ್ ಪಟೇಲ್ ಇಂಡೋರ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 15) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ತಮಿಳ್ ತಲೈವಾಸ್ ಎದುರು ಬಲಿಷ್ಟ ಯು ಮುಂಬಾ ತಂಡ 36-22ರ ಜಯ ಗಳಿಸಿದೆ. ಝೋನ್ 'ಎ'ಯಲ್ಲಿರುವ ಮುಂಬೈ ಈಗ ಅಗ್ರ ಸ್ಥಾನದಲ್ಲಿ ಭದ್ರವಾಗಿದೆ.

ಯು ಮುಂಬಾದ ಆಲ್ ರೌಂಡರ್ ಆಟ ತಮಿಳ್ ತಲೈವಾಸ್ ಅನ್ನು ಸುಲಭವಾಗಿ ಹೆಡೆಮುರಿ ಕಟ್ಟಲು ನೆರವು ನೀಡಿತು. ರೈಡರ್ ದರ್ಶನ್ ಕಡಿಯಾನ್ 6 ಅಂಕಗಳನ್ನು ತಂಡಕ್ಕೆ ಸೇರಿಸಿದರೆ, ಸಿದ್ಧಾರ್ಥ್ ದೇಸಾಯ್, ವಿನೋದ್ ಕುಮಾರ್, ಫಝಲ್ ಅಟ್ರಾಚಲಿ ತಲಾ 5 ಅಂಕಗಳನ್ನು ತಂಡದ ಖಾತೆಗೆ ಸೇರಿಸಿ ಬಲ ತುಂಬಿದರು.

ಈ ಪಂದ್ಯದ ಬಳಿಕ ಮುಂಬೈ 14 ಪಂದ್ಯಗಳಲ್ಲಿ 10 ಗೆಲುವುಗಳಿಸಿ ಬಿ ಝೋನ್ ನಲ್ಲಿ ಭರ್ಜರಿ 56 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿ ಗಟ್ಟಿಯಾಗಿದೆ. ದ್ವಿತೀಯ ಸ್ಥಾನದಲ್ಲಿರುವ ಪುಣೇರಿ ಪಲ್ಟಾನ್ 38 ಅಂಕಗಳನ್ನು ಸಂಪಾದಿಸಿದೆ. ಗುರುವಾರ ನಡೆದ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಪಾಟ್ನಾ ಪೈರೇಟ್ಸ್ 38-35ರ ಗೆಲುವನ್ನಾಚರಿಸಿತು.

Story first published: Friday, November 16, 2018, 1:45 [IST]
Other articles published on Nov 16, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+