For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 2019: ಯು ಮುಂಬಾದ ಹೆಡೆಮುರಿ ಕಟ್ಟಿದ ಬೆಂಗಳೂರು ಬುಲ್ಸ್‌

 Bengaluru Bulls beat Hosts U Mumba

ಮುಂಬೈ, ಜುಲೈ 28: ಸ್ಟಾರ್‌ ರೇಡ್‌ ಪವನ್‌ ಕುಮಾರ್‌ ಸೆಹ್ರಾವತ್‌ ಅವರ ಮಿಂಚಿನ ರೇಡ್‌ಗಳ ಬಲದಿಂದ ಪ್ರಾಬಲ್ಯ ಮೆರೆದ ಹಾಲಿ ಚಾಂಪಿಯನ್ಸ್‌ ಬೆಂಗಳೂರು ಬುಲ್ಸ್‌ ತಂಡ, ಇಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ 2019ರ ಹೈ ವೋಲ್ಟೇಜ್‌ ಲೀಗ್‌ ಪಂದ್ಯದಲ್ಲಿ ಆತಿಥೇಯ ಯು ಮುಂಬಾ ತಂಡವನ್ನು ಬಗ್ಗುಬಡಿದಿದೆ.

ಇಲ್ಲಿನ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಮಿಂಚಿದ ಬೆಂಗಳೂರು ಬುಲ್ಸ್‌ 30-26 ಅಂಕಗಳಿಂದ ಯು ಮುಂಬಾ ಸವಾಲನ್ನು ಮೆಟ್ಟಿನಿಂತಿತು. ಕಳೆದ ಪಂದ್ಯದಲ್ಲಿ ಹೀನಾಯ ಸೋಲುಂಡಿದ್ದ ಬೆಂಗಳೂರು ತಂಡ ಈ ಮೂಲಕ ಗೆಲುವಿನ ಹಾದಿಗೆ ಮರಳಿದೆ.

ಕಳೆದ ವರ್ಷವೂ ಬೆಂಗಳೂರು ಪರ ಅಬ್ಬರಿಸಿದ್ದ ಯುವ ರೇಡರ್‌ ಪವನ್‌ ಕುಮಾರ್‌ ಸೆಹ್ರಾವತ್‌, ಈ ಬಾರಿಯೂ ತಮ್ಮ ಲಯ ಕಾಯ್ದುಕೊಂಡಿದ್ದು, ಭಾನುವಾರದ ಪಂದ್ಯದಲ್ಲಿ 21 ಬಾರಿ ದಾಳಿ ನಡೆಸಿ ಒಟ್ಟಾರೆ 11 ಅಂಕಗಳನ್ನು ತಂದುಕೊಡುವ ಮೂಲಕ ಜಯದ ರೂವಾರಿ ಎನಿಸಿದರು.

ಪವನ್‌ಗೆ ಉತ್ತಮ ಸಾಥ್‌ ನೀಡುವಲ್ಲಿ ನಾಯಕ ರೋಹಿತ್‌ ಕುಮಾರ್‌ (1) ವಿಫಲರಾದರೂ, ಡಿಫೆನ್ಸ್‌ನಲ್ಲಿ ಮಹೇಂದರ್‌ ಸಿಂಗ್‌ ನಾಲ್ಕು ಅಂಕಗಳನ್ನು ಗಳಿಸುವ ಮೂಲಕ ತಂಡಕ್ಕೆ ಭದ್ರ ಕೋಟೆಯಾಗಿ ನಿಂತರು. ಮೋಹಿತ್‌ ಸೆಹ್ರಾವತ್‌ ಮೂರು ಅಂಕಗಳ ಕಾಣಿಕೆ ನೀಡಿದರು.

ಮತ್ತೊಂದೆಡೆ ಫಝಲ್‌ ಅತ್ರಾಚಲಿ ಸಾರಥ್ಯದ ಯು ಮುಂಬಾ ತಂಡ, ರೇಡರ್‌ಗಳ ಕೊರತೆ ಎದುರಿಸುತ್ತಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತಿದ್ದು, ಸ್ಥಿರತೆ ಕಾಯ್ದುಕೊಳ್ಳಲು ವಿಫಲವಾಗುತ್ತದೆ. ಆದರೂ, ಅರ್ಜುನ್‌ ದೇಶ್ವಾಲ್‌ (6) ಮತ್ತು ಅಭಿಷೇಕ್‌ ಸಿಂಗ್‌ (5) ಗಮನಾರ್ಹ ಪ್ರದರ್ಶನದ ಮೂಲಕ ಹೋರಾಟ ಹಿಡಿದಿಟ್ಟರು.

ಇದಕ್ಕೂ ಮೊದಲು ನಡೆದ ದಿನದ ಮೊದಲ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ತಂಡ 41-21 ಅಂಕಗಳಿಂದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಮಣಿಸಿ ಸತತ ಜಯದ ಸವಿಯುಂಡಿತು.

ಸೋಮವಾರ ನಡೆಯಲಿರುವ ಪಂದ್ಯಗಳಲ್ಲಿ ತಮಿಳ್‌ ತಲೈವಾಸ್‌ ಮತ್ತು ಪಟನಾ ಪೈರೇಟ್ಸ್‌ ಹಾಗೂ ಬೆಂಗಾಲ್‌ ವಾರಿಯರ್ಸ್‌ ಮತ್ತು ಪುಣೇರಿ ಪಲ್ಟನ್‌ ತಂಡಗಳು ಮುಖಾಮುಖಿಯಾಗಲಿವೆ.

Story first published: Sunday, July 28, 2019, 22:45 [IST]
Other articles published on Jul 28, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+