ಪಿಕೆಎಲ್ ಹರಾಜು 2021: ತಂಡಗಳು ಉಳಿಸಿಕೊಂಡಿರುವ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ

ನವದೆಹಲಿ: ಒಂದು ವರ್ಷದ ಬಳಿಕ ಭಾರತದ ಮಣ್ಣಿನ ಕ್ರೀಡೆ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಮರಳಿ ಬರುವುದರಲ್ಲಿದೆ. ಆಗಸ್ಟ್ 29ರಿಂದ 31ರ ವರೆಗೆ ಪಿಕೆಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಒಟ್ಟು 12 ತಂಡಗಳು ಈ ಬಾರಿ ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಬಾರಿಯ ಟೂರ್ನಿಗೆ ಸಂಬಂಧಿಸಿ ಎಲ್ಲಾ ತಂಡಗಳು ತಾವು ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿ ಪ್ರಕಟಿಸಿವೆ. ಪರ್ದೀಪ್ ನರ್ವಾಲ್, ರಾಹುಲ್ ಚೌಧರಿ ಮತ್ತು ಅಜಯ್ ಠಾಕೂರ್‌ನಂತ ಆಟಗಾರರನ್ನು ಅವರವರ ತಂಡಗಳು ಬಿಡುಗಡೆ ಮಾಡಿವೆ.
ಎಲ್ಲಾ 12 ತಂಡಗಳು ಸೇರಿ ಒಟ್ಟು 59 ಆಟಗಾರರನ್ನು ಉಳಿಸಿಕೊಂಡಿವೆ. ಎಲೈಟ್ ರಿಟೇನ್ಡ್ ಪ್ಲೇಯರ್ಸ್ ವಿಭಾಗದಲ್ಲಿ 22 ಮಂದಿ, ರಿಟೇನ್ಡ್ ಯಂಗ್ ಪ್ಲೇಯರ್ಸ್ ವಿಭಾಗದಲ್ಲಿ 6, 31 ಆಟಗಾರರು ರಿಟೇನ್ಡ್ ನ್ಯೂ ಯಂಗ್ ಪ್ಲೇಯರ್ಸ್ ವಿಭಾಗದಲ್ಲಿ ಉಳಿಸಿಕೊಳ್ಳಲಾಗಿದೆ. ಪಿಕೆಎಲ್ 2021ರ ಆವೃತ್ತಿ ಡಿಸೆಂಬರ್‌ನಲ್ಲಿ ನಡೆಯಲಿದೆ.

ಬೆಂಗಳೂರು ಬುಲ್ಸ್, ತಮಿಳು ತಲೈವಾಸ್
ಬೆಂಗಳೂರು ಬುಲ್ಸ್ ಉಳಿಸಿಕೊಂಡಿರುವ ಆಟಗಾರರು
ಪವನ್ ಕುಮಾರ್ ಸೆಹ್ರಾವತ್, ಅಮಿತ್ ಶಿಯೋರನ್, ಸೌರಭ್ ನಂದಾಲ್, ಬಂಟಿ, ಮೋಹಿತ್ ಶೆರಾವತ್.
ಹರಿಯಾಣ ಸ್ಟೀಲರ್ಸ್ ಉಳಿಸಿಕೊಂಡಿರುವ ಆಟಗಾರರು
ವಿಕಾಸ್ ಖಂಡೋಲಾ, ವಿನಯ್, ವಿಕಾಸ್ ಚಿಲ್ಲರ್, ಚಾಂದ್ ಸಿಂಗ್.
ತಮಿಳು ತಲೈವಾಸ್ ಉಳಿಸಿಕೊಂಡಿರುವ ಆಟಗಾರರು
ಸಾಗರ್, ಹಿಮಾಂಶು, ಎಂ ಅಭಿಷೇಕ್.
ತೆಲುಗು ಟೈಟಾನ್ಸ್ ಉಳಿಸಿಕೊಂಡಿರುವ ಆಟಗಾರರು
ರಾಕೇಶ್ ಗೌಡ, ಅಂಕಿತ್ ಬೆನಿವಾಲ್, ರಜನೀಶ್, ಮನೀಶ್, ಆಕಾಶ್ ಚೌಧರಿ, ಆಕಾಶ್ ದತ್ತು ಅರ್ಸುಲ್.

ಯುಪಿ ಯೋಧ, ಯು ಮುಂಬಾ
ಯುಪಿ ಯೋಧ ಉಳಿಸಿಕೊಂಡಿರುವ ಆಟಗಾರರು
ನಿತೇಶ್ ಕುಮಾರ್, ಸುಮಿತ್, ಅಶು ಸಿಂಗ್, ಸುರೀಂದರ್ ಗಿಲ್
ಜೈಪುರ ಪಿಂಕ್ ಪ್ಯಾಂಥರ್ಸ್ ಉಳಿಸಿಕೊಂಡಿರುವ ಆಟಗಾರರು
ಅಮಿತ್ ಹೂಡಾ, ವಿಶಾಲ್, ನಿತಿನ್ ರಾವಲ್, ಸಚಿನ್ ನರ್ವಾಲ್, ಪವನ್ ಟಿಆರ್, ಸುಶೀಲ್ ಗೂಲಿಯಾ, ಎಲವರ್ಸನ್ ಎ
ಯು ಮುಂಬಾ ಉಳಿಸಿಕೊಂಡಿರುವ ಆಟಗಾರರು
ಅಭಿಷೇಕ್ ಸಿಂಗ್, ಅಜಿಂಕ್ಯ ಕಾಪ್ರೆ, ಹರೇಂದ್ರ ಕುಮಾರ್, ಫazೆಲ್ ಅತ್ರಾಚಲಿ, ನವನೀತ್
ಪುಣೇರಿ ಪಲ್ಟನ್ ಉಳಿಸಿಕೊಂಡಿರುವ ಆಟಗಾರರು
ಬಾಳಾಸಾಹೇಬ್ ಶಾಹ್ಜಿ ಜಾಧವ್, ಪವನ್ ಕುಮಾರ್ ಕಡಿಯನ್, ಹಾಡಿ ತಾಜಿಕ್, ಸಂಕೇತ್ ಸಾವಂತ್, ಪಂಕಜ್ ಮೋಹಿತ್

ಪಾಟ್ನಾ ಪೈರೇಟ್ಸ್, ಬೆಂಗಾಲ್ ವಾರಿಯರ್ಸ್
ಪಾಟ್ನಾ ಪೈರೇಟ್ಸ್ ಉಳಿಸಿಕೊಂಡಿರುವ ಆಟಗಾರರು
ನೀರಜ್ ಕುಮಾರ್, ಮೋನು, ಮೋಹಿತ್, ರಾಜವೀರ್ಸಿಂಹ ಚವಾಣ್, ಸಾಹಿಲ್ ಮನ್
ದಬಾಂಗ್ ದೆಹಲಿ ಉಳಿಸಿಕೊಂಡಿರುವ ಆಟಗಾರರು
ವಿಜಯ್ ಕುಮಾರ್, ನೀರಜ್ ನರ್ವಾಲ್, ನವೀನ್ ಕುಮಾರ್, ಬಲರಾಮ್, ಸುಮಿತ್, ಮೋಹಿತ್
ಗುಜರಾತ್ ಫಾರ್ಚೂನ್ ಜೈಂಟ್ಸ್ ಉಳಿಸಿಕೊಂಡಿರುವ ಆಟಗಾರರು
ಪರ್ವೇಶ್ ಭೈನ್ಸ್ವಾಲ್, ಸುನಿಲ್ ಕುಮಾರ್, ಹರ್ಮಂಜೀತ್ ಸಿಂಗ್, ಸುಮಿತ್, ಅಂಕಿತ್
ಬೆಂಗಾಲ್ ವಾರಿಯರ್ಸ್ ಉಳಿಸಿಕೊಂಡಿರುವ ಆಟಗಾರರು
ಮನಿಂದರ್ ಸಿಂಗ್, ಮೊಹಮ್ಮದ್ ಎಸ್ಮೇಲ್ ನಬಿಬಕ್ಷ್, ರಿಂಕು ನರ್ವಾಲ್, ರವೀಂದ್ರ ರಮೇಶ್ ಕುಮಾವತ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications