For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ ಲೀಗ್ 8: ಬೆಂಗಳೂರು ಬುಲ್ಸ್ vs ತಮಿಳು ತಲೈವಾಸ್ ಕಾದಾಟದಲ್ಲಿ ಯಾರು ಬಲಿಷ್ಠರು?

PKL 2021: Bengaluru Bulls v/s Tamil Thalaivas Preview, Predicted 7, live streaming and Head to Head Records

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಮತ್ತೆ ಬಂದಿದ್ದು, ನಿನ್ನೆ ( ಡಿಸೆಂಬರ್ 22 ) ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಹಣಾಹಣಿಯ ಮೂಲಕ ಆರಂಭವನ್ನು ಪಡೆದುಕೊಂಡಿದೆ. ಹೌದು, 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಯು ಮುಂಬಾ ಜಯ ಸಾಧಿಸುವುದರ ಮೂಲಕ ಶುಭಾರಂಭ ಮಾಡಿದೆ. ಹೀಗೆ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ತನ್ನ ಚೊಚ್ಚಲ ಪಂದ್ಯದಲ್ಲಿ ಸೋತಿರುವ ಬೆಂಗಳೂರು ಬುಲ್ಸ್ ತನ್ನ ದ್ವಿತೀಯ ಪಂದ್ಯವನ್ನು ತಮಿಳು ತಲೈವಾಸ್ ವಿರುದ್ಧ ಡಿಸೆಂಬರ್ 24ರಂದು ಆಡುತ್ತಿದೆ.

ಇನ್ನು ಡಿಸೆಂಬರ್ 24ರ ಶುಕ್ರವಾರದಂದು ಪ್ರೋ ಕಬಡ್ಡಿ ಲೀಗ್ ಟೂರ್ನಿಯಲ್ಲಿ 3 ಪಂದ್ಯಗಳು ನಡೆಯಲಿದ್ದು, ಯು ಮುಂಬಾ ಮತ್ತು ದಬಾಂಗ್ ಡೆಲ್ಲಿ ನಡುವಿನ ಪಂದ್ಯ ಸಂಜೆ 7.30ಕ್ಕೆ, ಬೆಂಗಳೂರು ಬುಲ್ಸ್ ಮತ್ತು ತಮಿಳು ತಲೈವಾಸ್ ನಡುವಿನ ಪಂದ್ಯ ರಾತ್ರಿ 8.30ಕ್ಕೆ ಹಾಗೂ ಬೆಂಗಾಲ್ ವಾರಿಯರ್ಸ್ ಮತ್ತು ಗುಜರಾತ್ ಜಿಯಂಟ್ಸ್ ನಡುವಿನ ಪಂದ್ಯ ರಾತ್ರಿ 9.30ಕ್ಕೆ ನಡೆಯಲಿದೆ. ಹೀಗೆ ಇಂದು ನಡೆಯಲಿರುವ ಈ 3 ಪಂದ್ಯಗಳ ಕುರಿತಾದ ಮಾಹಿತಿ, ಪಂದ್ಯಗಳಲ್ಲಿ ಕಣಕ್ಕಿಳಿಯಲಿರುವ ಸಂಭಾವ್ಯ ಆಟಗಾರರ ಪಟ್ಟಿ ಮತ್ತು ಮುಖಾಮುಖಿ ಹಣಾಹಣಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬುದರ ಮಾಹಿತಿ ಮುಂದೆ ಇದೆ ಓದಿ..

ಪಂದ್ಯ 1: ಯು ಮುಂಬಾ vs ದಬಾಂಗ್ ಡೆಲ್ಲಿ

ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲಿಯೇ ಜಯ ಗಳಿಸಿರುವ ಯು ಮುಂಬಾ ಮತ್ತು ದಬಾಂಗ್ ಡೆಲ್ಲಿ ಮೂರನೇ ದಿನದಾಟದಂದು ನಡೆಯಲಿರುವ ಪ್ರಥಮ ಪಂದ್ಯದಲ್ಲಿ ಪರಸ್ಪರ ಸೆಣಸಾಟ ನಡೆಸಲಿವೆ. ಇನ್ನು ಇತ್ತಂಡಗಳ ನಡುವಿನ ಮುಖಾಮುಖಿಯ ಫಲಿತಾಂಶಕ್ಕೆ ಬಂದರೆ ದಬಾಂಗ್ ಡೆಲ್ಲಿ ವಿರುದ್ಧ ಅತೀ ದೊಡ್ಡ ಮಟ್ಟದ ಗೆಲುವನ್ನು ಸಾಧಿಸಿರುವ ಯು ಮುಂಬಾ ಭಾರೀ ಮುನ್ನಡೆಯನ್ನು ಹೊಂದಿದೆ. ಇತ್ತಂಡಗಳ ನಡುವೆ ಇದುವರೆಗೂ ಒಟ್ಟು 16 ಪಂದ್ಯಗಳು ನಡೆದಿದ್ದು, ಈ ಪಂದ್ಯಗಳ ಪೈಕಿ ಯು ಮುಂಬಾ 12 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ದಬಾಂಗ್ ಡೆಲ್ಲಿ ಕೇವಲ 3 ಪಂದ್ಯಗಳಲ್ಲಿ ಗೆದ್ದಿದೆ ಮತ್ತು ಮತ್ತೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಡ್ರಾನಲ್ಲಿ ಅಂತ್ಯಗೊಂಡಿದೆ.

ಯು ಮುಂಬಾ ಸಂಭಾವ್ಯ ತಂಡ: ಅಭಿಷೇಕ್ ಸಿಂಗ್ (ರೈಡರ್) ವಿ ಅಜಿತ್ ಕುಮಾರ್ (ರೈಡರ್) ಮೊಹ್ಸೆನ್ ಮಗ್ಸೌದ್ಲೌ (ಆಲ್ ರೌಂಡರ್) ಹರೇಂದ್ರ ಕುಮಾರ್ (ಎಡ ಕವರ್) ಆಶಿಶ್ ಸಾಂಗ್ವಾನ್ (ರೈಟ್ ಕವರ್) ಫಾಜೆಲ್ ಅತ್ರಾಚಲಿ (ಎಡ ಮೂಲೆ) ರಿಂಕು (ಬಲ ಮೂಲೆ)

ದಬಾಂಗ್ ಡೆಲ್ಲಿ ಸಂಭಾವ್ಯ ತಂಡ: ನವೀನ್ ಗೋಯತ್ (ರೈಡರ್) ಅಜಯ್ ಠಾಕೂರ್ (ರೈಡರ್) ವಿಜಯ್ ಮಲಿಕ್ (ರೈಡರ್) ಮಂಜೀತ್ ಚಿಲ್ಲರ್ (ಎಡ ಕವರ್) ಜೀವ ಕುಮಾರ್ (ಬಲ ಕವರ್) ಜೋಗಿಂದರ್ ನರ್ವಾಲ್ (ಎಡ ಮೂಲೆ) ಸಂದೀಪ್ ನರ್ವಾಲ್ (ಬಲ ಮೂಲೆ)

ಪಂದ್ಯ 2: ಬೆಂಗಳೂರು ಬುಲ್ಸ್ vs ತಮಿಳ್ ತಲೈವಾಸ್

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ತನ್ನ ಚೊಚ್ಚಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ರೋಚಕ ಡ್ರಾ ಮಾಡಿಕೊಂಡ ತಮಿಳು ತಲೈವಾಸ್ ತನ್ನ ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಎದುರಿಸುತ್ತಿದೆ. ಹಾಗೂ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಸೋತಿರುವ ಬೆಂಗಳೂರು ಬುಲ್ಸ್ ದ್ವಿತೀಯ ಪಂದ್ಯದಲ್ಲಿ ಜಯ ಸಾಧಿಸಿ ಗೆಲುವಿನ ಖಾತೆ ತೆರೆಯುವ ಯೋಜನೆಯಲ್ಲಿದೆ. ಬೆಂಗಳೂರು ಬುಲ್ಸ್ ಮತ್ತು ತಮಿಳು ತಲೈವಾಸ್ ನಡುವೆ ನಡೆಯಲಿರುವ ಪಂದ್ಯ ಮೂರನೇ ದಿನದಾಟದ ದ್ವಿತೀಯ ಪಂದ್ಯವಾಗಿದ್ದು ರಾತ್ರಿ 8.30ಕ್ಕೆ ಪ್ರಾರಂಭಗೊಳ್ಳಲಿದೆ. ಇನ್ನು ಇತ್ತಂಡಗಳ ನಡುವಿನ ಮುಖಾಮುಖಿಯ ಅಂಕಿಅಂಶಗಳಿಗೆ ಬಂದರೆ ಎರಡೂ ತಂಡಗಳು ಇದುವರೆಗೂ ಒಟ್ಟು 7 ಪ್ರೊ ಕಬಡ್ಡಿ ಲೀಗ್ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು ಬೆಂಗಳೂರು ಬುಲ್ಸ್ ಬರೋಬ್ಬರಿ 6 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ತಮಿಳು ತಲೈವಾಸ್ ಕೇವಲ 1 ಪಂದ್ಯದಲ್ಲಿ ಗೆದ್ದಿದೆ. ಹೀಗೆ ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ತಮಿಳು ತಲೈವಾಸ್ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ.

ಬೆಂಗಳೂರು ಬುಲ್ಸ್ ಸಂಭಾವ್ಯ ತಂಡ: ಪವನ್ ಕುಮಾರ್ ಸೆಹ್ರಾವತ್ (ರೈಡರ್) ಚಂದ್ರನ್ ರಂಜಿತ್ (ರೈಡರ್) ಜಿಬಿ ಮೋರ್ (ರೈಡರ್) ಮಹೇಂದರ್ ಸಿಂಗ್ (ಎಡ ಕವರ್) ಮಯೂರ್ ಕದಮ್ (ರೈಟ್ ಕವರ್) ಅಮಿತ್ ಶೆರಾನ್ (ಎಡ ಮೂಲೆ) ಸೌರಭ್ ನಂದಲ್ (ಬಲ ಮೂಲೆ)

ತಮಿಳು ತಲೈವಾಸ್ ಸಂಭಾವ್ಯ ತಂಡ: ಕೆ ಪ್ರಪಂಜನ್ (ರೈಡರ್) ಮಂಜೀತ್ ದಹಿಯಾ (ರೈಡರ್) ಅಜಿಂಕ್ಯ ಪವಾರ್ (ರೈಡರ್) ಮೋಹಿತ್ ಜಖರ್ (ಎಡ ಕವರ್) ಸುರ್ಜೀತ್ (ಬಲ ಕವರ್) ಸಾಹಿಲ್ ಗುಲಿಯಾ (ಎಡ ಮೂಲೆ) ಸಾಗರ್ ರಥಿ (ಬಲ ಮೂಲೆ)

ಪಂದ್ಯ 3: ಬೆಂಗಾಲ್ ವಾರಿಯರ್ಸ್ vs ಗುಜರಾತ್ ಜಿಯಂಟ್ಸ್

ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ಮತ್ತು ಮತ್ತು ಗುಜರಾತ್ ಜಿಯಂಟ್ಸ್ ಈ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ತಾವು ಆಡಿದ ಚೊಚ್ಚಲ ಪಂದ್ಯದಲ್ಲಿಯೇ ಜಯಗಳಿಸುವುದರ ಮೂಲಕ ಶುಭಾರಂಭವನ್ನು ಮಾಡಿವೆ. ಹೀಗೆ ಗೆಲುವಿನ ಅಲೆಯಲ್ಲಿರುವ ಈ ಎರಡೂ ತಂಡಗಳು ಈ ಬಾರಿಯ ಆವೃತ್ತಿಯ ತೃತೀಯ ದಿನದಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಪರಸ್ಪರ ಸೆಣಸಾಟ ನಡೆಸಲಿದ್ದು ಈ ಪಂದ್ಯ ರಾತ್ರಿ 9.30ಕ್ಕೆ ಆರಂಭವಾಗಲಿದೆ. ಇನ್ನು ಇತ್ತಂಡಗಳ ನಡುವೆ ಇದುವರೆಗೂ 5 ಪಂದ್ಯಗಳು ನಡೆದಿದ್ದರೆ 2 ಪಂದ್ಯಗಳಲ್ಲಿ ಗುಜರಾತ್ ಜಿಯಂಟ್ಸ್ ಜಯ ಸಾಧಿಸಿದ್ದು ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ ಮತ್ತು ಇನ್ನುಳಿದ 2 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ಗುಜರಾತ್ ಜಿಯಂಟ್ಸ್ ಸಂಭಾವ್ಯ ತಂಡ: ಮಹೇಂದ್ರ ಗಣೇಶ್ ರಜಪೂತ್ (ರೈಡರ್) ರಾಕೇಶ್ ನರ್ವಾಲ್ (ರೈಡರ್) ರಾಕೇಶ್ ಸುಂಗ್ರೋಯಾ (ರೈಡರ್) ಪರ್ವೇಶ್ ಭೈನ್‌ವಾಲ್ (ಎಡ ಕವರ್) ಸುನೀಲ್ ಕುಮಾರ್ (ಬಲ ಕವರ್) ಗಿರೀಶ್ ಮಾರುತಿ ಎರ್ನಾಕ್ (ಎಡ ಮೂಲೆ) ರವೀಂದರ್ ಪಹಲ್ (ಬಲ ಮೂಲೆ)

ಬೆಂಗಾಲ್ ವಾರಿಯರ್ಸ್ ಸಂಭಾವ್ಯ ತಂಡ: ಮಣಿಂದರ್ ಸಿಂಗ್ (ರೈಡರ್) ಸುಕೇಶ್ ಹೆಗ್ಡೆ (ರೈಡರ್) ಮೊಹಮ್ಮದ್ ನಬಿಬಕ್ಷ್ (ರೈಡರ್) ಪರ್ವೀನ್ ಸತ್ಪಾಲ್ (ಎಡ ಕವರ್) ದರ್ಶನ್ ಜೆ (ಬಲ ಕವರ್) ರಿಂಕು ನರ್ವಾಲ್ (ಎಡ ಮೂಲೆ) ಅಬೋಜರ್ ಮಿಘಾನಿ (ಬಲ ಮೂಲೆ)

Story first published: Friday, December 24, 2021, 14:41 [IST]
Other articles published on Dec 24, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+