ಬೆಂಗಳೂರು ಬುಲ್ಸ್ vs ಯು ಮುಂಬಾ: ಹೆಚ್ಚು ಗೆದ್ದ ಬಲಿಷ್ಠ ತಂಡ ಹಾಗೂ ಕಣಕ್ಕಿಳಿಯುವ ಆಟಗಾರರ ಮಾಹಿತಿ

ಬಹುನಿರೀಕ್ಷಿತ ಪ್ರೋ ಕಬಡ್ಡಿ ಲೀಗ್ ಟೂರ್ನಿ ಮತ್ತೆ ಬಂದಿದೆ. ಹೌದು, ವಿವೋ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ಇಂದಿನಿಂದ ( ಡಿಸೆಂಬರ್ 22, ಬುಧವಾರ ) ಆರಂಭಗೊಳ್ಳುತ್ತಿದ್ದು ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳು ಸೆಣಸಾಟ ನಡೆಸಲಿವೆ.
ಈ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದ್ದು ವೀಕ್ಷಕರಿಗೆ ಅನುಮತಿ ನೀಡದೇ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯಲಿದೆ. ಇನ್ನು ಯು ಮುಂಬಾ ತಂಡದ ಕೋಚ್ ಆಗಿರುವ ಸುಬ್ರಹ್ಮಣ್ಯನ್ ರಾಜಗುರು ತಮ್ಮ ಕೋಚಿಂಗ್ ವೃತ್ತಿಯ ಚೊಚ್ಚಲ ಪಂದ್ಯವನ್ನು ಆಡಲಿದ್ದು ಇದುವರೆಗೂ ನಡೆದಿರುವ ಎಲ್ಲಾ ಪ್ರೋ ಕಬಡ್ಡಿ ಲೀಗ್‌ಗಳಲ್ಲೂ ಕೋಚ್ ಆಗಿ ಕಣಕ್ಕಿಳಿದಿರುವ ಅನುಭವವನ್ನು ಹೊಂದಿರುವ ರಣಧೀರ್ ಸಿಂಗ್ ಸೆಹ್ರಾವತ್ ಅವರನ್ನು ಎದುರಿಸಲಿದ್ದಾರೆ. ರಣಧೀರ್ ಸಿಂಗ್ ಸೆಹ್ರಾವತ್ ತಮ್ಮ ನುರಿತ ಕೋಚಿಂಗ್ ಸಲಹೆಗಳೊಂದಿಗೆ ಬೆಂಗಳೂರು ಬುಲ್ಸ್ ಆಟಗಾರರು ಘರ್ಜಿಸುವಂತೆ ಮಾಡಲಿದ್ದರೆ, ಯು ಮುಂಬಾ ನೂತನ ಕೋಚ್ ಸುಬ್ರಹ್ಮಣ್ಯನ್ ರಾಜಗುರು ಯಾರಿಗೂ ತಿಳಿಯದ ತಮ್ಮ ಕೋಚಿಂಗ್ ಕುಶಲತೆಯೊಂದಿಗೆ ಪ್ರೇಕ್ಷಕರಲ್ಲಿ ಆಶ್ಚರ್ಯ ಮೂಡಿಸುವ ಸಾಧ್ಯತೆಗಳೂ ಇವೆ.
ಇನ್ನು ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ತಂಡಗಳು ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಇದುವರೆಗೂ ಎಷ್ಟು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ, ಈ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು ಮತ್ತು ಪಂದ್ಯದಲ್ಲಿ ಯಾವ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ..

ಬೆಂಗಳೂರು ಬುಲ್ಸ್ vs ಯು ಮುಂಬಾ ಮುಖಾಮುಖಿ ಅಂಕಿ ಅಂಶ
ಪ್ರೊ ಕಬಡ್ಡಿ ಲೀಗ್‌ನ ಮೊದಲೆರಡು ಆವೃತ್ತಿಗಳಲ್ಲಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಸೋಲುಣಿಸಿದ್ದ ಯು ಮುಂಬಾ ಬೆಂಗಳೂರು ಬುಲ್ಸ್ ತಂಡ ಟೂರ್ನಿಯಿಂದ ಹೊರ ಬೀಳುವಂತೆ ಮಾಡಿತ್ತು. ಹಾಗೂ ಈ ಸೇಡನ್ನು ಬೇಗನೆ ತೀರಿಸಿಕೊಂಡ ಬೆಂಗಳೂರು ಬುಲ್ಸ್ ಲೀಗ್ ಹಂತದ ಮಾಡು ಇಲ್ಲವೇ ಮಡಿ ಪಂದ್ಯವೊಂದರಲ್ಲಿ ಯು ಮುಂಬಾ ತಂಡವನ್ನು ಸೋಲಿಸಿ ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವುದನ್ನು ತಪ್ಪಿಸಿತ್ತು. ಇನ್ನು ಕೊನೆಯ ಆವೃತ್ತಿಯಿಂದ ಯು ಮುಂಬಾಗೆ ಬೆಂಗಳೂರು ಬುಲ್ಸ್ ಎರಡೂ ಪಂದ್ಯಗಳಲ್ಲಿಯೂ ಸೋಲನ್ನು ಉಣಿಸಿದೆ. ಒಟ್ಟಾರೆ ಮುಖಾಮುಖಿ ಫಲಿತಾಂಶ
ಪಂದ್ಯಗಳು - 14
ಯು ಮುಂಬಾ - 9
ಬೆಂಗಳೂರು ಬುಲ್ಸ್ - 5
ಡ್ರಾ - 0

ನೇರಪ್ರಸಾರದ ಮಾಹಿತಿ
ಈ ಬಾರಿಯ ವಿವೋ ಪ್ರೊ ಕಬಡ್ಡಿ ಲೀಗ್‌ನ ಎಲ್ಲ ಪಂದ್ಯಗಳು ಸಹ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದು, ಡಿಸ್ನೆ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿಯೂ ಕೂಡ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

ಸಂಭಾವ್ಯ ಆಡುವ ಬಳಗಗಳು
ಬೆಂಗಳೂರು ಬುಲ್ಸ್ ಸಂಭಾವ್ಯ ತಂಡ:
ಪವನ್ ಕುಮಾರ್ ಸೆಹ್ರಾವತ್ (ರೈಡರ್), ಚಂದ್ರನ್ ರಂಜಿತ್ (ರೈಡರ್), ಅಬೋಲ್ಫಜ್ಲ್ ಮಗ್ಸೋಡ್ಲೌ (ರೈಡರ್) ಮಹೇಂದರ್ ಸಿಂಗ್ (ಲೆಫ್ಟ್ ಕವರ್), ಮೋಹಿತ್ ಸೆಹ್ರಾವತ್ (ರೈಟ್ ಕವರ್), ಅಮಿತ್ ಶೆರಾನ್ (ಲೆಫ್ಟ್ ಕಾರ್ನರ್) ಮತ್ತು ಸೌರಭ್ ನಂದಲ್ (ರೈಟ್ ಕಾರ್ನರ್)
ಯು ಮುಂಬಾ ಸಂಭಾವ್ಯ ತಂಡ:
ಅಭಿಷೇಕ್ ಸಿಂಗ್ (ರೈಡರ್), ವಿ ಅಜಿತ್ ಕುಮಾರ್ (ರೈಡರ್), ಅಜಿಂಕ್ಯ ಕಪ್ರೆ (ಆಲ್ ರೌಂಡರ್), ಮೊಹ್ಸೆನ್ ಮಗ್ಸೌದ್ಲೌ (ಆಲ್ ರೌಂಡರ್), ಹರೇಂದ್ರ ಕುಮಾರ್ (ಲೆಫ್ಟ್ ಕವರ್), ಸುನಿಲ್ ಸಿದ್ಧಗವ್ಲಿ (ರೈಟ್ ಕವರ್) ಮತ್ತು ಫಾಜೆಲ್ ಅತ್ರಾಚಲಿ (ಲೆಫ್ಟ್ ಕಾರ್ನರ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications