For Quick Alerts
ALLOW NOTIFICATIONS  
For Daily Alerts

ಪಿಕೆಎಲ್ 2021: ಹರಾಜಿನ ಬಳಿಕ ದಬಾಂಗ್ ಡೆಲ್ಲಿ ಸಂಪೂರ್ಣ ಆಟಗಾರರ ಪಟ್ಟಿ

PKL 2021: Dabang Delhi Full squad for season 8 after PKL Auction

ನವದೆಹಲಿ: ಕಳೆದ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್) ಸೀಸನ್‌ನಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವ ಒಂದೇ ಹೆಜ್ಜೆಯಿಂದ ದಬಾಂಗ್ ಡೆಲ್ಲಿ ಎಡವಿತ್ತು. ಕಳೆದ ಸೀಸನ್‌ನ ಫೈನಲ್‌ನಲ್ಲಿ ಬೆಂಗಾಲ್ ವಾರಿಯರ್ಸ್ ಗೆದ್ದಿತ್ತು. ಹಿಂದಿನ ಸೀಸನ್‌ನಲ್ಲಿ ನಿರಾಸೆ ಅನುಭವಿಸಿರುವ ದಬಾಂಗ್ ಡೆಲ್ಲಿ ಈ ಬಾರಿ ಇನ್ನಷ್ಟು ಬಲಿಷ್ಠ ತಂಡವಾಗಿ ಪ್ರದರ್ಶನ ನೀಡಲು ಎದುರು ನೋಡುತ್ತಿದೆ. ಈ ಬಾರಿ ಆಟಗಾರರ ಹರಾಜಿನಲ್ಲಿ ಡೆಲ್ಲಿ ಒಂದಿಷ್ಟು ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಆಗಸ್ಟ್ 29ರಿಂದ ಆಗಸ್ಟ್ 31ರ ವರೆಗೆ ಮುಂಬೈಯಲ್ಲಿ ನಡೆದ ಪಿಕೆಎಲ್ ಆಟಗಾರರ ಹರಾಜಿನಲ್ಲಿ 400ಕ್ಕೂ ಅಧಿಕ ಆಟಗಾರರು ಪಾಲ್ಗೊಂಡಿದ್ದರು. ಈ ವೇಳೆ ದಬಾಂಗ್ ಡೆಲ್ಲಿ ಕೂಡ ಒಂದಷ್ಟು ಆಟಗಾರರನ್ನು ಖರೀದಿಸಿದೆ. ಡೆಲ್ಲಿ ದೊಡ್ಡ ಮೊತ್ತ ನೀಡಿ ಖರೀದಿಸಿದ ಆಟಗಾರನೆಂದರೆ ಅದು ಸಂದೀಪ್ ನರ್ವಾಲ್. 60 ಲಕ್ಷ ರೂ.ಗೆ ದಬಾಂಗ್ ಡೆಲ್ಲಿ ಸಂದೀಪ್ ನರ್ವಾಲ್ ಅವರನ್ನು ಖರೀದಿಸಿತ್ತು.

ಪಿಕೆಎಲ್ ಹರಾಜಿನ ಬಳಿಕ ದಬಾಂಗ್ ಡೆಲ್ಲಿ ಸಂಪೂರ್ಣ ತಂಡ
* ನವೀನ್ ಕುಮಾರ್, ರೈಡರ್, ಉಳಿಸಿಕೊಳ್ಳಲಾದ ಆಟಗಾರ
* ನೀರಜ್ ನರ್ವಾಲ್, ರೈಡರ್, ಉಳಿಸಿಕೊಳ್ಳಲಾದ ಆಟಗಾರ
* ಇಮಾಡ್ ಸೇಡಘಾಟ್ ನಿಯಾ, ರೈಡರ್, ಖರೀದಿಸಿದ ಬೆಲೆ 10.20 ಲಕ್ಷ ರೂ.
* ಅಜಯ್ ಠಾಕೂರ್, ರೈಡರ್, ಖರೀದಿಸಿದ ಬೆಲೆ 46 ಲಕ್ಷ ರೂ.
* ಸುಶಾಂತ್ ಸೈಲ್, ರೈಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ಮೋಹಿತ್, ಡಿಫೆಂಡರ್, ಉಳಿಸಿಕೊಳ್ಳಲಾದ ಆಟಗಾರ
* ಸುಮಿತ್, ಡಿಫೆಂಡರ್, ಉಳಿಸಿಕೊಳ್ಳಲಾದ ಆಟಗಾರ
* ಮೊಹಮ್ಮದ್ ಮಲಕ್, ರೈಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ಜೋಗಿಂದರ್ ಸಿಂಗ್ ನರ್ವಾಲ್, ಡಿಫೆಂಡರ್, 20 ಲಕ್ಷ ರೂ
* ಜೀವ ಕುಮಾರ್, ಡಿಫೆಂಡರ್, ಖರೀದಿಸಿದ ಬೆಲೆ 44 ಲಕ್ಷ ರೂ.
* ವಿಕಾಸ್, ಡಿಫೆಂಡರ್, ಖರೀದಿಸಿದ ಬೆಲೆ 6 ಲಕ್ಷ ರೂ.
* ವಿಜಯ್, ಆಲ್ ರೌಂಡರ್, ಉಳಿಸಿಕೊಳ್ಳಲಾದ ಆಟಗಾರ
* ಬಲರಾಮ್, ಆಲ್ ರೌಂಡರ್, ಉಳಿಸಿಕೊಳ್ಳಲಾದ ಆಟಗಾರ
* ಸಂದೀಪ್ ನರ್ವಾಲ್, ಆಲ್ ರೌಂಡರ್, ಖರೀದಿಸಿದ ಬೆಲೆ 60 ಲಕ್ಷ ರೂ.
* ಮಂಜೀತ್ ಚಿಲ್ಲರ್, ಆಲ್ ರೌಂಡರ್, ಖರೀದಿಸಿದ ಬೆಲೆ 20 ಲಕ್ಷ ರೂ.

Story first published: Friday, September 3, 2021, 10:12 [IST]
Other articles published on Sep 3, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+