For Quick Alerts
ALLOW NOTIFICATIONS  
For Daily Alerts

PKL 2021: ಹರಾಜಿನ ಬಳಿಕ ಪುಣೇರಿ ಪಲ್ಟಾನ್ ಸಂಪೂರ್ಣ ತಂಡ

PKL 2021: Puneri Paltan Full squad for season 8 after PKL Auction

ನವದೆಹಲಿ: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್) 2021ರ ಆವೃತ್ತಿಗಾಗಿ ಪುಣೇರಿ ಪಲ್ಟಾನ್ ಫ್ರಾಂಚೈಸಿ ಆಟಗಾರರ ಹರಾಜಿನ ವೇಳೆ ದೊಡ್ಡ ಮೊತ್ತವನ್ನು ವ್ಯಯಿಸಿದೆ. ಆಗಸ್ಟ್ 29ರಂದು ಆರಂಭಗೊಂಡಿದ್ದ ಹರಾಜು ಪ್ರಕ್ರಿಯೆ ಆಗಸ್ಟ್ 31ರಂದು ಕೊನೆಗೊಂಡಿತ್ತು. ಮುಂಬೈಯಲ್ಲಿ ಹರಾಜು ನಡೆದಿತ್ತು. ಸುಮಾರು 400ಕ್ಕೂ ಅಧಿಕ ಆಟಗಾರರು ಹರಾಜು ಕಣದಲ್ಲಿದ್ದರು. 10ಕ್ಕೂ ಮಿಕ್ಕಿ ಆಟಗಾರರನ್ನು ಪುಣೇರಿ ಪಲ್ಟಾನ್ ಹರಾಜಿನ ವೇಳೆ ತನ್ನ ತೆಕ್ಕೆಗೆ ತಂದುಕೊಂಡಿದೆ.

ಹರಾಜಿನ ವೇಳೆ ಪುಣೇರಿ ಪಲ್ಟಾನ್ ಅತೀ ಹೆಚ್ಚು ಹಣ ವ್ಯಯಿಸಿದ್ದೆಂದರೆ ರೈಡರ್ ನಿತಿನ್ ತೋಮರ್‌ಗೆ. 61 ಲಕ್ಷಕ್ಕೆ ಪುಣೇರಿ ತೋಮರ್ ಅವರನ್ನು ಖರೀಸಿದೆ. ದ್ವಿತೀಯ ಅತ್ಯಧಿಕ ಮೊತ್ತವೆಂದರೆ ಡಿಫೆಂಡರ್ ಬಲದೇವ್ ಸಿಂಗ್‌ಗೆ ನೀಡಿದ 60 ಲಕ್ಷ ರೂ. ಮತ್ತು ವಿಶಾಲ್ ಭಾರದ್ವಾಜ್‌ಗೆ ನೀಡಲಾದ 60 ಲಕ್ಷ ರೂ. ಉಳಿದಂತೆ ಪುಣೇರಿ ಪಲ್ಟಾನ್ ಆರಿಸಿದ ಎಲ್ಲಾ ಆಟಗಾರರ ಪಟ್ಟಿ ಕೆಳಗಿದೆ.

ಕೆಪಿಎಲ್ 8ನೇ ಸೀಸನ್‌ಗೆ ಹರಾಜಿನ ವೇಳೆ ಪುಣೇರಿ ಪಲ್ಟಾನ್ ಆರಿಸಿದ ಆಟಗಾರರ ಪಟ್ಟಿ
* ನಿತಿನ್ ತೋಮರ್, ರೈಡರ್, ಖರೀದಿಸಿದ ಬೆಲೆ 61 ಲಕ್ಷ ರೂ.
* ಬಲದೇವ್ ಸಿಂಗ್, ಡಿಫೆಂಡರ್, ಖರೀದಿಸಿದ ಬೆಲೆ 60 ಲಕ್ಷ ರೂ.
* ವಿಶಾಲ್ ಭಾರದ್ವಾಜ್, ಡಿಫೆಂಡರ್, ಖರೀದಿಸಿದ ಬೆಲೆ 60 ಲಕ್ಷ ರೂ.
* ರಾಹುಲ್ ಚೌಧರಿ, ರೈಡರ್, ಖರೀದಿಸಿದ ಬೆಲೆ 40 ಲಕ್ಷ ರೂ.
* ಸೊಂಬೀರ್, ಡಿಫೆಂಡರ್, ಖರೀದಿಸಿದ ಬೆಲೆ, 34.5 ಲಕ್ಷ ರೂ.
* ವಿಕ್ಟರ್ ಒನ್ಯಂಗೊ ಒಬಿಯೆರೊ, ಆಲ್-ರೌಂಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ಹಾಡಿ ತಾಜಿಕ್, ಡಿಫೆಂಡರ್, ಉಳಿಸಿಕೊಳ್ಳಲಾದ ಆಟಗಾರ
* ಪವನ್ ಕುಮಾರ್ ಕಡಿಯನ್, ರೈಡರ್, ಉಳಿಸಿಕೊಳ್ಳಲಾದ ಆಟಗಾರ
* ಬಾಳಾಸಾಹೇಬ್ ಶಹಾಜಿ ಜಾಧವ್, ಡಿಫೆಂಡರ್, ಉಳಿಸಿಕೊಳ್ಳಲಾದ ಆಟಗಾರ
* ಪಂಕಜ್ ಮೋಹಿತ, ರೈಡರ್, ಉಳಿಸಿಕೊಳ್ಳಲಾದ ಆಟಗಾರ
* ಇ ಸುಬಾಶ್, ಆಲ್-ರೌಂಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ಕರಮ್‌ವಿರ್, ಡಿಫೆಂಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ವಿಶ್ವಾಸ್ ಎಸ್, ರೈಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ಸೌರವ್ ಕುಮಾರ್, ಡಿಫೆಂಡರ್, ಖರೀದಿಸಿದ ಬೆಲೆ 6 ಲಕ್ಷ ರೂ.
* ಅಬಿನೇಶ್ ನಾಡರಾಜನ್, ಡಿಫೆಂಡರ್, ಖರೀದಿಸಿದ ಬೆಲೆ 6 ಲಕ್ಷ ರೂ.
* ಸಂಕೇತ್ ಸಾವಂತ್, ಡಿಫೆಂಡರ್, ಉಳಿಸಿಕೊಳ್ಳಲಾದ ಆಟಗಾರ
* ಗೋವಿಂದ ಗುರ್ಜರ್, ಆಲ್-ರೌಂಡರ್, ಬೆಲೆ ಬಹಿರಂಗಪಡಿಸಿಲ್ಲ
* ಮೋಹಿತ್ ಗೋಯತ್, ರೈಡರ್, ಬೆಲೆ ಬಹಿರಂಗಪಡಿಸಿಲ್ಲ

Story first published: Thursday, September 2, 2021, 9:52 [IST]
Other articles published on Sep 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+