PKL 2022: ಬೆಂಗಳೂರು ಗೂಳಿಗಳ ಆರ್ಭಟಕ್ಕೆ ಶರಣಾದ ಜೈಪುರ ಪಿಂಕ್ ಪ್ಯಾಂಥರ್ಸ್

ಪ್ರೊ ಕಬಡ್ಡಿ ಲೀಗ್ ಸೀಸನ್ 9 (ಪಿಕೆಎಲ್ 9) ನ 48 ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಆರ್ಭಟಿಸಿತು. ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 37-31 ಪಾಯಿಂಟ್‌ಗಳಲ್ಲಿ ಜಯ ಸಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮುಂದುವರೆಸಿದೆ.
ಪುಣೆಯ ಬಾಲೆವಾಡಿಯ ಶ್ರೀ ಶಿವಚತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಕೊನೆಯರೆಗೂ ಎರಡೂ ತಂಡಗಳು ಗೆಲುವಿಗಾಗಿ ಸಮಬಲದ ಹೋರಾಟ ನಡೆಸಿದವು. ಆದರೆ ಅಂತಿಮ ಕ್ಷಣದಲ್ಲಿ ಬೆಂಗಳೂರು ಬುಲ್ಸ್‌ನ ವಿಕಾಶ್ ಖಂಡೋಲಾ ಜೈಪುರ ತಂಡವನ್ನು ಆಲೌಟ್ ಮಾಡುವ ಮೂಲಕ ಬುಲ್ಸ್‌ಗೆ 5 ಪಾಯಿಂಟ್‌ಗಳ ಮುನ್ನಡೆ ತಂದುಕೊಡುವ ಮೂಲಕ ಜಯವನ್ನು ಖಚಿತ ಪಡಿಸಿದರು.
ಅದಾದ ನಂತರ ಬುಲ್ಸ್ ಟ್ಯಾಕಲ್ ಪಾಯಿಂಟ್ ಪಡೆಯುವ ಮೂಲಕ ಪಾಯಿಂಟ್ ಅಂತರವನ್ನು 36-31ಕ್ಕೆ ಹೆಚ್ಚಿಸಿದರು. ಪಂದ್ಯದ ಅಂತಿಮ ರೈಡ್ ಮಾಡಿದ ಭರತ್ ಬುಲ್ಸ್‌ಗೆ ಮತ್ತೊಂದು ಪಾಯಿಂಟ್ ತಂದುಕೊಡುವ ಮೂಲಕ ಗೆಲುವಿನ ಅಂತರವನ್ನು 37-31ಕ್ಕೆ ಹೆಚ್ಚಿಸಿದರು.
ಜೈಪುರ ಪಿಂಕ್ ಪಾಂಥರ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಬೆಂಗಳೂರು ಬುಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಬುಲ್ಸ್ ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಜಯ ಸಾಧಿಸಿದ್ದು 2 ಪಂದ್ಯಗಳಲ್ಲಿ ಸೋಲನುಭವಿಸಿದೆ, ಒಂದು ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ.

ಮೊದಲಾರ್ಧದಲ್ಲಿ ಸಮಬಲ
ಭರತ್ 7ನೇ ನಿಮಿಷದಲ್ಲಿ ಅದ್ಭುತ ದಾಳಿ ನಡೆಸಿ ತನ್ನ ತಂಡವನ್ನು ಆಲ್ ಔಟ್ ಮಾಡಲು ಸಹಾಯ ಮಾಡಿ 10-3ರಲ್ಲಿ ಬೃಹತ್ ಮುನ್ನಡೆ ಸಾಧಿಸಿದರು. ರೈಡರ್‌ಗಳಾದ ನೀರಜ್ ನರ್ವಾಲ್, ಭರತ್ ಮತ್ತು ವಿಕಾಶ್ ಕಂಡೋಲಾ ಪಾಯಿಂಟ್ಸ್ ಗಳಿಸುತ್ತಲೇ ಇದ್ದರು ಬುಲ್ಸ್ ತನ್ನ ಮುನ್ನಡೆಯನ್ನು 16-6 ರಲ್ಲಿ ವಿಸ್ತರಿಸಿತು. ಆದರೆ, ಜೈಪುರದ ಭವಾನಿ ರಜಪೂತ್ 17 ನೇ ನಿಮಿಷದಲ್ಲಿ ಸೂಪರ್ ರೈಡ್ ನಡೆಸಿ ಉಭಯ ತಂಡಗಳ ನಡುವಿನ ಅಂತರವನ್ನು ಕಡಿಮೆ ಮಾಡಿದರು.
ಪ್ಯಾಂಥರ್ಸ್ ತಮ್ಮ ಹೋರಾಟವನ್ನು ಮುಂದುವರೆಸಿದರು, ಅರ್ಜುನ್ ದೇಶ್ವಾಲ್ ಕೂಡ ತಂಡ ಸೇರಿಕೊಂಡರು. ನಂತರ ಉತ್ತಮ ಆಟವಾಡಿದ ಪಿಂಕ್ ಪ್ಯಾಂಥರ್ಸ್ ಮೊದಲಾರ್ಧದ ಕೊನೆಯಲ್ಲಿ 19-19 ರಲ್ಲಿ ಸ್ಕೋರ್‌ಗಳನ್ನು ಸಮಗೊಳಿಸಿತು.

ಅಂತಿಮ ಕ್ಷಣದಲ್ಲಿ ಗೂಳಿಗಳ ಆರ್ಭಟ
ದ್ವಿತೀಯಾರ್ಧದಲ್ಲಿ ಎರಡೂ ಕಡೆಯವರು ಪರಸ್ಪರ ಪೈಪೋಟಿ ನಡೆಸಿದರು. ಜೈಪುರ ಮತ್ತು ಬೆಂಗಳೂರಿನ ರಕ್ಷಣಾ ವಿಭಾಗ ಉನ್ನತ ಫಾರ್ಮ್ ಪ್ರದರ್ಶಿಸಿದವು ಮತ್ತು ರೈಡರ್‌ಗಳನ್ನು ಟ್ಯಾಕಲ್ ಇದ್ದವು. ನಾಯಕ ಸುನಿಲ್ ಕುಮಾರ್ ಮತ್ತು ರೆಜಾ ಮಿರ್ಬಗೇರಿ ಪ್ಯಾಂಥರ್ಸ್ ಪರವಾಗಿ ಉತ್ತಮ ಆಟವಾಡಿದರೆ, ಡಿಫೆಂಡರ್‌ಗಳಾದ ಸೌರಭ್ ನಂದಲ್ ಮತ್ತು ಅಮನ್ ಬುಲ್ಸ್ ಪರವಾಗಿ ಮಿಂಚಿದರು.
36 ನೇ ನಿಮಿಷದಲ್ಲಿ ತಂಡಗಳು 27-27 ರಲ್ಲಿ ಸಮಬಲ ಸಾಧಿಸಿದ್ದವು. ಪ್ಯಾಂಥರ್ಸ್ ಡಿಫೆಂಡರ್‌ಗಳು ಭರತ್ ಅವರನ್ನು ಔಟ್ ಮಾಡಿದರು. ಆದರೂ, ಕಂಡೋಲಾ ಮಲ್ಟಿ-ಪಾಯಿಂಟ್ ದಾಳಿಯನ್ನು ನಡೆಸಿದರು ಮತ್ತು ಬುಲ್ಸ್ ತಂಡವು 30-27 ರಲ್ಲಿ ನಿರ್ಣಾಯಕ ಮೂರು ಪಾಯಿಂಟ್ ಮುನ್ನಡೆ ಸಾಧಿಸಲು ಸಹಾಯ ಮಾಡಿದರು.
ನಂತರ ಭರತ್ ಅವರನ್ನು ಸೂಪರ್ ಟ್ಯಾಕಲ್ ಮಾಡುವ ಮೂಲಕ ಪ್ಯಾಂಥರ್ಸ್ 30-30 ರಲ್ಲಿ ಸಮಗೊಳಿಸಿದರು. ಆದರೆ, ಕಂಡೋಲಾ ಪಂದ್ಯದ ಕೊನೆಯ ನಿಮಿಷದಲ್ಲಿ ಅದ್ಭುತವಾದ ಸೂಪರ್ ರೈಡ್ ಮಾಡಿದರು, ತಂಡವನ್ನು ಆಲೌಟ್ ಮಾಡುವ ಮೂಲಕ 5 ಅಂಕಗಳನ್ನು ಗಳಿಸಿ ಬುಲ್ಸ್‌ಗೆ ಜಯ ತಂದುಕೊಟ್ಟರು.

ಉಭಯ ತಂಡಗಳ ವಿವರ
ಬೆಂಗಳೂರು ಬುಲ್ಸ್ ತಂಡ
ರೈಡರ್ಸ್: ವಿಕಾಶ್ ಕಾಂಡೋಲಾ, ಹರ್ಮನ್ಜಿತ್ ಸಿಂಗ್, ನಾಗೇಶೋರ್ ತಾರು, ಲಾಲ್ ಮೊಹರ್ ಯಾದವ್, ನೀರಜ್ ನರ್ವಾಲ್, ಮೋರ್ ಜಿ ಬಿ, ಭರತ್
ಡಿಫೆಂಡರ್‌ಗಳು: ಸೌರಭ್ ನಂದಲ್, ಮಹೇಂದರ್ ಸಿಂಗ್, ಅಮನ್, ರಜನೇಶ್, ಯಶ್ ಹೂಡಾ, ಮಯೂರ್ ಜಗನ್ನಾಥ್ ಕದಮ್, ವಿನೋದ್ ಲಚ್ಮಯ್ಯ ನಾಯಕ್, ರೋಹಿತ್ ಕುಮಾರ್
ಆಲ್ ರೌಂಡರ್ಸ್: ರಾಹುಲ್ ಖಟಿಕ್, ಸಚಿನ್ ನರ್ವಾಲ್
ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ
ರೈಡರ್ಸ್: ಅಜಿತ್ ವಿ ಕುಮಾರ್, ಅರ್ಜುನ್ ದೇಶ್ವಾಲ್, ದೇವಾಂಕ್, ರಾಹುಲ್ ಚೌಧರಿ, ನಿತಿನ್ ಪನ್ವಾರ್, ನವನೀತ್, ಭವಾನಿ ರಜಪೂತ್
ಡಿಫೆಂಡರ್ಸ್: ಸುನಿಲ್ ಕುಮಾರ್, ಅಭಿಷೇಕ್ ಕೆಎಸ್, ಆಶಿಶ್, ಅಂಕುಶ್, ಸಾಹುಲ್ ಕುಮಾರ್, ದೀಪಕ್ ವೂಸನ್ ಕೆಒ, ಲಕ್ಕಿ ಶರ್ಮಾ, ರೆಜಾ ಮಿರ್ಬಘೇರಿ, ನಿತಿನ್ ಚಾಂಡೆಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications