PKL 2022: ಕೊನೆಯ ಹಂತದಲ್ಲಿ ಆರ್ಭಟಿಸಿದ ಗೂಳಿಗಳು, ಟೈನಲ್ಲಿ ಅಂತ್ಯವಾದ ರೋಚಕ ಪಂದ್ಯ

ಪ್ರೊ ಕಬಡ್ಡಿ ಲೀಗ್ ಸೀಸನ್ 9 (ಪಿಕೆಎಲ್ 9) ನಲ್ಲಿ ಭಾನುವಾರ ರಾತ್ರಿ ನಡೆದ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಪಾಟ್ನಾ ಪೈರೇಟ್ಸ್ ವಿರುದ್ಧ ರೋಚಕ ಟೈ ಮಾಡಿಕೊಂಡಿತು. ಮತ್ತೊಂದು ಪಂದ್ಯದಲ್ಲಿ, ಯುಪಿ ಯೋಧಾಸ್ ತಮಿಳ್ ತಲೈವಾಸ್ ತಂಡವನ್ನು ಸೋಲಿಸುವ ಮೂಲಕ ಗೆಲುವಿನ ಹಾದಿಗೆ ಮರಳಿತು. ಎರಡೂ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದವು.
ಪಂದ್ಯದ ಕೊನೆಯವರೆಗೆ ಪಾಟ್ನಾ ಪೈರೇಟ್ಸ್ ಪ್ರಾಬಲ್ಯ ಸಾಧಿಸಿತು, ಪಂದ್ಯದ ಕೊನೆಯವರೆಗೂ ಬೆಂಗಳೂರು ಬುಲ್ಸ್ ತನ್ನ ಭರವಸೆ ಕಳೆದುಕೊಳ್ಳಲಿಲ್ಲ. ಪಂದ್ಯದ ಕೊನೆಯ ನಿಮಿಷದಲ್ಲಿ ಪೈರೇಟ್ಸ್ ಮುನ್ನಡೆ ಸಾಧಿಸಿತು, ಆದರೆ ಬೆಂಗಳೂರು ಬುಲ್ಸ್ ಪಾಟ್ನಾ ಪೈರೇಟ್ಸ್ ತಂಡವನ್ನು ಆಲ್ ಔಟ್ ಮಾಡಿದರು ಮತ್ತು ರೋಹಿತ್ ಗುಲಿಯಾ ಅವರನ್ನು ಯಶಸ್ವಿಯಾಗಿ ಟ್ಯಾಕಲ್ ಮಾಡುವ ಮೂಲಕ 31-31ರಲ್ಲಿ ಸಮಬಲ ಸಾಧಿಸಿದರು.
9ನೇ ನಿಮಿಷದಲ್ಲಿ ಪಾಟ್ನಾ ಪೈರೇಟ್ಸ್ ತಂಡದ ಸಚಿನ್ ಉತ್ತಮವಾಗಿ ದಾಳೆ ನಡೆಸುವ ಮೂಲಕ 6-4ರಲ್ಲಿ ಮುನ್ನಡೆ ಸಾಧಿಸಿದರು. ವಿಕಾಶ್ ಕಂಡೋಲರನ್ನು ಟ್ಯಾಕಲ್ ಮಾಡುವ ಮೂಲಕ ಮನೀಷ್ ಪಾಟ್ನಾ ಪೈರೇಟ್ಸ್ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. 11ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ 12-5 ರಲ್ಲಿ ಬೃಹತ್ ಮುನ್ನಡೆ ಸಾಧಿಸಿತು.
ಆದರೆ, ಬೆಂಗಳೂರು ಬುಲ್ಸ್‌ನ ಭರತ್ 14 ನೇ ನಿಮಿಷದಲ್ಲಿ ಅದ್ಭುತ ದಾಳಿಯಲ್ಲಿ ಎರಡು ಪಾಯಿಂಟ್‌ಗಳನ್ನು ಪಡೆದರು. ಆದರೆ ಪೈರೇಟ್ಸ್ 16-7 ರಲ್ಲಿ ಪಂದ್ಯದಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದರು. ಪೈರೇಟ್ಸ್ ತಂಡವು ತನ್ನ ಉತ್ತಮ ಆಟವನ್ನು ಮುಂದುವರೆಸಿತು ಮತ್ತು ಮೊದಲಾರ್ಧದಲ್ಲಿ 19-10 ರಲ್ಲಿ ಮುನ್ನಡೆ ಸಾಧಿಸಿತು.
ದ್ವಿತೀಯಾರ್ಧದಲ್ಲಿ ಭರತ್ ಎರಡು ಪಾಯಿಂಟ್‌ಗಳನ್ನು ಪಡೆದರು ಮತ್ತು ಬುಲ್ಸ್ ದ್ವಿತೀಯಾರ್ಧದ ಆರಂಭದ ನಿಮಿಷಗಳಲ್ಲಿ ರೋಹಿತ್ ಗುಲಿಯಾರನ್ನು ಟ್ಯಾಕಲ್ ಮಾಡುವ ಮೂಲಕ ಪಾಯಿಂಟ್ ಪಡೆದುಕೊಂಡರು. ಆದರೂ, ಪೈರೇಟ್ಸ್ 22-15 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತ್ತು.

ಅಂತಿಮ ಕ್ಷಣದಲ್ಲಿ ಗೂಳಿಗಳ ಆರ್ಭಟ
ಪೈರೇಟ್ಸ್ ತಮ್ಮ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಿದ ಕಾರಣ ಆಲ್ ರೌಂಡರ್ ಮೊಹಮ್ಮದ್ರೇಜಾ ಶಾಡ್ಲೌಯಿ ಚಿಯಾನೆ ಕೂಡ ಪಕ್ಷಕ್ಕೆ ಸೇರ್ಪಡೆಗೊಂಡರು. 34ನೇ ನಿಮಿಷದಲ್ಲಿ ಪಾಟ್ನಾ 27-20ರಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಪೈರೇಟ್ಸ್‌ನ ರಕ್ಷಣೆಯನ್ನು ಭೇದಿಸುವುದು ಕಷ್ಟಕರವಾಗಿತ್ತು.
ಆದಾರೂ, ಅಂತಿಮ ಹಂತದಲ್ಲಿ ಬೆಂಗಳೂರು ಬುಲ್ಸ್ ತಿರುಗಿಬಿದ್ದಿತು. ಭರತ್ ಕೊನೆಯ ಕ್ಷಣದಲ್ಲಿ ಅದ್ಭುತ ದಾಳಿಯನ್ನು ನಡೆಸುವ ಮೂಲಕ 30-31 ಕ್ಕೆ ಕಡಿಮೆ ಮಾಡಿದರು. ಆದರೆ, ಕೊನೆಯ ಹಂತದಲ್ಲಿ ಗುಲಿಯಾರನ್ನು ಟ್ಯಾಕಲ್ ಮಾಡುವ ಮೂಲಕ 31-31ರಲ್ಲಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಬೆಂಗಳೂರು ಬುಲ್ಸ್ ಯಶಸ್ವಿಯಾಯಿತು. ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಅದ್ಭುತ ಹೋರಾಟ ಮಾಡಿದ ಬುಲ್ಸ್ ಸೋಲನ್ನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications