For Quick Alerts
ALLOW NOTIFICATIONS  
For Daily Alerts

PKL 2022: ಗೆಲುವಿನ ಓಟ ಮುಂದುವರೆಸಿದ ಗುಜರಾತ್ ಜೈಂಟ್ಸ್, ಯು ಮುಂಬಾ ವಿರುದ್ಧ ರೋಚಕ ಜಯ

PKL 2022: Gujarat Giants Beat U Mumba By 38-36 Points In Vivo Pro Kabaddi Season 9

ಪ್ರೊ ಕಬಡ್ಡಿ ಲೀಗ್ ಸೀಸನ್ 9 ರಲ್ಲಿ ಗುಜರಾತ್ ಜೈಂಟ್ಸ್ ಗೆಲುವಿನ ಓಟ ಮುಂದುವರೆಸಿದೆ. ಡಿಸೆಂಬರ್ 4ರಂದು ಭಾನುವಾರ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾಜ್ ಜೈಂಟ್ಸ್ ಯು ಮುಂಬಾ ವಿರುದ್ಧ 38-36 ಅಂಕಗಳ ರೋಚಕ ಜಯ ಸಾಧಿಸಿತು.

ಈ ಸೋಲಿನಿಂದ ಯು ಮುಂಬಾ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿದೆ. ಗುಜರಾತ್ ಜೈಂಟ್ಸ್ ಈಗಾಗಲೇ ಪ್ಲೇ ಆಫ್‌ ಸ್ಪರ್ಧೆಯಿಂದ ಹೊರ ಬಿದ್ದಿತ್ತು. ಪಂದ್ಯ ಆರಂಭವಾದ ಮೊದಲ 6 ನಿಮಿಷದಲ್ಲಿಯೇ ಯು ಮುಂಬಾ 6-3 ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಉತ್ತಮ ಆರಂಭವನ್ನೇ ಪಡೆಯಿತು. ಪ್ರಣಯ್ ರಾಯ್ ರೈಡಿಂಗ್ ಅಂಕಗಳನ್ನು ಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು.

ಹೈದರಾಲಿ ಎಕ್ರಮಿ ಜೈಂಟ್ಸ್‌ನ ಶಂಕರ್ ಗಡಾಯಿ, ಸೌರವ್ ಗುಲಿಯಾ ಮತ್ತು ಅರ್ಕಾಮ್ ಶೇಖ್ ಅವರನ್ನು ಔಟ್ ಮಾಡುವ ಮೂಲಕ 8ನೇ ನಿಮಿಷದಲ್ಲಿ ಯು ಮುಂಬಾ 15-4 ಅಂಕಗಳ ಮುನ್ನಡೆ ಪಡೆದುಕೊಂಡಿತು. ಈ ಮೂಲಕ ಯು ಮುಂಬಾ ಪಂದ್ಯದ ಮೇಲೆ ಸಾಕಷ್ಟು ಹಿಡಿತ ಸಾಧಿಸಿತು.

ಗುಜರಾತ್‌ನ ರಿಂಕು ನರ್ವಾಲ್ ಮತ್ತು ಸಂದೀಪ್ ಟ್ಯಾಕಲ್ ಪಾಯಿಂಟ್ ಪಡೆಯುವಲ್ಲಿ ಯಶಸ್ವಿಯಾದರೂ 12ನೇ ನಿಮಿಷದಲ್ಲಿ ಯು ಮುಂಬಾ 15-8 ಅಂಕಗಳ ಮುನ್ನಡೆನ್ನು ಸಾಧಿಸಿದರು.

ಯು ಮುಂಬಾ ತಂಡದ ಎಕ್ರಾಮಿ ತಮ್ಮ ಉತ್ತಮ ಆಟವನ್ನು ಮುಂದುವರೆಸಿದರು. ನಂತರ ಗುಜರಾತ್‌ನ ರಾಕೇಶ್‌ ಉತ್ತಮವಾದ ದಾಳಿ ಸಂಘಟಿಸುವ ಮೂಲಕ ಗುಜರಾತ್ ಜೈಂಟ್ಸ್ ತಂಡದ ಅಂಕಗಳ ಅಂತರವನ್ನು ಕಡಿಮೆ ಮಾಡಿದರು. ಆದರೆ, ರಾಹುಲ್ ಸೇತ್‌ಪಾಲ್ ಸೂಪರ್ ಟ್ಯಾಕಲ್ ಮಾಡುವ ಮೂಲಕ ಯು ಮುಂಬಾ ಮೊದಲಾರ್ಧದ ಅಂತ್ಯಕ್ಕೆ 20-13ರಲ್ಲಿ ಮುನ್ನಡೆ ಸಾಧಿಸಿತು.

PKL 2022: Gujarat Giants Beat U Mumba By 38-36 Points In Vivo Pro Kabaddi Season 9

ದ್ವಿತೀಯಾರ್ಧದಲ್ಲಿ ತಿರುಗಿಬಿದ್ದ ಜೈಂಟ್ಸ್

7 ಅಂಕಗಳ ಹಿನ್ನಡೆಯೊಂದಿಗೆ ದ್ವಿತೀಯಾರ್ಧವನ್ನು ಆರಂಭಿಸಿದ ಗುಜರಾತ್ ಜೈಂಟ್ಸ್ ಅತ್ಯುತ್ತಮ ಆಟ ಪ್ರದರ್ಶಿಸಿದರು. ಪ್ರತೀಕ್ ದಹಿಯಾ ಉತ್ತಮ ರೈಡ್ ಸಂಘಟಿಸುವ ಮೂಲಕ ತಂಡಕ್ಕೆ ಅಂಕಗಳನ್ನು ಗಳಿಸಿಕೊಟ್ಟರು. ಕೆಲವೇ ನಿಮಿಷಗಳಲ್ಲಿ ಯು ಮುಂಬಾ ತಂಡವನ್ನು ಆಲೌಟ್ ಮಾಡುವ ಮೂಲಕ ಅಂಕಗಳ ನಡುವಿನ ಅಂತರವನ್ನು 19-22 ಕ್ಕೆ ಕಡಿಮೆ ಮಾಡಿದರು.

ಯು ಮುಂಬಾ ಪರವಾಗಿ ರಾಣೆ ಮತ್ತೆ ಉತ್ತಮ ಆಟವಾಡಿ 24-20ಕ್ಕೆ ಅಂತರವನ್ನು ಹೆಚ್ಚಿಸಿದರು. ಪ್ರತೀಕ್ ದಹಿಯಾ ರೈಡಿಂಗ್ ಅಂಕಗಳನ್ನು ಗಳಿಸುವ ಮೂಲಕ ಅಂಕಗಳು 25-26ಕ್ಕೆ ಬಂದಿತು. 28ನೇ ನಿಮಿಷದಲ್ಲಿ ಜೈಂಟ್ಸ್ ಅಂಕಗಳನ್ನು 26-26ರಲ್ಲಿ ಸಮಬಲಗೊಳಿಸಲು ಯಶಸ್ವಿಯಾಯಿತು.

ಕೊನೆಯ ಕ್ಷಣಗಳಲ್ಲಿ ಉಭಯ ತಂಡಗಳು ಗೆಲುವಿಗಾಗಿ ರೋಚಕ ಹಣಾಹಣಿ ನಡೆಸಿದವು. 39ನೇ ನಿಮಿಷದಲ್ಲಿ ದಹಿಯಾ ಯು ಮುಂಬಾ ತಂಡವನ್ನು ಆಲೌಟ್ ಮಾಡುವ ಮೂಲಕ ಗುಜರಾತ್ ಜೈಂಟ್ಸ್ 37-34ರಲ್ಲಿ ಮುನ್ನಡೆ ಸಾಧಿಸಲು ನೆರವಾದರು. ನಂತರ ಎಚ್ಚರಿಕೆಯ ಆಟವಾಡಿದ ಜೈಂಟ್ಸ್ ಕೊನೆಯ ಕ್ಷಣದಲ್ಲಿ ಯಾವುದೇ ತಪ್ಪಿಗೆ ಆಸ್ಪದ ಕೊಡದೆ 38-36ರಲ್ಲೊ ರೋಚಕ ಜಯ ಸಾಧಿಸಿದರು.

Story first published: Sunday, December 4, 2022, 22:43 [IST]
Other articles published on Dec 4, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+