PKL 2022: ಬೆಂಗಳೂರು ಗೂಳಿಗಳಿಗೆ ಹರಿಯಾಣ ಸ್ಟೀಲರ್ಸ್ ಸವಾಲು

ಜಯದ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಬೆಂಗಳೂರು ಗೂಳಿಗಳಿಗೆ ನವೆಂಬರ್ 1ರಂದು ಹರಿಯಾಣ ಸ್ಟೀಲರ್ಸ್ ಸವಾಲು ಹಾಕಲು ಸಜ್ಜಾಗಿದೆ. ಪ್ರೊ ಕಬಡ್ಡಿ ಲೀಗ್ ಸೀಸನ್ 9ರ 53ನೇ ಪಂದ್ಯ ಪುಣೆಯ ಬಾಲೆವಾಡಿಯಲ್ಲಿರುವ ಶ್ರೀ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಪಂದ್ಯ ನಡೆಯಲಿದೆ.
ಸದ್ಯ ಜಯದ ನಾಗಾಲೋಟದಲ್ಲಿರುವ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಹರಿಯಾಣ ಸ್ಟೀಲರ್ಸ್ ಎಂಟನೇ ಸ್ಥಾನದಲ್ಲಿದ್ದು, ಅಸ್ಥಿರ ಪ್ರದರ್ಶನ ನೀಡುತ್ತಿದೆ. ಬೆಂಗಳೂರು ಬುಲ್ಸ್ ವಿರುದ್ಧ ಜಯ ಸಾಧಿಸುವ ಮೂಲಕ ಜಯದ ಹಾದಿಗೆ ಮರಳಲು ಪ್ರಯತ್ನಿಸುತ್ತದೆ.
ಹರಿಯಾಣ ಸ್ಟೀಲರ್ಸ್ ತಮ್ಮ ಕೊನೆಯ ಪಂದ್ಯದಲ್ಲಿ ಪುಣೇರಿ ಪಲ್ಟಾನ್ಸ್ ವಿರುದ್ಧ ಟೈ ಮಾಡಿಕೊಂಡಿತ್ತು. ಹರಿಯಾಣ ಸ್ಟೀಲರ್ಸ್ ಪ್ರಸ್ತುತ ಮೂರು ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಅದು ಇದುವರೆಗೂ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
ಬಲಿಷ್ಠ ಬೆಂಗಳೂರು ತಂಡದ ವಿರುದ್ಧ ದೊಡ್ಡ ಸವಾಲನ್ನು ಎದುರಿಸಲಿದೆ. ಬೆಂಗಳೂರು ಬುಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮುಂದುವರೆಸಿದೆ.

ಉತ್ತಮ ಪ್ರದರ್ಶನ ನೀಡಿದರಷ್ಟೆ ಗೆಲುವು
ಮೀಟು ಶರ್ಮಾ ಮತ್ತು ಮಂಜೀತ್ ಕ್ರಮವಾಗಿ 66 ಮತ್ತು 59 ರೇಡ್ ಪಾಯಿಂಟ್‌ಗಳೊಂದಿಗೆ ಹರಿಯಾಣ ಸ್ಟೀಲರ್ಸ್‌ನ ಪ್ರಮುಖ ರೈಡರ್‌ಗಳಾಗಿದ್ದಾರೆ. ಕೆ.ಪ್ರಪಂಜನ್ ಮತ್ತು ವಿನಯ್ ಅನುಭವಿ ಆಟಗಾರರಾಗಿದ್ದು, ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಬೇಕಿದೆ.
ರಕ್ಷಣಾ ವಿಭಾಗದಲ್ಲಿ ಜೈದೀಪ್ ದಹಿಯಾ ಮತ್ತು ಮೋಹಿತ್ ನಂದಲ್ ಕ್ರಮವಾಗಿ 22 ಮತ್ತು 19 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಿತಿನ್ ರಾವಲ್ 14 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಡಿಫೆನ್ಸ್‌ನಲ್ಲಿ ಪಾತ್ರವಹಿಸಿದ್ದರೆ, ಇರಾನ್ ಅಮಿರ್ಹೋಸೇನ್ ಬಸ್ತಾಮಿ 9 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಜೈದೀಪ್ ಮತ್ತು ಮೋಹಿತ್ ಭರತ್ ನೇತೃತ್ವದ ಗೂಳಿಗಳ ವಿಭಾಗವನ್ನು ಕಟ್ಟಿಹಾಕಲು ರಣತಂತ್ರ ರೂಪಿಸಬೇಕಾಗಿದೆ.
ಈ ತಂಡ ಟಿ20 ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆಯಲಿದೆ; ಭವಿಷ್ಯ ನುಡಿದ ಸೌರವ್ ಗಂಗೂಲಿ

ಬೆಂಗಳೂರು ಗೂಳಿಗಳ ಆರ್ಭಟ
ಬೆಂಗಳೂರು ಬುಲ್ಸ್ ಇದುವರೆಗೆ ಆಡಿದ ಒಂಬತ್ತು ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಸತತ ಜಯಗಳೊಂದಿಗೆ ಆತ್ಮವಿಶ್ವಾದಲ್ಲಿರುವ ಬುಲ್ಸ್ ಗೆಲುವಿನ ಸರಣಿಯನ್ನು ವಿಸ್ತರಿಸಲು ನೋಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಅನ್ನು 37-31 ರಿಂದ ಸೋಲಿಸಿದ ನಂತರ ಹರಿಯಾಣ ವಿರುದ್ಧದ ಪಂದ್ಯಕ್ಕೆ ಸಿದ್ಧವಾಗಿದ್ದಾರೆ.
ಬೆಂಗಳೂರು ಬುಲ್ಸ್‌ನ ಇಬ್ಬರು ಪ್ರಮುಖ ಆಟಗಾರರು ಭರತ್, ವಿಕಾಶ್ ಖಂಡೋಲಾ. ಭರತ್ ಈ ಸೀಸನ್‌ನಲ್ಲಿ ಒಟ್ಟು 102 ರೇಡ್ ಪಾಯಿಂಟ್ ಗಳಿಸಿದ್ದರೆ. ವಿಕಾಶ್ ಕಂಡೋಲಾ ಒಟ್ಟು 64 ರೇಡ್ ಪಾಯಿಂಟ್‌ಗಳೊಂದಿಗೆ ಭರತ್‌ಗೆ ಉತ್ತಮ ಸಾಥ್ ನೀಡಿದ್ದಾರೆ.
ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 9 ರೇಡ್ ಪಾಯಿಂಟ್ ಪಡೆಯುವ ಮೂಲಕ ವಿಕಾಶ್ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ತಮ್ಮ ಮಾಜಿ ತಂಡದ ವಿರುದ್ಧ ಕೂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ಡಿಫೆಂಡರ್‌ಗಳ ಉತ್ತಮ ಪ್ರದರ್ಶನ
ಬೆಂಗಳೂರು ಬುಲ್ಸ್‌ನ ಸೌರಭ್ ನಂದಲ್, ಅಮನ್ ಮತ್ತು ಮಹೇಂದರ್ ಸಿಂಗ್ ರಕ್ಷಣಾ ವಿಭಾಗ ಅವರ ವಿಶ್ವಾಸಾರ್ಹ ಡಿಫೆಂಡರ್ ಆಗಿದ್ದಾರೆ. ಸೌರಭ್ ನಂದಲ್ 31 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ರಕ್ಷಣಾ ವಿಭಾಗವನ್ನು ಮುನ್ನಡೆಸಿದ್ದಾರೆ. ಅಮನ್ ಮತ್ತು ಮಹೇಂದರ್ ಸಿಂಗ್ ಕ್ರಮವಾಗಿ 18 ಮತ್ತು 15 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ.
ಡಿಫೆಂಡರ್‌ಗಳು ಮತ್ತೊಮ್ಮೆ ಹರಿಯಾಣದ ಮಂಜೀತ್ ಮತ್ತು ತಂಡದ ವಿರುದ್ಧ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರುವ ಉತ್ಸಾಹದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications