ಪ್ರೊ ಕಬಡ್ಡಿ: ಸೆಮಿಫೈನಲ್‌ಗೆ ಅಂತ್ಯವಾಯಿತು ಬುಲ್ಸ್ ಹೋರಾಟ: ಫೈನಲ್ ಸುತ್ತಿಗೇರಿದ ಪ್ಯಾಂಥರ್ಸ್

ಅದ್ಭುತ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದು ಫೈನಲ್ ಸುತ್ತಿನ ಮೇಲೆ ಕಣ್ಣಿಟ್ಟಿದ್ದ ಬೆಂಗಳೂರು ಬುಲ್ಸ್ ತಂಡ ಸೆಮಿಫೈನಲ್ ಹಂತದಲ್ಲಿ ಎಡವಿದೆ. ಬಲಿಷ್ಠ ಪಿಂಕ್ ಪ್ಯಾಂಥರ್ಸ್ ವಿರುದ್ಧ ನಡೆದ ಸೆಮಿಫೈನಲ್ ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ ಬೆಂಗಳೂರು ಬುಲ್ಸ್ ತಂಡ ಆಘಾತಕಾರಿ ಸೋಲು ಅನುಭವಿಸಿದೆ. ಅಮೋಘ ಪ್ರದರ್ಶನ ನೀಡಿದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಬರೊಬ್ಬರಿ 20 ಅಂಕಗಳ ಅಂತರದಿಂದ ಗೆದ್ದು ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದೆ.
ಬೆಂಗಳೂರು ಬುಲ್ಸ್ ವಿರುದ್ಧ ಪಿಂಕ್ ಪ್ಯಾಂಥರ್ಸ್ ತಂಡ ಆರಂಭಿಕ ಹಂತದಿಂದಲೇ ಮೇಲುಗೈ ಸಾಧಿಸುತ್ತಾ ಸಾಗಿತ್ತು. ಆಕ್ರಮಣಕಾರಿ ಪ್ರದರ್ಶನ ನೀಡಿದ ಪ್ಯಾಂಥರ್ಸ್ ತಂಡ ಬುಲ್ಸ್ ಪಡೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಬುಲ್ಸ್ ಪಡೆ ರೈಡಿಂಗ್ ಹಾಗೂ ಟ್ಯಾಕಲ್ ಎರಡು ವಿಭಾಗದಲ್ಲಿಯೂ ಭಾರೀ ಹಿನ್ನಡೆ ಅನುಭವಿಸಿತು. ಹೀಗಾಗಿ ಮೊದಲಾರ್ಧದಲ್ಲಿ 15-24 ಅಂಕಗಳ ಅಂತರದಿಂದ ಹಿನ್ನಡೆ ಸಾಧಿಸಿತ್ತು. ಮೊದಾಲರ್ಧದಲ್ಲಿಯೇ ಪ್ಯಾಂಥರ್ಸ್ 9 ಅಂಕಗಳ ಲೀಡ್ ಪಡೆಯುವಲ್ಲಿ ಯಶಸ್ವಿಯಾಗಿತ್ತು.
ಇನ್ನು ಈ ಮುನ್ನಡೆಯನ್ನು ದ್ವಿತಿಯಾರ್ಧದಲ್ಲಿಯೂ ಮುಂದುವರಿಸುವಲ್ಲಿ ಪ್ಯಾಂಥರ್ಸ್ ಯಶಸ್ವಿಯಾಯಿತು. ಟ್ಯಾಕಲ್ ಹಾಗು ರೈಡಿಂಗ್ ಎರಡು ವಿಭಾಗದಲ್ಲಿಯೂ ಆಕ್ರಮಣಕಾರಿಯಾಗಿ ಮುನ್ನುಗ್ಗಿದ ಪ್ಯಾಂಥರ್ಸ್ ಯಾವ ಹಂತದಲ್ಲಿಯೂ ಬುಲ್ಸ್‌ಗೆ ಅವಕಾಶ ನೀಡಲೇ ಇಲ್ಲ. ಅಂತಿಮವಾಗಿ 29-49 ಅಂಕಗಳ ಅಂತರದಿಂದ ಬೆಂಗಳೂರು ಬುಲ್ಸ್ ತಂಡ ಸೋಲು ಅನುಭವಿಸಬೇಕಾಯಿತು.
ಈ ಸೋಲಿನಿಂದಿಗೆ ಬೆಂಗಳೂರು ಬುಲ್ಸ್ ತಂಡ ಸೆಮಿಫೈನಲ್ ಹಂತದಿಂದ ನಿರ್ಗಮಿಸಿದೆ. ಮತ್ತೊಂದೆಡೆ ಜೈಪಿರ್ ಪಿಂಗ್ ಪ್ಯಾಂಥರ್ಸ್ ತಂಡ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕೇರುವ ವಿಶ್ವಾಸದಲ್ಲಿದೆ. ಪ್ರೊ ಕಬಡ್ಡಿ ಲೀಗ್‌ನ ಆರಂಭಿಕ ಆವೃತ್ತಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications