PKL 2022: ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಬುಲ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಕಾಳಗಕ್ಕೆ ಸಜ್ಜು

ಪ್ರೊ ಕಬಡ್ಡಿ ಲೀಗ್ ಸೀಸನ್ 9 (ಪಿಕೆಎಲ್ 9) ನ 48 ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಭಾನುವಾರ ಬೆಂಗಳೂರು ಬುಲ್ಸ್ ವಿರುದ್ಧ ಸೆಣಸಲಿದೆ. ಉಭಯ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಅಗ್ರ ನಾಲ್ಕನೇ ಸ್ಥಾನದಲ್ಲಿದ್ದು, ಮತ್ತೊಂದು ಹೈ-ವೋಲ್ಟೇಜ್ ಪಂದ್ಯವನ್ನು ನಿರೀಕ್ಷಿಸಬಹುದಾಗಿದೆ.
ಅಕ್ಟೋಬರ್ 30 ರಂದು ಪುಣೆಯ ಬಾಲೆವಾಡಿಯ ಶ್ರೀ ಶಿವಚತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ ಈ ಸೀಸನ್‌ನಲ್ಲಿ ಇದುವರೆಗೆ ಒಟ್ಟು 8 ಪಂದ್ಯಗಳನ್ನಾಡಿದ್ದು, 5 ರಲ್ಲಿ ಜಯಗಳಿಸಿದ್ದು, ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ.
ಜೈಪುರ ಪಿಂಕ್ ಪ್ಯಾಂಥರ್ಸ್ ಜೈಪುರ ತಂಡ ತನ್ನ ಕೊನೆಯ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಸೋಲು ಅನುಭವಿಸಿತ್ತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ ಇದುವರೆಗೂ ಸ್ಥಿರವಾದ ಪ್ರದರ್ಶನ ನೀಡಲು ವಿಫಲವಾಗಿದೆ. ತಮಿಳ್ ತಲೈವಾಸ್ ವಿರುದ್ಧ ಅವರು ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ, ಉತ್ತಮ ಹೋರಾಟ ನೀಡುವಲ್ಲಿ ಸೋತಿದ್ದರು. ಆದರೆ, ಭಾನುವಾರದ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಬುಲ್ಸ್ ಓಟಕ್ಕೆ ಕಡಿವಾಣ ಹಾಕಲು ನೋಡುತ್ತಾರೆ.
ಬುಲ್ಸ್ ಮತ್ತು ಪ್ಯಾಂಥರ್ಸ್ ಇದುವರೆಗೂ ಪ್ರೊ ಕಬಡ್ಡಿ ಲೀಗ್‌ನಲ್ಲಿ 15 ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ ಏಳು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಸಮಬಲದ ಹೋರಾಟ ನೀಡಿವೆ. ಇನ್ನೊಂದು ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.

ಅರ್ಜುನ್ ದೇಶ್ವಾಲ್‌ಗೆ ಬೇಕಿದೆ ಉತ್ತಮ ಸಾಥ್
ಪ್ಯಾಂಥರ್ಸ್ ಪರವಾಗಿ ಅರ್ಜುನ್ ದೇಶ್ವಾಲ್ 81 ರೇಡ್ ಪಾಯಿಂಟ್‌ಗಳೊಂದಿಗೆ ಪ್ಯಾಂಥರ್ಸ್‌ನ ಅಗ್ರ ರೈಡರ್ ಆಗಿದ್ದಾರೆ. ರಾಹುಲ್ ಚೌಧರಿ ಮತ್ತು ವಿ ಅಜಿತ್ ಕುಮಾರ್ ಕ್ರಮವಾಗಿ 26 ಮತ್ತು 22 ರೇಡ್ ಪಾಯಿಂಟ್‌ಗಳೊಂದಿಗೆ ಅರ್ಜುನ್‌ಗೆ ಸಾಥ್ ನೀಡಿದ್ದಾರೆ. ಮುಂಬರುವ ಆಟದಲ್ಲಿ ಇವರಿಬ್ಬರೂ ಇನ್ನೂ ಹೆಚ್ಚಿನ ಅಂಕ ಗಳಿಸಲು ನೋಡುತ್ತಾರೆ.
ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ, ಸುನೀಲ್ ಕುಮಾರ್ ಮತ್ತು ಅಂಕುಶ್ ಕ್ರಮವಾಗಿ 24 ಮತ್ತು 26 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಪ್ಯಾಂಥರ್ಸ್ ಪರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸಾಹುಲ್ ಕುಮಾರ್ ಕೂಡ 13 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ರಕ್ಷಣೆಯಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.
PKL 2022: ಬೆಂಗಳೂರು ಗೂಳಿಗಳ ಡಿಚ್ಚಿಗೆ ಅಪ್ಪಚ್ಚಿಯಾದ ದಬಾಂಗ್ ಡೆಲ್ಲಿ

ಅಗ್ರಸ್ಥಾನಕ್ಕೇರಿದ ಬೆಂಗಳೂರು ಗೂಳಿಗಳು
ಬೆಂಗಳೂರು ಬುಲ್ಸ್ ಸದ್ಯ ಅದ್ಭುತ ಫಾರ್ಮ್‌ನಲ್ಲಿದೆ, ಶನಿವಾರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ ದಬಾಂಗ್ ಡೆಲ್ಲಿಯನ್ನು ಬಗ್ಗುಬಡಿಯುವ ಮೂಲಕ ಬೆಂಗಳೂರು ಬುಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಬುಲ್ಸ್ ಇದುವರೆಗೂ ಆಡಿರುವ ಎಂಟು ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಜಯ ಸಾಧಿಸಿದ್ದು 2 ಪಂದ್ಯಗಳಲ್ಲಿ ಸೋಲನುಭವಿಸಿದೆ, ಒಂದು ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ.
ಬುಲ್ಸ್ ಆಟಗಾರ ಭರತ್ 72 ರೇಡ್ ಅಂಕಗಳನ್ನು ಗಳಿಸಿದ್ದಾರೆ. 52 ರೇಡ್ ಪಾಯಿಂಟ್‌ಗಳೊಂದಿಗೆ ವಿಕಾಶ್ ಕಾಂಡೋಲಾ ತಂಡಕ್ಕೆ ಬೆಂಬಲ ರೈಡರ್ ಆಗಿದ್ದಾರೆ. ರಕ್ಷಣೆಯಲ್ಲಿ, ಸೌರಭ್ ನಂದಲ್, ಅಮನ್ ಮತ್ತು ಮಹೇಂದರ್ ಸಿಂಗ್ ಅವರ ಮೂವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಂದಲ್ 22 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರೆ, ಅಮನ್ ಮತ್ತು ಮಹೇಂದರ್ ಕ್ರಮವಾಗಿ 15 ಮತ್ತು 14 ಟ್ಯಾಕಲ್ ಪಾಯಿಂಟ್‌ಗಳನ್ನು ನಿರ್ವಹಿಸಿದ್ದಾರೆ.

ಉಭಯ ತಂಡಗಳ ವಿವರ
ಬೆಂಗಳೂರು ಬುಲ್ಸ್ ತಂಡ
ರೈಡರ್ಸ್: ವಿಕಾಶ್ ಕಾಂಡೋಲಾ, ಹರ್ಮನ್ಜಿತ್ ಸಿಂಗ್, ನಾಗೇಶೋರ್ ತಾರು, ಲಾಲ್ ಮೊಹರ್ ಯಾದವ್, ನೀರಜ್ ನರ್ವಾಲ್, ಮೋರ್ ಜಿ ಬಿ, ಭರತ್
ಡಿಫೆಂಡರ್‌ಗಳು: ಸೌರಭ್ ನಂದಲ್, ಮಹೇಂದರ್ ಸಿಂಗ್, ಅಮನ್, ರಜನೇಶ್, ಯಶ್ ಹೂಡಾ, ಮಯೂರ್ ಜಗನ್ನಾಥ್ ಕದಮ್, ವಿನೋದ್ ಲಚ್ಮಯ್ಯ ನಾಯಕ್, ರೋಹಿತ್ ಕುಮಾರ್
ಆಲ್ ರೌಂಡರ್ಸ್: ರಾಹುಲ್ ಖಟಿಕ್, ಸಚಿನ್ ನರ್ವಾಲ್
ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ
ರೈಡರ್ಸ್: ಅಜಿತ್ ವಿ ಕುಮಾರ್, ಅರ್ಜುನ್ ದೇಶ್ವಾಲ್, ದೇವಾಂಕ್, ರಾಹುಲ್ ಚೌಧರಿ, ನಿತಿನ್ ಪನ್ವಾರ್, ನವನೀತ್, ಭವಾನಿ ರಜಪೂತ್
ಡಿಫೆಂಡರ್ಸ್: ಸುನಿಲ್ ಕುಮಾರ್, ಅಭಿಷೇಕ್ ಕೆಎಸ್, ಆಶಿಶ್, ಅಂಕುಶ್, ಸಾಹುಲ್ ಕುಮಾರ್, ದೀಪಕ್ ವೂಸನ್ ಕೆಒ, ಲಕ್ಕಿ ಶರ್ಮಾ, ರೆಜಾ ಮಿರ್ಬಘೇರಿ, ನಿತಿನ್ ಚಾಂಡೆಲ್
ಆಲ್ ರೌಂಡರ್: ರಾಹುಲ್ ಗೋರಖ್ ಧನವಾಡೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications