For Quick Alerts
ALLOW NOTIFICATIONS  
For Daily Alerts

PKL 2022: ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ಯುಪಿ ಯೋಧಾಸ್

PKL 2022: UP Yoddhas Beat Bengal Warriors By 33-33 Points In Last Minute Thriller

ಸೋಮವಾರ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುಪಿ ಯೋಧಾಸ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 33-32 ಅಂಕಗಳ ರೋಚಕ ಜಯ ಸಾಧಿಸಿದೆ. ಈ ಜಯದ ಮೂಲಕ ಯುಪಿ ಯೋಧಾಸ್ ಪ್ಲೇಆಫ್ ಹಂತ ಪ್ರವೇಶಿಸಲು ಹತ್ತಿರವಾಗಿದೆ.

ಯುಪಿ ಯೋಧಾಸ್ ಸದ್ಯ 60 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಪಂದ್ಯದ ಬಹುತೇಕ ಸಮಯ ಯುಪಿ ಯೋಧಾಸ್ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಬೆಂಗಾಲ್ ವಾರಿಯರ್ಸ್ ಅಂತಿಮ ಕ್ಷಣದಲ್ಲಿ ಉತ್ತಮ ಹೋರಾಟ ನೀಡುವ ಮೂಲಕ ಅಂಕಗಳ ಅಂತರವನ್ನು ಕಡಿಮೆ ಮಾಡಿದರು. ಆದರೂ ಪ್ರದೀಪ್ ನರ್ವಾಲ್‌ ಉತ್ತಮ ಪ್ರದರ್ಶನದ ಮೂಲಕ ಯುಪಿ ಯೋಧಾಸ್ ತಂಡವನ್ನು ಜಯದ ದಡ ಸೇರಿಸಿದರು.

ಪಂದ್ಯದ ಆರಂಭದ ಕ್ಷಣಗಳಲ್ಲೇ ಪ್ರದೀಪ್ ನರ್ವಾಲ್ ರೈಡಿಂಗ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಯುಪಿ ಯೋಧಾಸ್ 5-3 ರಲ್ಲಿ ಮುನ್ನಡೆ ಸಾಧಿಸಿದರು. ನಂತರ ಬೆಂಗಾಲ್ ವಾರಿಯರ್ಸ್ ಸೂಪರ್ ಟ್ಯಾಕಲ್ ಮಾಡುವ ಮೂಲಕ 5-5 ರಲ್ಲಿ ಅಂಕಗಳನ್ನು ಸಮವಾಗಿಸಿದರು.ಇದಾದ ಕೆಲವೇ ಕ್ಷಣಗಳಲ್ಲಿ ಆಶಿಶ್ ಸಂಗ್ವಾನ್ ರೋಹಿತ್ ತೋಮರ್ ಅವರನ್ನು ಔಟ್ ಮಾಡಿದ ಕಾರಣ 9ನೇ ನಿಮಿಷದಲ್ಲಿ ವಾರಿಯರ್ಸ್ 7-6ರಲ್ಲಿ ಮುನ್ನಡೆ ಕಾಯ್ದುಕೊಂಡಿತು.

15ನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ ಯುಪಿ ಯೋಧಾಸ್ 13-10 ರಲ್ಲಿ ಮುನ್ನಡೆ ಸಾಧಿಸಿತು. ಮೊದಲಾರ್ಧದ ಅಂತ್ಯದ ವೇಳೆಗೆ ಯುಪಿ ಯೋಧಾಸ್ 19-11ಕ್ಕೆ ಅಂತರವನ್ನು ಹೆಚ್ಚಿಸಿತು.

PKL 2022: UP Yoddhas Beat Bengal Warriors By 33-33 Points In Last Minute Thriller

ಅಂತಿಮ ಹಂತದಲ್ಲಿ ಹೋರಾಡಿದ ಬೆಂಗಾಲ್ ವಾರಿಯರ್ಸ್

ದ್ವಿತೀಯಾರ್ಧದ ಆರಂಭದ ನಿಮಿಷದಲ್ಲಿ ವಾರಿಯರ್ಸ್ ತಂಡವನ್ನು ಆಲ್ ಔಟ್ ಮಾಡಿ ಯುಪಿ ಯೋಧಾಸ್ 22-11ರಲ್ಲಿ ಭಾರಿ ಮುನ್ನಡೆ ಸಾಧಿಸಿದರು. 24-13ರಲ್ಲಿ ಪ್ರಾಬಲ್ಯ ಮುಂದುವರಿಸಿದ ಯುಪಿ ತಂಡ 23ನೇ ನಿಮಿಷದಲ್ಲಿ ಮಣಿಂದರ್ ಸಿಂಗ್ ಅವರನ್ನು ಔಟ್ ಮಾಡಿದರು.

ಮಣಿಂದರ್ 35 ನೇ ನಿಮಿಷದಲ್ಲಿ ಉತ್ತಮ ದಾಳಿ ಮಾಡಿದರು, ಆದರೆ, ವಾರಿಯರ್ಸ್ 22-32 ರಲ್ಲಿ ತುಂಬಾ ಹಿಂದುಳಿದಿತ್ತು. ಆದರೂ ಛಲ ಬಿಡದ ವಾರಿಯರ್ಸ್ ಹೋರಾಡಿದರು, 39ನೇ ನಿಮಿಷದಲ್ಲಿ ಸೂಪರ್ ರೈಡ್ ಮೂಲಕ ಅಂತರವನ್ನು 29-32ಕ್ಕೆ ಕಡಿಮೆ ಮಾಡಿದರು.

ನಂತರ ನರ್ವಾಲ್ ರೈಡಿಂಗ್ ಮಾಡಲು ಹೋಗಿ ಔಟಾದರು, ಆದರೆ ತಂಡಕ್ಕೆ ಬೋನಸ್ ಅಂಕವನ್ನು ಗಳಿಸಿಕೊಟ್ಟರು. ಅಂತಿಮ ಸೆಕೆಂಡ್‌ಗಳಲ್ಲಿ ಯುಪಿ ಯೋಧಾಸ್ 33-31 ಮುಂದೆ ಇತ್ತು, ನಂತರ ವಾರಿಯರ್ಸ್ ಒಂದು ಅಂಕವನ್ನು ಪಡೆಯಲು ಯಶಸ್ವಿಯಾದರೂ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಯುಪಿ ಯೋಧಾಸ್ 33-32 ಪಾಯಿಂಟ್‌ಗಳಲ್ಲಿ ರೋಚಕ ಜಯ ಸಾಧಿಸಿದರು.

Story first published: Monday, November 28, 2022, 23:45 [IST]
Other articles published on Nov 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+