ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೋ ಕಬಡ್ಡಿ 2022: ಆಟಗಾರರ ಹರಾಜು ನೇರಪ್ರಸಾರ ಯಾವಾಗ, ಯಾವ ಚಾನೆಲ್‌ನಲ್ಲಿ? ಇಲ್ಲಿದೆ ಮಾಹಿತಿ

PKL 2022: When and where to watch PKL 2022 players auction live streaming?

ಭಾರತದ ಜನಪ್ರಿಯ ಕ್ರೀಡಾ ಲೀಗ್‌ಗಳಲ್ಲಿ ಒಂದಾದ ಪ್ರೋ ಕಬಡ್ಡಿ ಲೀಗ್‌ನ ಎಂಟು ಆವೃತ್ತಿಗಳು ಈಗಾಗಲೇ ಯಶಸ್ವಿಯಾಗಿ ಮುಗಿದಿದ್ದು, ಒಂಬತ್ತನೇ ಆವೃತ್ತಿ ಶುರುವಾಗುವುದಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಇನ್ನು ಈಗಾಗಲೇ ತಂಡಗಳು ಈಗಾಗಲೇ ತಮಗೆ ಬೇಕಾದ ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದು, ರಿಟೇನ್ ಆಗದೇ ಉಳಿದ ಆಟಗಾರರು, ಸೀನಿಯರ್ ಮಟ್ಟದ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ್ದ ಹಲವು ಕಬಡ್ಡಿ ಪಟುಗಳು ಈ ಬಾರಿಯ ಹರಾಜಿನಲ್ಲಿ ಹರಾಜಾಗಲಿದ್ದಾರೆ.

ಏಷ್ಯಾಕಪ್ 2022: ದಿನೇಶ್ ಕಾರ್ತಿಕ್‌ಗೆ ಸ್ಥಾನ, ಈ ಇಬ್ಬರು ಸ್ಟಾರ್ ಆಟಗಾರರು ಮನೆಗೆ!ಏಷ್ಯಾಕಪ್ 2022: ದಿನೇಶ್ ಕಾರ್ತಿಕ್‌ಗೆ ಸ್ಥಾನ, ಈ ಇಬ್ಬರು ಸ್ಟಾರ್ ಆಟಗಾರರು ಮನೆಗೆ!

ಇನ್ನು ದೇಶಿ ಕಬಡ್ಡಿ ಪಟುಗಳ ಜತೆಗೆ 8 ವಿವಿಧ ದೇಶಗಳ ಒಟ್ಟು 45 ಕಬಡ್ಡಿ ಪಟುಗಳು ಸಹ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, ಇದೊಂದು ಮೆಗಾ ಹರಾಜು ಎಂದೇ ಹೇಳಬಹುದಾಗಿದೆ. ಪ್ರದೀಪ್ ನರ್ವಾಲ್, ಪವನ್ ಸೆಹ್ರಾವತ್, ಫಜಲ್ ಅತ್ರಾಚಲಿ ಮತ್ತು ಅಭಿಷೇಕ್ ಸಿಂಗ್ ರೀತಿಯ ಹಲವು ಸ್ಟಾರ್ ಆಟಗಾರರೂ ಸಹ ಹರಾಜಿನ ಪಟ್ಟಿಯಲ್ಲಿ ಇರುವುದರಿಂದ ಹರಾಜಿನಲ್ಲಿ ಹಣದ ಹೊಳೆ ಹರಿಯಲಿದ್ದು, ಈ ಬಲಿಷ್ಟ ಆಟಗಾರರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ವಿವಿಧ ಫ್ರಾಂಚೈಸಿಗಳು ಮುಗಿಬೀಳುವುದು ಖಚಿತ.

CWG 2022: ಕ್ರಿಕೆಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ; ಪಂದ್ಯ ಯಾರ ವಿರುದ್ಧ, ಯಾವಾಗ?CWG 2022: ಕ್ರಿಕೆಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ; ಪಂದ್ಯ ಯಾರ ವಿರುದ್ಧ, ಯಾವಾಗ?

ಇನ್ನು ಫ್ರಾಂಚೈಸಿವೊಂದು ಹರಾಜಿನಲ್ಲಿ 4.4 ಕೋಟಿಯವರೆಗೂ ಹಣವನ್ನು ಖರ್ಚು ಮಾಡಲು ಅವಕಾಶವಿದ್ದು, ಹರಾಜಾಗುವ ಆಟಗಾರರನ್ನು ಎ, ಬಿ, ಸಿ ಹಾಗೂ ಡಿ ಕೆಟಗರಿಯ ಆಟಗಾರರು ಎಂದು ವಿಂಗಡಿಸಲಾಗಿದೆ. ಎ ಕೆಟಗರಿಯ ಆಟಗಾರರಿಗೆ 30 ಲಕ್ಷ, ಬಿ ಕೆಟಗರಿ ಆಟಗಾರರಿಗೆ 20 ಲಕ್ಷ, ಸಿ ಕೆಟಗರಿಯ ಆಟಗಾರರಿಗೆ 10 ಲಕ್ಷ ಹಾಗೂ ಡಿ ಕೆಟಗರಿಯ ಆಟಗಾರರಿಗೆ 6 ಲಕ್ಷ ಮೂಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಇನ್ನು ಈ ಹರಾಜು ಪ್ರಕ್ರಿಯೆ ಇಂದು ( ಆಗಸ್ಟ್ 5 ) ಆರಂಭಗೊಳ್ಳಲಿದ್ದು, ಹರಾಜಿನ ನೇರಪ್ರಸಾರವನ್ನು ಯಾವ ಚಾನೆಲ್‌ನಲ್ಲಿ ವೀಕ್ಷಿಸಬಹುದು ಎಂಬ ಮಾಹಿತಿ ಈ ಕೆಳಕಂಡಂತಿದೆ.

ನೇರಪ್ರಸಾರ

ನೇರಪ್ರಸಾರ

ಒಂಬತ್ತನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ನ ಆಟಗಾರರ ಹರಾಜಿ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.

ಬೆಂಗಳೂರು ಬುಲ್ಸ್ ಕೈಬಿಟ್ಟಿರುವ ಆಟಗಾರರ ಪಟ್ಟಿ

ಬೆಂಗಳೂರು ಬುಲ್ಸ್ ಕೈಬಿಟ್ಟಿರುವ ಆಟಗಾರರ ಪಟ್ಟಿ

ಡಾಂಗ್ ಜಿಯೋನ್ ಲೀ (ವಿದೇಶಿ), ಪವನ್ ಕುಮಾರ್ ಸೆಹ್ರಾವತ್, ಚಂದ್ರನ್ ರಂಜಿತ್, ಅಮಿತ್ ಶೆರಾನ್, ಅಂಕಿತ್, ವಿಕಾಸ್, ಸಚಿನ್, ಜೈದೀಪ್, ಮೋಹಿತ್ ಸೆಹ್ರಾವತ್, ಬಾಂಟಿ, ದೀಪಕ್ ನರ್ವಾಲ್, ನಸೀಬ್, ರೋಹಿತ್ ಸಿಂಗ್.

ಇತರೆ ತಂಡಗಳು ಬಿಟ್ಟ ಆಟಗಾರರು

ಇತರೆ ತಂಡಗಳು ಬಿಟ್ಟ ಆಟಗಾರರು

ಬೆಂಗಾಲ್ ವಾರಿಯರ್ಸ್: ಮೊಹಮ್ಮದ್ ಎಸ್ಮಾಯಿಲ್ ನಬಿಬಕ್ಷ್ (ವಿದೇಶಿ), ಅಬೋಜರ್ ಮೊಹಜರ್ ಮಿಘಾನಿ (ವಿದೇಶಿ), ರಾನ್ ಸಿಂಗ್, ರೋಹಿತ್, ಅಮಿತ್ ನಿರ್ವಾಲ್, ಸುಖೇಶ್ ಹೆಗ್ಡೆ, ತಪಸ್ ಪಾಲ್, ರಿಂಕು ನರ್ವಾಲ್, ರೋಹಿತ್ ಬನ್ನೆ, ಪರ್ವೀನ್ ಸತ್ಪಾಲ್, ಸಚಿನ್ ವಿಟ್ಲ, ವಿನೋದ್ ಕುಮಾರ್, ದರ್ಶನ್. ವಿಶಾಲ್ ಮಾನೆ, ವಿಜಿನ್ ತಂಗದುರೈ, ಸುಮಿತ್ ಸಿಂಗ್, ಆನಂದ್ ವಿ, ರಿಶಾಂಕ್ ದೇವಾಡಿಗ, ರವೀಂದ್ರ ರಮೇಶ್ ಕುಮಾವತ್.

ದಬಾಂಗ್ ಡೆಲ್ಲಿ ಕೆಸಿ: ಸಂದೀಪ್ ನರ್ವಾಲ್, ಜೋಗಿಂದರ್ ಸಿಂಗ್ ನರ್ವಾಲ್, ಬಲರಾಮ್, ವಿಕಾಶ್ ಡಿ, ಸುಮಿತ್ ಭೈನ್ಸ್ವಾಲ್, ಜೀವ ಕುಮಾರ್, ಮೋಹಿತ್ ಬೈನ್ಸ್ವಾಲ್, ನೀರಜ್ ನರ್ವಾಲ್, ಸುಶಾಂತ್ ಸೈಲ್, ನಿತಿನ್ ಪನ್ವಾರ್.


ಗುಜರಾತ್ ಜೈಂಟ್ಸ್: ಹಾದಿ ಓಷ್ಟೋರಾಕ್ (ವಿದೇಶಿ), ಸೊಲೇಮಾನ್ ಪಹ್ಲೆವಾನಿ (ವಿದೇಶಿ), ಪರ್ವೇಶ್ ಭೈನ್‌ವಾಲ್, ಸುನೀಲ್ ಕುಮಾರ್, ಗಿರೀಶ್ ಮಾರುತಿ ಎರ್ನಾಕ್, ಅಜಯ್ ಕುಮಾರ್, ರಾಕೇಶ್ ನರ್ವಾಲ್, ಪರ್ದೀಪ್ ಕುಮಾರ್, ಸುಮಿತ್, ವಿಶ್ವ್ ಚೌಧರಿ, ಅಂಕಿತ್, ರವೀಂದರ್ ಪಹಲ್, ದವೀಂದರ್ ಸಿಂಗ್, ಹರ್ಷಿತ್ ಯಾದವ್, ರಥನ್ ಕೆ, ಮಹೇಂದ್ರ ಗಣೇಶ್ ರಜಪೂತ್, ಹರ್ಮನ್‌ಜಿತ್ ಸಿಂಗ್, ಮಣಿಂದರ್ ಸಿಂಗ್, ಭುವನೇಶ್ವರ್ ಗೌರ್.

ಹರಿಯಾಣ ಸ್ಟೀಲರ್ಸ್: ಹಮೀದ್ ಮಿರ್ಜಾಯಿ ನಾಡರ್ (ವಿದೇಶಿ), ರೋಹಿತ್ ಗುಲಿಯಾ, ವಿಕಾಶ್ ಖಂಡೋಲಾ, ಆಶಿಶ್, ಅಜಯ್ ಘಂಘಾಸ್, ರಾಜೇಶ್ ನರ್ವಾಲ್, ವಿಕಾಸ್ ಜಗ್ಲಾನ್, ಶ್ರೀಕಾಂತ್ ತೆವ್ಥಿಯಾ, ಅಕ್ಷಯ್ ಕುಮಾರ್, ಸುರೇಂದರ್ ನಾಡಾ, ರಾಜೇಶ್ ಗುರ್ಜಾರ್, ಸುಧಾಕರ್ ಕ್ರಿಶಾಂತ್ ಕದಮ್, ಸವಿನ್ ಕುಮಾರ್, ರವಿ ಕುಮಾರ್.

ಜೈಪುರ ಪಿಂಕ್ ಪ್ಯಾಂಥರ್ಸ್: ದೀಪಕ್ ನಿವಾಸ್ ಹೂಡಾ, ಸಂದೀಪ್ ಕುಮಾರ್ ಧುಲ್, ನಿತಿನ್ ರಾವಲ್, ಬ್ರಿಜೇಂದ್ರ ಸಿಂಗ್ ಚೌಧರಿ, ವಿಶಾಲ್, ಸಚಿನ್ ನರ್ವಾಲ್, ಎಲವರಸನ್ ಎ, ಅಮಿತ್ ಹೂಡಾ, ಪವನ್ ಟಿಆರ್, ಅಶೋಕ್, ನವೀನ್, ಅಮಿತ್ ನಗರ್, ಸುಶೀಲ್ ಗುಲಿಯಾ.

ಪಾಟ್ನಾ ಪೈರೇಟ್ಸ್: ಡೇನಿಯಲ್ ಒಮೊಂಡಿ ಒಡಿಯಾಂಬೊ (ವಿದೇಶಿ), ಸಚಿನ್, ಸುನಿಲ್, ಗುಮಾನ್ ಸಿಂಗ್, ಮೋನು ಗೋಯತ್, ಪ್ರಶಾಂತ್ ಕುಮಾರ್ ರೈ, ಸಾಹಿಲ್ ಮಾನ್, ಬಾಲಾಜಿ ಡಿ, ಸುಂದರ್, ಸೌರವ್ ಗುಲಿಯಾ, ಸಂದೀಪ್, ಮನುಜ್, ಶುಭಂ ಶಿಂಧೆ, ಮೋಹಿತ್, ರಾಜವೀರಸಿನ್ಹ, ಪ್ರತಾಪ ರಾವ್ ಚವಾಣ್, ಸೆಲ್ವಮಣಿ ಕೆ.

ಪುಣೇರಿ ಪಲ್ಟಾನ್: ವಿಕ್ಟರ್ ಒನ್ಯಾಂಗೊ ಒಬಿರೊ (ವಿದೇಶಿ), ವಿಶಾಲ್ ಭಾರದ್ವಾಜ್, ನಿತಿನ್ ತೋಮರ್, ಇ ಸುಬಾಷ್, ಕರಂವೀರ್, ಚೇತನ್ ಎಸ್, ಬಾಬು ಮುರುಗಸನ್, ಬಲದೇವ್ ಸಿಂಗ್, ಸೌರವ್ ಕುಮಾರ್, ಬಾಳಾಸಾಹೇಬ್ ಶಹಾಜಿ ಜಾಧವ್, ಪವನ್ ಕುಮಾರ್ ಕಡಿಯಾನ್, ವಿಶ್ವಾಸ್ ಎಸ್, ರಾಹುಲ್ ಚೌಧರಿ.

ತಮಿಳ್ ತಲೈವಾಸ್: ಸುರ್ಜೀತ್ ಸಿಂಗ್, ಮಂಜೀತ್, ಸಾಗರ್ ಬಿ.ಕೃಷ್ಣ, ಸೌರಭ್ ತಾನಾಜಿ ಪಾಟೀಲ್, ಸಂತಾಪನಸೆಲ್ವಂ, ಸಾಹಿಲ್ ಸುರೇಂದರ್, ಅತುಲ್ ಎಂಎಸ್, ಭವಾನಿ ರಜಪೂತ್, ಕೆ.ಪ್ರಪಂಜನ್.

ತೆಲುಗು ಟೈಟಾನ್ಸ್: ಸುರಿಂದರ್ ಸಿಂಗ್, ಸಿದ್ಧಾರ್ಥ್ ಸಿರೀಶ್ ದೇಸಾಯಿ, ಸಂದೀಪ್ ಕಂಡೋಲಾ, ಆದರ್ಶ್ ಟಿ, ಸಿ. ಅರುಣ್, ಮನೀಶ್, ಆಕಾಶ್ ಚೌಧರಿ, ಆಕಾಶ್ ದತ್ತು ಅರ್ಸುಲ್, ರೋಹಿತ್ ಕುಮಾರ್, ಅಮಿತ್ ಚೌಹಾಣ್, ರಾಕೇಶ್ ಗೌಡ, ಗಲ್ಲಾ ರಾಜು.

ಯು ಮುಂಬಾ: ಫಝೆಲ್ ಅತ್ರಾಚಲಿ (ವಿದೇಶಿ), ಮೊಹ್ಸೆನ್ ಮಗ್ಸೌದ್ಲೌ ಜಾಫಾರಿ (ವಿದೇಶಿ), ಅಜಿತ್ ವಿ ಕುಮಾರ್, ಅಭಿಷೇಕ್ ಸಿಂಗ್, ಅಜಿಂಕ್ಯ ರೋಹಿದಾಸ್ ಕಪ್ರೆ, ಮೋನು, ಆಶಿಶ್ ಕುಮಾರ್ (ಸಾಂಗ್ವಾನ್), ಪಂಕಜ್, ಸುನಿಲ್ ಸಿದ್ಧಗವಲಿ, ಹರೇಂದ್ರ ಕುಮಾರ್, ಬಲ್ಜಿಂದರ್ ಸಿಂಗ್, ಅಜೀತ್, ರಾಹುಲ್ ರಾಣಾ , ಪ್ರತಾಪ್ ಎಸ್., ಜಶನ್ದೀಪ್ ಸಿಂಗ್, ನವನೀತ್.

ಯುಪಿ ಯೋಧಾಸ್: ಮೊಹಮ್ಮದ್ ತಘಿ ಪೈನ್ ಮಹಾಲಿ (ವಿದೇಶಿ), ಜೇಮ್ಸ್ ನಮಾಬಾ ಕಮ್ವೇಟಿ (ವಿದೇಶಿ), ಪರ್ದೀಪ್ ನರ್ವಾಲ್, ಶ್ರೀಕಾಂತ್ ಜಾಧವ್, ಗುರುದೀಪ್, ಬಿಂಟು ನರ್ವಾಲ್, ಗೌರವ್ ಕುಮಾರ್, ಅನಿಲ್ ಕುಮಾರ್, ಆಶಿಶ್ ನಗರ, ಅಂಕುಶ್, ಅಂಕಿತ್, ಸಾಹಿಲ್, ಆಜಾದ್ ಸಿಂಗ್, ಗುಲ್ವೀರ್ ಸಿಂಗ್.

Story first published: Friday, August 5, 2022, 17:31 [IST]
Other articles published on Aug 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X