PKL 2023 Auction: ಇರಾನ್‌ನ ಶಾದ್ಲೌಯಿ ಹಿಂದಿಕ್ಕಿ ಮತ್ತೊಮ್ಮೆ ಅತ್ಯಂತ ದುಬಾರಿ ಆಟಗಾರನಾದ 'ಪವನ್ ಸೆಹ್ರಾವತ್'
ಸೋಮವಾರ, ಅಕ್ಟೋಬರ್ 9ರಂದು ಮುಂಬೈನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ನ ಹರಾಜಿನಲ್ಲಿ ಇರಾನ್‌ನ ಕಬಡ್ಡಿ ಆಲ್‌ರೌಂಡರ್ ಮೊಹಮ್ಮದ್ರೇಜಾ ಶಾದ್ಲೌಯಿ ಅವರನ್ನು ಹಿಂದಿಕ್ಕಿ ಭಾರತದ ಪವನ್ ಸೆಹ್ರಾವತ್ ಇತಿಹಾಸ ಸೃಷ್ಟಿಸಿದರು.
ಭಾರತದ ಕಬಡ್ಡಿ ತಂಡದ ನಾಯಕ ಈವರೆಗಿನ ವಿವೋ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತ್ಯಂತ ದುಬಾರಿ ಆಟಗಾರರೆನಿಸಿದರು. ಪವನ್ ಸೆಹ್ರಾವತ್ ಅವರನ್ನು ತೆಲುಗು ಟೈಟಾನ್ಸ್ ಫ್ರಾಂಚೈಸಿ 2.61 ಕೋಟಿ (2,60,50,000) ರೂಪಾಯಿಗೆ ಖರೀದಿಸಿತು. ಬೆಂಗಳೂರು ಬುಲ್ಸ್ ಪವನ್ ಸೆಹ್ರಾವತ್‌ರನ್ನು ಖರೀದಿಸಲು ಬಿಡ್‌ನಲ್ಲಿ ಪ್ರಯತ್ನಪಟ್ಟರೂ, ನಂತರ ಹಿಂದೆ ಸರಿಯಿತು.

2022ರಲ್ಲಿ ಪವನ್ ಸೆಹ್ರಾವತ್ ಅವರನ್ನು ತಮಿಳ್ ತಲೈವಾಸ್ 2.26 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ, ಕೇವಲ ಒಂದು ಪಂದ್ಯ ಮಾತ್ರ ಆಡಲು ಸಾಧ್ಯವಾಯಿತು ಹಾಗೂ ಗಾಯದಿಂದ ಹೊರಬಿದ್ದರು. ಈ ವರ್ಷ ಅವರನ್ನು ತಮಿಳ್ ತಲೈವಾಸ್ ಬಿಡುಗಡೆಗೊಳಿಸಿತ್ತು.
ಇರಾನ್‌ನ ಆಲ್‌ರೌಂಡರ್ ಮೊಹಮ್ಮದ್ರೇಜಾ ಶಾದ್ಲೌಯಿ ಅವರು ಪವನ್ ಸೆಹ್ರಾವತ್ ಅವರ ದಾಖಲೆಯನ್ನು ಮುರಿದ ಕೇವಲ ಒಂದು ಗಂಟೆಯ ನಂತರ, ಭಾರತೀಯ ಆಟಗಾರ ಮತ್ತೊಮ್ಮೆ ದುಬಾರಿ ಆಟಗಾರನ ಪಟ್ಟವನ್ನು ಮರಳಿ ಪಡೆದನು.

ಮೊಹಮ್ಮದ್ರೇಜಾ ಶಾದ್ಲೌಯಿ ಅವರನ್ನು ಪುಣೇರಿ ಪಲ್ಟಾನ್ ತಂಡ ಪ್ರೊ ಕಬಡ್ಡಿ ಲೀಗ್‌ನ ಎರಡನೇ ದುಬಾರಿ ಮೊತ್ತ 2.35 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದೆ.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕಬಡ್ಡಿ ತಂಡಕ್ಕೆ ಚಿನ್ನದ ಪದಕವನ್ನು ಗೆದ್ದುಕೊಡುವಲ್ಲಿ ಪವನ್ ಸೆಹ್ರಾವತ್ ಪ್ರಮುಖ ಪಾತ್ರ ವಹಿಸಿದರು. ಭಾರತ ತಂಡವು ಫೈನಲ್‌ನಲ್ಲಿ ಇರಾನ್ ತಂಡವನ್ನು ರೋಚಕವಾಗಿ ಸೋಲಿಸಿತು.
2023ರ ಪ್ರೊ ಕಬಡ್ಡಿ ಲೀಗ್ ಹರಾಜಿಗೂ ಮುನ್ನ ಅತ್ಯಂತ ದುಬಾರಿ ಆಟಗಾರನಾಗುವ ಮೊತ್ತವನ್ನು ಪವನ್ ಸೆಹ್ರಾವತ್ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ವಾಸ್ತವವಾಗಿ, ಪವನ್ ಸೆಹ್ರಾವತ್ 2022ರ ಪಿಕೆಎಲ್ ಸಮಯದಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆದರೆ 2023ರಲ್ಲಿ ಭಾರತ ತಂಡಕ್ಕೆ ಅದ್ಭುತವಾಗಿ ಪುನರಾಗಮನ ಮಾಡಿದರು. ಪಿಕೆಎಲ್ ಸೀಸನ್ 8ರಲ್ಲಿ ಅವರ ಸಂಖ್ಯೆಗಳು ಅದ್ಭುತವಾಗಿದ್ದವು, ಬೆಂಗಳೂರು ಬುಲ್ಸ್ ಪರ ಆಡುವಾಗ ಅವರು 314 ರೈಡಿಂಗ್ ಅಂಕಗಳನ್ನು ಗಳಿಸಿದರು.
ಪ್ರೊ ಕಬಡ್ಡಿ 2023ರ ಹರಾಜಿನಲ್ಲಿ ಇತರ ದುಬಾರಿ ಖರೀದಿಗಳು
ಪವನ್ ಸೆಹ್ರಾವತ್ ಮತ್ತು ಮೊಹಮ್ಮದ್ರೇಜಾ ಶಾದ್ಲೌಯಿ ಹೊರತುಪಡಿಸಿ, ಮಣಿಂದರ್ ಸಿಂಗ್ ಕೂಡ ದೊಡ್ಡ ಮೊತ್ತದ ಒಪ್ಪಂದವನ್ನು ಪಡೆದುಕೊಂಡರು.
ಕಳೆದ ಕೆಲವು ಋತುಗಳ ನಂತರ ತಮ್ಮ ನಾಯಕನ ಸೇವೆಯನ್ನು ಮರಳಿ ಪಡೆಯಲು ಬೆಂಗಾಲ್ ವಾರಿಯರ್ಸ್ 2.12 ಕೋಟಿ ರೂಪಾಯಿಗೆ ಮಣಿಂದರ್ ಸಿಂಗ್ ಅವರನ್ನು ಖರೀದಿಸಿತು.
ಮತ್ತೊಂದೆಡೆ, ಫಜೆಲ್ ಅತ್ರಾಚಲಿ 1.60 ಕೋಟಿ ರೂಪಾಯಿಗೆ ಗುಜರಾತ್ ಜೈಂಟ್ಸ್ ತಂಡಕ್ಕೆ ಖರೀದಿಯಾದರು. ಇನ್ನು ಆಶು ಮಲಿಕ್ ದಬಾಂಗ್ ದೆಹಲಿ ತಂಡಕ್ಕೆ 96.25 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications