PKL 2023: ಗುಜರಾತ್ ಜೈಂಟ್ಸ್‌ಗೆ ಸತತ 2ನೇ ಗೆಲುವು; ತನ್ನ ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್‌ಗೆ ಸೋಲು!
ಭಾನುವಾರ, ಡಿಸೆಂಬರ್ 3ರಂದು ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನ ಅರೆನಾದಲ್ಲಿ ನಡೆದ 2023ರ ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್ 10) ನಾಲ್ಕನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಆತಿಥೇಯ ಗುಜರಾತ್ ಜೈಂಟ್ಸ್ ರೋಚಕ ಗೆಲುವು ದಾಖಲಿಸಿತು.
ಪಿಕೆಎಲ್ 10ನೇ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ 34-31 ಅಂಕಗಳ ಅಂತರದಿಂದ ಗೆಲ್ಲುವ ಮೂಲಕ ಗುಜರಾತ್ ಜೈಂಟ್ಸ್ ಸತತ ಎರಡನೇ ಜಯ ಸಾಧಿಸಿತು. ಇನ್ನು ತನ್ನ ಮೊದಲ ಪಂದ್ಯದಲ್ಲೇ ಹೋರಾಟ ನೀಡಿ ಸೋಲುವ ಮೂಲಕ ಬೆಂಗಳೂರು ಬುಲ್ಸ್ ಸೋಲಿನೊಂದಿಗೆ ಅಭಿಯಾನ ಆರಂಭಿಸಿತು.

ಸತತ ಎರಡು ದಿನಗಳಲ್ಲಿ ಗುಜರಾತ್ ಜೈಂಟ್ಸ್ ಎರಡನೇ ಗೆಲುವನ್ನು ಪಡೆಯಿತು. ಹೊಸ ಮತ್ತು ಅನುಭವಿ ನಾಯಕ ಫಾಜೆಲ್ ಅತ್ರಾಚಲಿ ಅವರ ನಾಯಕತ್ವದಲ್ಲಿ ಅದ್ಭುತ ಆರಂಭವನ್ನು ಪಡೆದ ಕಾರಣ, ಆತಿಥೇಯ ತಂಡದ ಪರವಾಗಿ ಪಂದ್ಯ ತಿರುಗಿಸಲು ಹಲವು ಬಾರಿ ರೋಚಕ ಆಟ ಪ್ರದರ್ಶಿಸಿದರು.
ಗುಜರಾತ್ ತಂಡಕ್ಕಾಗಿ ಮಾಡು ಇಲ್ಲವೇ ಮಡಿ ರೈಡ್‌ನಲ್ಲಿ ಸೋನು ಅವರು ಪಂದ್ಯದ ಕೊನೆಯ ರೇಡ್‌ನಲ್ಲಿ ಔಟಾಗುವ ಮುನ್ನ ತನ್ನ ತಂಡಕ್ಕೆ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಮಯ ಕಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications