ಪ್ರೊ ಕಬಡ್ಡಿ ಲೀಗ್ 2023: ಈ ಬಾರಿ ಕಣದಲ್ಲಿರುವ ಕನ್ನಡಿಗ ಆಟಗಾರರು; ಬೆಂಗಳೂರು ಬುಲ್ಸ್‌ನಲ್ಲಿ ಯಾರು?
ಕಳೆದ ಒಂದೂವರೆ ತಿಂಗಳ ಕಾಲ 2023ರ ಏಕದಿನ ಕ್ರಿಕೆಟ್ ವಿಶ್ವಕಪ್ನ ಮನರಂಜನೆ ಅನುಭವಿಸಿದ ಕ್ರೀಡಾಭಿಮಾನಿಗಳಿಗೆ, ಇದೀಗ ದೇಸಿ ಕ್ರೀಡೆ ಕಬಡ್ಡಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಬಂದಿದೆ.
ಡಿಸೆಂಬರ್ 2ರಿಂದ 10ನೇ ಆವೃತ್ತಿಯ 2023ರ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಗೆ ಅಹಮದಾಬಾದ್‌ನಲ್ಲಿ ಚಾಲನೆ ಸಿಕ್ಕಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ರೋಚಕ ಪೈಪೋಟಿ ನೀಡಲು ಸಜ್ಜಾಗಿ ಬಂದಿದೆ.
ಡಿಸೆಂಬರ್ 2ರಿಂದ 2024ರ ಫೆಬ್ರವರಿ 21ರವವರೆಗೂ ಅಂದರೆ, ಬರೊಬ್ಬರಿ ಮೂರು ತಿಂಗಳ ಕಾಲ ನಡೆಯಲಿರುವ ಕಬಡ್ಡಿ ಲೀಗ್ ಭರಪೂರ ಮನರಂಜನೆ ಹೊತ್ತು ತಂದಿದೆ. ಇದರ ಜೊತೆಗೆ ಸಾಕಷ್ಟು ಕುತೂಹಲ ಮೂಡಿಸಲಿದೆ. ಕೊರೊನಾ ಬಳಿಕ ಒಂದೇ ಸ್ಥಳದಲ್ಲಿ ಆಯೋಜಿಸಲಾಗಿದ್ದ ಟೂರ್ನಿ, ಕಳೆದ ಬಾರಿ ಮೂರು ತಾಣಗಳಲ್ಲಿ ಆಯೋಜಿಸಲಾಗಿತ್ತು.

ಈ ಬಾರಿಯ ಪಂದ್ಯಾವಳಿ ತವರು ಮತ್ತು ಎದುರಾಳಿ ತಂಡದ ಅಂಗಳದಲ್ಲಿ ಆಡಲು ಮರಳಲಿದೆ. 12 ಫ್ರಾಂಚೈಸಿಗಳು ತಮ್ಮ ತವರಿನ ಮೈದಾನಗಳಲ್ಲಿ ಸೆಣಸಾಟ ನಡೆಸಲಿವೆ.
12 ತಂಡಗಳು ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ತಲಾ 22 ಪಂದ್ಯಗಳನ್ನು ಆಡಲಿವೆ. ಅಂಕಪಟ್ಟಿಯ 6 ತಂಡಗಳು ಪ್ಲೇ ಆಫ್ಗೆ ಅರ್ಹತೆ ಪಡೆಯಲಿವೆ.
ಈ ಬಾರಿಯ ಕಬಡ್ಡಿ ಲೀಗ್ನಲ್ಲಿ 7 ಕನ್ನಡಿಗರು ಆಡುತ್ತಿದ್ದು, ರಾಜ್ಯದ ವಿವಿಧ ಭಾಗದ ನಿವಾಸಿಗಳಾದ ಇವರೆಲ್ಲರೂ ದಕ್ಷಿಣ ಕನ್ನಡದಲ್ಲಿ ತರಬೇತಿ ಪಡೆದು, ಅಭ್ಯಾಸ ಮಾಡಿದ್ದಾರೆ.
ಒಟ್ಟು 7 ಕನ್ನಡಿಗ ಕಬಡ್ಡಿ ಆಟಗಾರರು ಪಿಕೆಎಲ್ ಕಣದಲ್ಲಿ
ಬಹು ನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ನಲ್ಲಿ ಒಟ್ಟು 7 ಕರ್ನಾಟಕದ ಆಟಗಾರರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅವರೆಂದರೆ,
ಪ್ರಪಂಚನ್ - ಹರಿಯಾಣ ಸ್ಟೀಲರ್ಸ್
ರಕ್ಷಿತ್ - ಬೆಂಗಳೂರು ಬುಲ್ಸ್ - ರೈಟ್ ಕವರ್ ಡಿಫೆಂಡರ್
ಶಶಾಂಕ್ - ಜೈಪುರ್ ಪಿಂಕ್ ಪ್ಯಾಂಥರ್ಸ್ - ರೈಡರ್
ಅಭಿಷೇಕ್ - ಜೈಪುರ್ ಪಿಂಕ್ ಪ್ಯಾಂಥರ್ಸ್ - ಲೆಫ್ಟ್ ಕವರ್ ಡಿಫೆಂಡರ್
ರಂಜಿತ್ - ಪಾಟ್ನಾ ಪೈರೆಟ್ಸ್ - ರೈಡರ್
ವಿಶ್ವಾಸ್ - ಬೆಂಗಾಲ್ ವಾರಿಯರ್ಸ್ - ರೈಡರ್
ಗಗನ್ - ಯುಪಿ ಯೋಧಾಸ್ - ರೈಡರ್
ಇನ್ನು ಕರ್ನಾಟಕದ ಬಿಸಿ ರಮೇಶ್ ಅವರು ಪುಣೇರಿ ಪಲ್ಟಾನ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಜೀವಕುಮಾರ್ ಯು ಮುಂಬಾ ತಂಡದ ಸಹಾಯಕ ಕೋಚ್ ಸೇವೆ ಸಲ್ಲಿಸುತ್ತಿದ್ದಾರೆ.
ಬೆಂಗಳೂರು ಬುಲ್ಸ್ ತಂಡವು ಭಾನುವಾರ, ಡಿಸೆಂಬರ್ 4ರಂದು ನಡೆದ ನಾಲ್ಕನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ 34-31 ಅಂತರದಿಂದ ಸೋಲು ಕಂಡು ಅಭಿಯಾನ ಆರಂಭಿಸಿತು.
ಪಿಕೆಎಲ್ 10: ಒಟ್ಟು 12 ಚರಣಗಳು
ಅಹಮದಾಬಾದ್: ಡಿಸೆಂಬರ್ 2ರಿಂದ 7ರವರೆಗೆ
ಬೆಂಗಳೂರು: ಡಿಸೆಂಬರ್ 8ರಿಂದ 13ರವರೆಗೆ
ಪುಣೆ: ಡಿಸೆಂಬರ್ 15ರಿಂದ 20ರವರೆಗೆ
ಚೆನ್ನೈ: ಡಿಸೆಂಬರ್ 22ರಿಂದ 27ರವರೆಗೆ
ನೋಯ್ಡಾ: ಡಿಸೆಂಬರ್ 29ರಿಂದ ಜನವರಿ 3ರವರೆಗೆ
ಮುಂಬೈ: ಜನವರಿ 5ರಿಂದ 10ರವರೆಗೆ
ಜೈಪುರ: ಜನವರಿ 12ರಿಂದ 17ರವರೆಗೆ
ಹೈದರಾಬಾದ್: ಜನವರಿ 19ರಿಂದ 24ರವರೆಗೆ
ಪಾಟ್ನಾ: ಜನವರಿ 26ರಿಂದ 31ರವರೆಗೆ
ದೆಹಲಿ: ಫೆಬ್ರವರಿ 2ರಿಂದ 7ರವರೆಗೆ
ಕೋಲ್ಕತ್ತಾ: ಫೆಬ್ರವರಿ 9ರಿಂದ 14ರವರೆಗೆ
ಪಂಚಕುಲ: ಫೆಬ್ರವರಿ 16ರಿಂದ 21ರವರೆಗೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications