PKL 2025: ರಾಕೇಶ್ vs ಭರತ್ ಆಲ್‌ರೌಂಡರ್ ಪ್ರದರ್ಶನದ ಮೇಲೆ ಎಲ್ಲರ ಚಿತ್ತ!
ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್) ಕಳೆದ ಮೂರು ಆವೃತ್ತಿಗಳಿಂದ ಗುಜರಾತ್ ಜೈಂಟ್ಸ್ ಮತ್ತು ಬೆಂಗಳೂರು ಬುಲ್ಸ್ ತಂಡಗಳ ಪರ ರಾಕೇಶ್ ಹಾಗು ಭರತ್ ಅದ್ಭುತ ಆಲ್‌ರೌಂಡರ್ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಇಬ್ಬರು ಕೂಡ ಅತ್ಯಂತ ವಿಶ್ವಾಸಾರ್ಹ ರೈಡರ್‌ಗಳಾಗಿ ಹೊರಹೊಮ್ಮಿದ್ದಾರೆ.
ಕಳೆದ ಋತುವಿನಲ್ಲಿ ರಾಕೇಶ್ ಮತ್ತು ಭರತ್ ತಮ್ಮ ಆಟದಿಂದ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಕೇವಲ ರೈಡ್ ಮೂಲಕ ಅಂಕ ಗಳಿಸುವುದಷ್ಟೇ ಅಲ್ಲದೆ, ತಮ್ಮ ಅಂಗಳಕ್ಕೆ ನುಗ್ಗಿದ ರೈಡರ್‌ಗಳನ್ನು ಟ್ಯಾಕಲ್ ಮಾಡುವಲ್ಲಿಯೂ ಯಶಸ್ವಿಯಾಗಿದ್ದರು.

ಈ ಬಾರಿ ಭರತ್ ಯುಪಿ ಯೋಧಾಸ್ ತಂಡ ಸೇರಿಕೊಂಡಿದ್ದು, ರಾಕೇಶ್ ಗುಜರಾತ್ ಜೈಂಟ್ಸ್ ತಂಡದಲ್ಲೇ ಉಳಿದಿದ್ದಾರೆ. ಹೀಗಾಗಿ ಮತ್ತೊಮ್ಮೆ ಈ ಇಬ್ಬರು ಆಲ್‌ರೌಂಡರ್‌ಗಳು ಪೈಪೋಟಿಯನ್ನ ಕಬಡ್ಡಿ ಪ್ರೇಮಿಗಳು ಕಣ್ತುಂಬಿಕೊಳ್ಳಬಹುದಾಗಿದೆ. ಪಿಕೆಎಲ್ 2023ರಲ್ಲಿ ಈ ಇಬ್ಬರು ಆಲ್‌ರೌಂಡರ್‌ಗಳು ಹೇಗೆ ಪ್ರದರ್ಶನ ನೀಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ರಾಕೇಶ್ vs ಭರತ್
ರಾಕೇಶ್ ಗುಜರಾತ್ ಜೈಂಟ್ಸ್ ತಂಡದ ಉದಯೋನ್ಮುಖ ಆಟಗಾರನಾಗಿ ಮಿಂಚುತ್ತಿದ್ದಾರೆ. ಪ್ರೊ ಕಬಡ್ಡಿ ಲೀಗ್ ಸೀಸನ್ 10ರಲ್ಲಿ ಅವರು ಎರಡನೇ ಅತಿಹೆಚ್ಚು ಅಂಕಗಳ ಪಡೆದ ಆಟಗಾರರಾಗಿದ್ದಾರೆ. 21 ಪಂದ್ಯಗಳಲ್ಲಿ ಜೈಂಟ್ಸ್‌ಗಾಗಿ 114 ಅಂಕಗಳನ್ನು ಗಳಿಸಿದ್ದಾರೆ.
ಆದರೆ ಭರತ್ ಬೆಂಗಳೂರು ಬುಲ್ಸ್‌ನ ಆಧಾರ ಸ್ತಂಭವಾಗಿದ್ದರು. ಆದರೆ ಅವರನ್ನು ಈ ಬಾರಿ ಮೆಗಾ ಹರಾಜಿನಲ್ಲಿ ಬುಲ್ಸ್ ಉಳಿಸಿಕೊಳ್ಳಲಿಲ್ಲ. ಇದರ ಲಾಭ ಪಡೆದ ಯುಪಿ ಯೋಧಾಸ್ ತನ್ನ ತೆಕ್ಕೆ ಹಾಕಿಕೊಂಡಿತ್ತು. ಕಳೆದ ಋತುವಿನಲ್ಲಿ ಅವರು ಆಡಿದ 18 ಪಂದ್ಯಗಳಲ್ಲಿ 109 ಅಂಕಗಳನ್ನು ಪಡೆದಿದ್ದರು.
ಯಾರ ರೈಡ್ ಬೆಸ್ಟ್?
ರಾಕೇಶ್ ಅವರು ಪಿಕೆಎಲ್ 10ನೇ ಆವೃತ್ತಿಯಲ್ಲಿ ಗುಜರಾತ್ ತಂಡದ ಪ್ರಮುಖ ರೈಡ್ ಆಗಿದ್ದಾರೆ. ಎದುರಾಳಿ ಅಂಗಳಕ್ಕೆ ರೈಡಗೆ ಕಳುಹಿಸಿದಾಗಲೆಲ್ಲಾ ನಿರ್ಣಾಯಕ ಅಂಕಗಳನ್ನು ಗಳಿಸಿದ್ದಾರೆ. ಕಳೆದ ಬಾರಿ ಅವರು 243 ರೈಡ್‌ಗಳಲ್ಲಿ 28 ಬೋನಸ್ ಸೇರಿದಂತೆ 108 ರೇಡ್ ಅಂಕಗಳನ್ನು ಕಲೆ ಹಾಕಿದ್ದಾರೆ. ಎರಡು ಸೂಪರ್ ರೈಡ್‌ಗಳು ಮತ್ತು ಐದು ಸೂಪರ್ 10 ಗಳೊಂದಿಗೆ ತಮ್ಮ ರೈಡಿಂಗ್ ಪರಾಕ್ರಮವನ್ನು ತೋರಿಸಿದ್ದಾರೆ.
ಮತ್ತೊಂದೆಡೆ, ಭರತ್ ಋತುವಿನ ಉದ್ದಕ್ಕೂ ಬೆಂಗಳೂರು ಬುಲ್ಸ್‌ಗೆ ಸ್ಟಾರ್ ರೈಡ್ ಆಗಿ ಗುರುತಿಸಿಕೊಂಡಿದ್ದರು. ಅತಿ ಹೆಚ್ಚು ಭಾರೀ ಡು ಆರ್ ಡೈ ರೈಡ್‌ಗಳಲ್ಲಿ ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅವರು ಮೂರು ಸೂಪರ್ ರೈಡ್‌ಗಳು ಮತ್ತು ನಾಲ್ಕು ಸೂಪರ್ 10 ಗಳ ನೆರವಿನಿಂದ 103 ರೇಡ್ ಪಾಯಿಂಟ್‌ಗಳನ್ನು ಗಳಿಸಿದ್ದರು. ಇದರಲ್ಲಿ 30 ಬೋನಸ್ ಅಂಕಗಳು ಸೇರಿವೆ.
ಟ್ಯಾಕಲ್ ಪ್ರದರ್ಶನ
ರೇಡಿಂಗ್ ವಿಭಾಗಕ್ಕೆ ಹೆಚ್ಚಿನ ಕೊಡುಗೆ ನೀಡಿದ ಹೊರತಾಗಿಯೂ, ರಾಕೇಶ್ ಮತ್ತು ಭರತ್ ಟ್ಯಾಕಲ್‌ನಲ್ಲಯೂತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ರಾಕೇಶ್ ಮತ್ತು ಭರತ್ ತಮ್ಮ ತಮ್ಮ ತಂಡಗಳಿಗೆ ತಲಾ ಆರು ಟ್ಯಾಕಲ್ ಪಾಯಿಂಟ್‌ಗಳನ್ನು ಸೇರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications