ಪ್ರೊ ಕಬಡ್ಡಿ ಸೀಸನ್ 7: ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ಕಣಕ್ಕೆ

ಹೊಸದಿಲ್ಲಿ, ಜೂನ್ 21: ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಜುಲೈ 20ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ಮತ್ತು ತೆಲುಗು ಟೈಟನ್ಸ್ ತಂಡಗಳು ಪೈಪೋಟಿ ನಡೆಸಲಿವೆ ಎಂದು ಟೂರ್ನಿಯ ಸಂಘಟಕರು ಶುಕ್ರವಾರ ತಿಳಿಸಿದ್ದಾರೆ.
ಟೂರ್ನಿಯ ಮೊದಲ ಚರಣ ಹೈದರಾಬಾದ್‌ನಲ್ಲಿ ಆರಂಭವಾಗಲಿದ್ದು, ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನ ಪಂದ್ಯದಲ್ಲಿ ತೆಲುಗು ಟೈಟನ್ಸ್ ಮತ್ತು ಯು ಮುಂಬಾ ಪೈಪೋಟಿ ನಡೆಸಲಿವೆ ಎಂದು ಪಿಕೆಎಲ್ ಸಂಘಟಕರಾದ ಮಷಾಲ್ ಸ್ಪೋರ್ಟ್ಸ್ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.
ಟೂರ್ನಿಯ ಮೊದಲ ದಿನದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ಮತ್ತು ಮೂರು ಬಾರಿಯ ಚಾಂಪಿಯನ್ಸ್ ಪಟನಾ ಪೈರೇಟ್ಸ್ ತಂಡಗಳು ಪೈಪೋಟಿ ನಡೆಸಲಿವೆ. ಸಂಘಟಕರ ಪ್ರಕಾರ ಲೀಗ್ ಹಂತದಲ್ಲಿ ಎಲ್ಲಾ ತಂಡಗಳು ಎರಡು ಬಾರಿ ಮುಖಾಮುಖಿಯಾಗಲಿವೆ. ಇದರಲ್ಲಿ ಅಗ್ರ 6 ತಂಡಗಳು ಪ್ಲೇ ಆಫ್ಸ್ ಹಂತಕ್ಕೇರಲಿವೆ. ಈ ಬಾರಿಯೂ ಒಟ್ಟು 12 ತಂಡಗಳು ಕಣದಲ್ಲಿದ್ದು, ಪ್ರಶಸ್ತಿ ಗೆಲುವಿಗಾಗಿ ಪೈಪೋಟಿ ನಡೆಸಲಿವೆ.
ಇದೇ ವೇಳೆ ಬೆಂಗಳೂರು ಬುಲ್ಸ್, ತೆಲುಗು ಟೈಟನ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ತಮ್ಮ ತವರು ನೆಲದ ಪಂದ್ಯಗಳನ್ನು ಆಡಲು ಸ್ಥಳೀಯ ಕ್ರೀಡಾಂಗಣಗಳಿಂದ ಅನುಮತಿ ಪಡೆಯಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ. ಎಲ್ಲಾ ಪಂದ್ಯಗಳು ಈ ಬಾರಿ ರಾತ್ರಿ 7:30ಕ್ಕೆ ಆರಂಭವಾಗಲಿದ್ದು, ಅಕ್ಟೋಬರ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications