ಐಪಿಎಲ್ 11 ಆಯ್ತು, ಪಿಕೆಎಲ್ 6ಗೆ ಸಜ್ಜಾಗಿ, ಹರಾಜು ಲೈವ್ ನೋಡಿ

ಮುಂಬೈ, ಮೇ 30: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 11 ಮುಕ್ತಾಯವಾದ ಬಳಿಕ ಮತ್ತೊಂದು ಜನಪ್ರಿಯ ಕ್ರೀಡಾ ಲೀಗ್ ಆರಂಭಕ್ಕೆ ಮುನ್ನುಡಿ ಬರೆಯಲಾಗುತ್ತಿದೆ. ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಸೀಸನ್ 6ರ ಹರಾಜು ಪ್ರಕ್ರಿಯೆ ಮೇ 30 ಹಾಗೂ ಮೇ 31ರಂದು ನಡೆಯಲಿದೆ.
ಒಟ್ಟು 422 ಆಟಗಾರರು ಹರಾಜಿಗೆ ಒಳಪಡಲಿದ್ದಾರೆ. 58 ವಿದೇಶಿ ಆಟಗಾರರು, 87 ಆಟಗಾರರು(18 ರಿಂದ 22 ವರ್ಷ ವಯೋಮಿತಿ) ಫ್ಯೂಚರ್ ಕಬಡ್ಡಿ ಹೀರೋಸ್ ಕಾರ್ಯಕ್ರಮ(FKH) ದಡಿಯಲ್ಲಿ ಹರಾಜಿಗೆ ಲಭ್ಯರಾಗಿದ್ದಾರೆ.
ಯೂ ಮುಂಬಾ, ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಯುಪಿ ಯೋಧಾ ಫ್ರಾಂಚೈಸಿಗಳು ತಮ್ಮ ತಂಡವನ್ನು ಸಂಪೂರ್ಣ ಬದಲಾಯಿಸಲು ಚಿಂತಿಸಿವೆ.9 ಫ್ರಾಂಚೈಸಿಗಳು 21 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದಾರೆ.
ವಿದೇಶಿ ಆಟಗಾರರ ಪೈಕಿ ಇರಾನ್, ಬಾಂಗ್ಲಾದೇಶ, ಜಪಾನ್, ಕೀನ್ಯಾ, ದಕ್ಷಿಣ ಕೊರಿಯಾ, ಮಲೇಷ್ಯಾ ಹಾಗೂ ಶ್ರೀಲಂಕಾದ ಆಟಗಾರರು ಹರಾಜಿಗೆ ಲಭ್ಯವಾಗಿದ್ದಾರೆ.
ಆಟಗಾರರನ್ನು ನಾಲ್ಕು ವಿಭಾಗವಾಗಿ ವಿಂಗಡಿಸಲಾಗಿದೆ.
ಎ ವಿಭಾಗ: 20 ಲಕ್ಷ ರು
ಬಿ ವಿಭಾಗ : 12 ಲಕ್ಷ ರು
ಸಿ ವಿಭಾಗ : 8 ಲಕ್ಷ ರು
ಡಿ ವಿಭಾಗ : 5 ಲಕ್ಷ ರು
ಹೊಸ ಆಟಗಾರರಿಗೆ : 6.6 ಲಕ್ಷ ರು ನಿಗದಿಯಾಗಿದೆ.
ಪ್ರತಿ ತಂಡದಲ್ಲಿ 18 ರಿಂದ 25 ಆಟಗಾರರಿರಬಹುದು, ಒಂದು ತಂಡದಲ್ಲಿ ಗರಿಷ್ಠ 2 ರಿಂದ 4 ವಿದೇಶಿ ಆಟಗಾರರನ್ನು ಹೊಂದಬಹುದು. ಫ್ಯೂಚರ್ ಕಬಡ್ಡಿ ಹೀರೋ ವಿಭಾಗದಿಂದ ಮೂರು ಆಟಗಾರರನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು.
ಅಕ್ಟೋಬರ್ 19 ರಂದು ಆರಂಭವಾಗಲಿರುವ 6ನೇ ಆವೃತ್ತಿಯ ಟೂರ್ನಿ 13 ವಾರಗಳ ಕಾಲ ನಡೆಯಲಿದೆ.
ಹರಾಜಿನ ವೇಳೆ ಸ್ಪೀಡೋಮೀಟರ್ ಮಾದರಿಯಲ್ಲಿ ಬಿಡ್-ಓ-ಮೀಟರ್ ಎನ್ನುವ ಗ್ರಾಫಿಕ್ಅನ್ನು ನೀಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications