ಪಿಕೆಎಲ್ 2018: ಬೆಂಗಾಲ್‌ಗೆ ಅಗ್ರಸ್ಥಾನ ಬಿಟ್ಟುಕೊಡಲಿದೆಯೇ ಬೆಂಗಳೂರು?!

ಕೋಲ್ಕತ್ತಾ, ಡಿಸೆಂಬರ್ 27: 'ಪ್ರೊ ಕಬಡ್ಡಿ ಲೀಗ್ 2018' ಟೂರ್ನಿ ಆರಂಭದಿಂದಲೂ 'ಬಿ' ಝೋನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದ ಬೆಂಗಳೂರು ಬುಲ್ಸ್ ತಂಡ ಮೊದಲ ಸ್ಥಾನವನ್ನು ಬೆಂಗಾಲ್ ವಾರಿಯರ್ಸ್‌ಗೆ ಬಿಟ್ಟುಕೊಡುವುದರಲ್ಲಿದೆ. ಬೆಂಗಳೂರು ತನ್ನ ಆಟದ ಪ್ರಖರತೆ ಕಳೆದುಕೊಂಡು ಕನ್ನಡಿಗರಿಗೆ ನಿರಾಸೆ ಮೂಡಿಸಿದೆ.
ಬುಧವಾರ (ಡಿ.26) ವೆಸ್ಟ್ ಬೆಂಗಾಲ್‌ನ ಕೋಲ್ಕತ್ತಾದಲ್ಲಿರುವ ನೇತಾಜಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಬೆಂಗಾಲ್ ತಂಡ ಬೆಂಗಳೂರು ಬುಲ್ಸನ್ನು 37-31ರ ಅಂತರದಿಂದ ಸೋಲಿಸಿತು. ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಸೋತರೂ, ಬೆಂಗಾಲ್ ಗೆದ್ದರೂ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಜಾರಲಿದೆ.
ಈ ಪಂದ್ಯಕ್ಕೂ ಮುನ್ನ ಬೆಂಗಳೂರು 72 ಪಾಯಿಂಟ್ ಗಳಿಸಿದ್ದರೆ, ಬೆಂಗಾಲ್ 64 ಅಂಕ ಗೆದ್ದಿತ್ತು. ಬುಧವಾರದ ಪಂದ್ಯದ ಬಳಿಕ ಬೆಂಗಳೂರಿನ ಖಾತೆಯಲ್ಲಿ 73 ಅಂಕಗಳಿದ್ದರೆ, ಬೆಂಗಾಲ್ 69 ಪಾಯಿಂಟ್ ಸೇರಿಸಿಕೊಂಡಿದೆ. ಬೆಂಗಳೂರು ಮತ್ತು ಬೆಂಗಾಲ್‌ನ ಇನ್ನೊಂದು ಪಂದ್ಯದ ಸೋಲು-ಗೆಲುವು 'ಬಿ' ಜೋನ್ ಅಗ್ರಸ್ಥಾನಿಗನನ್ನು ನಿರ್ಧರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications