Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿಕೆಎಲ್ : ಗುಜರಾತ್ ಸೋಲಿಸಿ ಫೈನಲಿಗೆ ಲಗ್ಗೆ ಇಟ್ಟ ಬೆಂಗಳೂರು

PKL: Bengaluru Bulls thrash Gujarat Fortunegiants to enter the final

ಕೊಚ್ಚಿ, ಜನವರಿ 01 : ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಸೀಸನ್ 6ರ ಅಂತಿಮ ಹಣಾಹಣಿಗೆ ಲಗ್ಗೆ ಇಟ್ಟ ಮೊದಲ ತಂಡ ಎನಿಸಿಕೊಂಡಿದೆ. ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಫಾರ್ಚುನ್ ಜೈಂಟ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಸುಲಭ ಗೆಲುವು ಸಾಧಿಸಿದ್ದು, ಅಭಿಮಾನಿಗಳಿಗೆ ಹೊಸ ವರ್ಷದ ಕೊಡುಗೆ ನೀಡಿದೆ.

ಕೊಚ್ಚಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಬೆಂಗಳೂರು ಬುಲ್ಸ್ 41-29 ಅಂಕಗಳಿಂದ ಜಯ ದಾಖಲಿಸಿದೆ. ಪಂದ್ಯದ ಮೊದಲ ಅವಧಿಯಲ್ಲಿ ಮೇಲುಗೈ ಸಾಧಿಸಿದ್ದ ಗುಜರಾತ್, ಬೆಂಗಳೂರು ಬುಲ್ಸ್ಗೆ ತೀವ್ರ ಪ್ರತಿರೋಧ ನೀಡಿತ್ತು. ದ್ವಿತಿಯಾರ್ಧದಲ್ಲಿ ಬೆಂಗಳೂರು ತಂಡದ ಆಟಗಾರರ ಅದ್ಭುತ ಆಟದಿಂದಾಗಿ ಗೆಲುವು ಲಭಿಸಿತು.

ಹಾಲಿ ರನ್ನರ್ ಅಪ್ ತಂಡವಾಗಿರುವ ಗುಜರಾತ್ ಜೈಂಟ್ಸ್ ತಂಡಕ್ಕೆ ಫೈನಲ್ ತಲುಪಲು ಮತ್ತೊಂದು ಅವಕಾಶ ಕೂಡಾ ಇದೆ. ಮುಂಬೈನಲ್ಲಿ ಜನವರಿ 03 ರಂದು ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಯುಪಿ ಯೋಧಾ ತಂಡವನ್ನು ಎದುರಿಸಲಿದೆ.

ಎಲಿಮಿನೇಟರ್ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡವನ್ನು 45-33 ಅಂತರದಿಂದ ಸೋಲಿಸಿದ ಯುಪಿ ಯೋಧಾ ತಂಡವು ಇನ್ನೊಂದು ಪಂದ್ಯ ಗೆದ್ದರೆ ಫೈನಲ್ ತಲುಪಬಹುದು.

Story first published: Tuesday, January 1, 2019, 9:09 [IST]
Other articles published on Jan 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+