ಪ್ರೊ ಕಬಡ್ಡಿ ಲೀಗ್: ಶುಭಾರಂಭದ ನಿರೀಕ್ಷೆಯಲ್ಲಿ ಬೆಂಗಳೂರು ಬುಲ್ಸ್
ಪ್ರೊ ಕಬಡ್ಡಿ ಲೀಗ್ ಆರಂಭವಾಗಿದೆ. ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಇಂದು ಎರಡನೇ ಪಂದ್ಯದಲ್ಲಿ ಅತಿಥೇಯ ಗುಜರಾತ್ ಟೈಟನ್ಸ್ ವಿರುದ್ಧ ಕಾದಾಟ ನಡೆಸಲಿದೆ.
ಗುಜರಾತ್ ಜೈಂಟ್ಸ್ PKL 10ನೇ ಆವೃತ್ತಿಯಲ್ಲಿ ಭರ್ಜರಿ ಆರಂಭವನ್ನು ಮಾಡಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ತೆಲುಗು ಟೈಟಾನ್ಸ್ ಅನ್ನು ಸೋಲಿಸಿತು. ಗುಜರಾತ್ ಈ ಲಯವನ್ನು ಉಳಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಉಭಯ ತಂಡಗಳು 11 ಬಾರಿ ಮುಖಾಮುಖಿ ಆಗಿದ್ದು, ತಲಾ ಐದು ಪಂದ್ಯಗಳಲ್ಲಿ ಜಯ ಸಾಧಿಸಿವೆ. ಒಂದು ಪಂದ್ಯ ಟೈನಲ್ಲಿ ಅಂತ್ಯವಾಗಿದೆ. ಅಹಮದಾಬಾದ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬುಲ್ಸ್ ಪಂದ್ಯ ಗೆಲ್ಲುವ ಫೇವರಿಟ್..

ಸೌರಭ್ ನಂದಲ್ ಅವರು ಬೆಂಗಳೂರು ಬುಲ್ಸ್ ನಾಯಕರಾಗಿದ್ದಾರೆ. ಕಳೆದ ಋತುವಿನಲ್ಲಿ ಬುಲ್ಸ್ ತಂಡ ಸೆಮಿಫೈನಲ್ ತಲುಪಿತ್ತು ಮತ್ತು ಈ ಬಾರಿಯೂ ಬುಲ್ಸ್ ಪ್ರದರ್ಶನವನ್ನು ಪುನರಾವರ್ತಿಸಲು ಬಯಸುತ್ತದೆ. ಭರತ್ ಹೂಡಾ, ವಿಕಾಸ್ ಕಂಡೋಲಾ, ಸುರ್ಜಿತ್ ಸಿಂಗ್ ಅವರಂತಹ ಆಟಗಾರರಿಂದ ತಂಡ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡುವ ಪ್ಲ್ಯಾನ್ ಬುಲ್ಸ್ ತಂಡದ್ದಾಗಿದೆ.
ಬೆಂಗಳೂರು ಬುಲ್ಸ್ ಒಂದು ಬಾರಿ ಪ್ರೊ ಕಬಡ್ಡಿ ಲೀಗ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಮತ್ತೊಮ್ಮೆ ಈ ಪ್ರಶಸ್ತಿಗೆ ಮುತ್ತಿಡುವ ಕನಸನ್ನು ಬುಲ್ಸ್ ಕಾಣುತ್ತಿದೆ.

ಪ್ರೊ ಕಬಡ್ಡಿಯ ಹಿಂದಿನ ಮೂರು ಪಂದ್ಯಗಳನ್ನು ನೋಡಿದರೆ, ಉಭಯ ತಂಡಗಳು ಸಮಬಲದ ಹೋರಾಟ ನೀಡಿವೆ. ಇನ್ನು ಪ್ರಸಕ್ತ ಋತುವಿನಲ್ಲಿ ಬುಲ್ಸ್ ತಂಡ ಬಲಿಷ್ಠವಾಗಿದ್ದು, ಅಬ್ಬರದ ಪ್ರದರ್ಶನ ನೀಡುವ ಇರಾದೆ ಹೊಂದಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಿದೆ.
ಸಮಯ: ರಾತ್ರಿ 9.00
ನೇರ ಪ್ರಸಾರ: ಸ್ಟಾರ್ ನೆಟ್ ವರ್ಕ್
ಗುಜರಾತ್ ಜೇಂಟ್ಸ್: ಫಜಲ್ ಅತ್ರಾಚಲಿ (ನಾಯಕ), ಸೌರವ್ ಗುಲಿಯಾ, ರೋಹಿತ್ ಗುಲಿಯಾ, ಸೋನು ಜಗ್ಲಾನ್, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ಸೋಂಬಿರ್ ಮತ್ತು ಅರ್ಕಮ್ ಶೇಖ್.
ಬೆಂಗಳೂರು ಬುಲ್ಸ್: ಸೌರಭ್ ನಂದಲ್ (ನಾಯಕ), ಭರತ್ ಹೂಡಾ, ವಿಕಾಸ್ ಕಂಡೋಲಾ, ಅಮನ್, ಸುರ್ಜೀತ್ ಸಿಂಗ್, ನೀರಜ್ ನರ್ವಾಲ್ ಮತ್ತು ವಿಶಾಲ್ ಲಾಥರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications