ಯುಪಿ ಯೋಧಾ ಸೋಲಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬುಲ್ಸ್

ಗ್ರೇಟರ್ ನೋಯ್ಡಾ, ನವೆಂಬರ್ 09: 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಸತತ 4ನೇ ಜಯ ದಾಖಲಿಸುವ ಮೂಲಕ ಬೆಂಗಳೂರ್ ಬುಲ್ಸ್ ತಂಡವು 'ಜೋನ್ ಬಿ' ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇಲ್ಲಿನ ಶಹೀದ್ ವಿಜಯ್ ಸಿಂಗ್ ಪಾಥಿಕ್ ಕ್ರೀಡಾ ಸಂಕೀರ್ಣದಲ್ಲಿ ಗುರುವಾರದಂದು ನಡೆದ ಬಿ ಗುಂಪಿನ ಪಂದ್ಯದಲ್ಲಿ ರೋಹಿತ್ ಕುಮಾರ್ ನಾಯಕತ್ವದ ಬುಲ್ಸ್ ತಂಡವು 37-27 ಅಂಕಗಳಿಂದ ಆತಿಥೇಯ ಯುಪಿ ಯೋಧಾ ತಂಡವನ್ನು ಮಣಿಸಿತು.
ಯೋಧಾ ವಿರುದ್ಧ ಬುಲ್ಸ್ ತಂಡಕ್ಕೆ ಸತತ 2ನೇ ಗೆಲುವು ಇದಾಗಿದೆ. ಈ ಗೆಲುವಿನೊಂದಿಗೆ ಒಟ್ಟು 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು, 1 ರಲ್ಲಿ ಸೋಲು ಕಂಡಿರುವ ಬೆಂಗಳೂರು ಬುಲ್ಸ್ ತಂಡವು 31 ಅಂಕ(44 ಸ್ಕೋರ್ ವ್ಯತ್ಯಾಸ)ದೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಯುಪಿ ತಂಡದ ಅನುಭವಿ ರೈಡರ್, ಮಂಗಳೂರು ಮೂಲದ ರಿಷಾಂಕ್ ದೇವಾಡಿಗ ಅವರನ್ನು ಬುಲ್ಸ್ ಆಟಗಾರರು ಆರಂಭದಲ್ಲೇ ಕಟ್ಟಿ ಹಾಕಿದರು. ಅದರೆ, ಪಂದ್ಯ ಮೊದಲಾರ್ಧದಲ್ಲಿ ರೋಹಿತ್ ಪಡೆ 14-6 ರಿಂದ ಮುನ್ನಡೆ ಸಾಧಿಸಿದ ಬಳಿಕ ಹಿಂತಿರುಗಿ ನೋಡಲಿಲ್ಲ.
ರೈಡರ್ ಪವನ್ ಶೇರಾವತ್ (11ಅಂಕ) ಹಾಗೂ ನಾಯಕ ರೋಹಿತ್ (7ಅಂಕ) ಬುಲ್ಸ್ ತಂಡ ಮೊದಲಾರ್ಧದಲ್ಲಿ 20-11 ರಿಂದ ಬುಲ್ಸ್ಗೆ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ಮೇಲುಗೈ ಸಾಧಿಸಿ, ಅಂತಿಮವಾಗಿ ಜಯದೊಂದಿಗೆ ಬುಲ್ಸ್ ತಂಡ 37-27 ಅಂಕಗಳಿಂದ ಜಯ ದಾಖಲಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications