Pro Kabaddi League: ಫೈನಲ್‌ನಲ್ಲಿ ಹರಿಯಾಣ ಸ್ಟೀಲರ್ಸ್ ಸೋಲಿಸಿ ಚಾಂಪಿಯನ್ ಆದ ಪುಣೇರಿ ಪಲ್ಟಾನ್
ಶುಕ್ರವಾರ, ಮಾರ್ಚ್ 1ರಂದು ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2023-24ರ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 10ನೇ ಆವೃತ್ತಿಯ ರೋಚಕ ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡವು ಹರಿಯಾಣ ಸ್ಟೀಲರ್ಸ್ ತಂಡವನ್ನು 28-25 ಅಂಕಗಳಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತು.
ಪ್ರೊ ಕಬಡ್ಡಿ ಲೀಗ್ ಸೀಸನ್ 10ರ ಫೈನಲ್‌ನ ಈ ಗೆಲುವಿನ ಮೂಲಕ ಪುಣೇರಿ ಪಲ್ಟಾನ್ ತಂಡ ತನ್ನ ಚೊಚ್ಚಲ ಪ್ರಶಸ್ತಿಯನ್ನು ಎತ್ತಿಹಿಡಿದಿದೆ. ಅಲ್ಲದೆ ಹಿಂದಿನ ಆವೃತ್ತಿ ಫೈನಲ್‌ನಲ್ಲಿ ಹೃದಯವಿದ್ರಾವಕ ಸೋಲಿನ ನಂತರ, ಈ ಬಾರಿ ಟ್ರೋಫಿಗೆ ಮುತ್ತಿಕ್ಕಿದೆ.

10ನೇ ಪಿಕೆಎಲ್ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ಮತ್ತು ಹರಿಯಾಣ ಸ್ಟೀಲರ್ಸ್ ಎರಡು ಪ್ರಬಲ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಕಡಿಮೆ-ಸ್ಕೋರಿಂಗ್ ಪಂದ್ಯವು ರೋಚಕ ಯುದ್ಧವಾಗಿ ನಿರ್ಮಾಣವಾಯಿತು.
ಆದರೂ, ಪುಣೇರಿ ಪಲ್ಟಾನ್‌ನ ರೈಡರ್ ಪಂಕಜ್ ಮೋಹಿತೆ ಫೈನಲ್‌ನಲ್ಲಿ ಹೀರೋ ಆಗಿ ಹೊರಹೊಮ್ಮಿದರು. ರೈಡಿಂಗ್‌ನಲ್ಲಿ ನಿರ್ಣಾಯಕ ಒಂಬತ್ತು ಅಂಕಗಳನ್ನು ಗಳಿಸಿದರು ಮತ್ತು ತಮ್ಮ ತಂಡದ ಆಕ್ರಮಣಕಾರಿ ಆಟವನ್ನು ಮುನ್ನಡೆಸಿದರು.
ಮೊದಲಾರ್ಧದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಪುಣೇರಿ ಪಲ್ಟಾನ್ ಅಲ್ಪ ಮುನ್ನಡೆ ಕಾಯ್ದುಕೊಳ್ಳುವುದರೊಂದಿಗೆ ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿತ್ತು.
ಮೊದಲಾರ್ಧದ ಸಮೀಪದಲ್ಲಿ ಪಂಕಜ್ ಮೋಹಿತೆ ನಡೆಸಿದ ನಿರ್ಣಾಯಕ 4-ಪಾಯಿಂಟ್ ರೈಡ್ ಹರಿಯಾಣ ತಂಡವನ್ನು ಆಲೌಟ್ ಅಂಚಿಗೆ ತಳ್ಳಿತು. ಆದರೆ ಬದಲಿ ರೈಡರ್ ವಿಶಾಲ್ ಟೇಟ್ ನಿರ್ಣಾಯಕ ಟಚ್ ಪಾಯಿಂಟ್‌ನೊಂದಿಗೆ ಹರಿಯಾಣ ಸ್ಟೀಲರ್ಸ್ ತಂಡವನ್ನು ಆಟದಲ್ಲಿ ಉಳಿಸಿಕೊಂಡರು.
ದ್ವಿತೀಯಾರ್ಧದಲ್ಲಿಯೂ ರೋಚಕ ಹಣಾಹಣಿ ಮುಂದುವರಿಯಿತು. ಅಂತಿಮವಾಗಿ ಪುಣೇರಿ ಪಲ್ಟಾನ್ ತಂಡ ಅಂತಿಮ ಎರಡು ನಿಮಿಷಗಳಲ್ಲಿ ಎಂಟು ಅಂಕಗಳ ಮುನ್ನಡೆ ಪಡೆದರು.

ನಾಲ್ಕು ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ ರೈಟ್ ಕಾರ್ನರ್ ಗೌರವ್ ಖಾತ್ರಿ ಅವರ ಬಲವಾದ ರಕ್ಷಣಾತ್ಮಕ ಆಟವು ಪುಣೇರಿ ಪಲ್ಟಾನ್ ತಂಡ ಪಂದ್ಯವನ್ನು ನಿಧಾನಗೊಳಿಸಲು ಮತ್ತು ಐತಿಹಾಸಿಕ ಗೆಲುವು ಪಡೆಯಲು ನೆರವಾಯಿತು.
ಮತ್ತೊಂದೆಡೆ, ಫೈನಲ್ ಪಂದ್ಯದುದ್ದಕ್ಕೂ ಕೇವಲ ಆರು ಟ್ಯಾಕಲ್ ಪಾಯಿಂಟ್‌ಗಳನ್ನು ಪಡೆಯುವ ಮೂಲಕ ರಕ್ಷಣಾತ್ಮಕ ಹೋರಾಟ ನಡೆಸಿದ ಹರಿಯಾಣ ಸ್ಟೀಲರ್ಸ್ ತಂಡಕ್ಕೆ ಇದು ನಿರಾಶಾದಾಯಕ ರಾತ್ರಿಯಾಗಿತ್ತು.
ಹರಿಯಾಣ ಸ್ಟೀಲರ್ಸ್ ಕೋಚ್ ಮನ್‌ಪ್ರೀತ್ ಸಿಂಗ್ ಅವರ ಬಗ್ಗೆ ಹೇಳುವುದಾದರೆ, ಪ್ರೊ ಕಬಡ್ಡಿ ಲೀಗ್‌ನಲ್ಲಿ ಕೋಚ್ ಆಗಿ ಫೈನಲ್‌ನಲ್ಲಿ ಅವರ ಅದೃಷ್ಟ ಕಳಪೆಯಾಗಿಯೇ ಉಳಿದಿದೆ.
ಹರಿಯಾಣ ಸ್ಟೀಲರ್ಸ್ ತಂಡದೊಂದಿಗಿನ ಈ ಸೋಲಿನ ಮೊದಲು ಮನ್‌ಪ್ರೀತ್ ಸಿಂಗ್ ಅವರು ಗುಜರಾತ್ ಜೈಂಟ್ಸ್‌ನೊಂದಿಗೆ (ಈ ಹಿಂದೆ ಗುಜರಾತ್ ಫಾರ್ಚೂನ್ ಜೈಂಟ್ಸ್) ಸತತ ಎರಡು ಫೈನಲ್‌ಗಳಲ್ಲಿ ಸೋಲನುಭವಿಸಿದ್ದರು.
ಇನ್ನು ಪುಣೇರಿ ಪಲ್ಟಾನ್ ನಾಯಕ ಅಸ್ಲಾಮ್ ಇನಾಮದಾರ್ ಅವರು 142 ರೇಡ್ ಪಾಯಿಂಟ್‌ಗಳು ಮತ್ತು 23 ಟ್ಯಾಕಲ್ ಪಾಯಿಂಟ್‌ಗಳಿಗಾಗಿ ಈ ಆವೃತ್ತಿಯ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ಗೆದ್ದರು.
ಪುಣೇರಿ ಪಲ್ಟಾನ್ ಉಪನಾಯಕ ಮೊಹಮ್ಮದ್ರೇಜಾ ಚಿಯಾನೆಹ್ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಗೆದ್ದರು. ಆದರೆ ಒಂದು ಒಂದು ಪಾಯಿಂಟ್‌ನಿಂದ ದಾಖಲೆಯ 100 ಟ್ಯಾಕಲ್ ಪಾಯಿಂಟ್‌ಗಳಿಂದ ಹಿಂದೆ ಬಿದ್ದರು.
ಇದೇ ವೇಳೆ ದಬಾಂಗ್ ಡೆಲ್ಲಿ ತಂಡದ ಅಶು ಮಲಿಕ್ ಅವರು 10ನೇ ಆವೃತ್ತಿಯಲ್ಲಿ 276 ರೈಡ್ ಪಾಯಿಂಟ್‌ಗಳಿಗಾಗಿ ಬೆಸ್ಟ್ ರೈಡರ್ ಟ್ರೋಫಿಯನ್ನು ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications