For Quick Alerts
ALLOW NOTIFICATIONS  
For Daily Alerts

PKL 2024: ಒಂದೇ ತಂಡದ ಪರ ಹೆಚ್ಚು ಕಾಲ ಆಡಿದ ಆಟಗಾರರ ಬಗ್ಗೆ ಮಾಹಿತಿ

ಮುಂಬೈನಲ್ಲಿ ನಡೆದ 2024ರ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್‌) ಮೆಗಾ ಹರಾಜು ಪ್ರಕ್ರಿಯೆ ಯಶಸ್ವಿಯಾಗಿದೆ. ಎಂಟು ಆಟಗಾರರು ಕೋಟಿಗೂ ಹೆಚ್ಚು ಮೊತ್ತಕ್ಕೆ ಬಿಡ್ ಆಗಿದ್ದಾರೆ. ಎಲ್ಲಾ ಕಬಡ್ಡಿ ಫ್ರಾಂಚೈಸಿಗಳು ಬಲಿಷ್ಠ ತಂಡಗಳನ್ನು ರಚಿಸಿವೆ.

ಪ್ರೊ ಕಬಡ್ಡಿ ಲೀಗ್‌ನಲ್ಲಿ ಒಂದೇ ಫ್ರಾಂಚೈಸಿ ಪರ ಕೆಲವು ಆಟಗಾರರು ಹೆಚ್ಚು ಕಾಲ ಆಡಿ ಗಮನ ಸೆಳೆದಿದ್ದಾರೆ. ಅಂತಹ ಆಟಗಾರರನ್ನು ಈ ಬಾರಿಯೂ ತಂಡಗಳು ಉಳಿಸಿಕೊಂಡಿವೆ. ಈ ಆಟಗಾರರು ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Players who played for the same team for longest time in Pro Kabaddi League

1) ನವೀನ್ ಕುಮಾರ್ - ದಬಾಂಗ್ ಡೆಲ್ಲಿ ಕೆಸಿ

ಪಿಕೆಎಲ್ 6ನೇ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ ತಂಡವನ್ನು ಸ್ಟಾರ್ ರೈಡರ್ ನವೀನ್ ಕುಮಾರ್ ಸೇರಿಕೊಂಡಿದ್ದಾರೆ. ಇದಾದ ಬಳಿಕ ಅವರು ಒಮ್ಮೆ ಎದುರಾಳಿ ತಂಡದ ಅಂಗಳಕ್ಕೆ ನುಗ್ಗಿದರೆ ಅಂಕ ಪಡೆಯುವುದು ಫಿಕ್ಸ್. ಅಷ್ಟರ ಮಟ್ಟಿಗೆ ಅವರು ವೇಗದ ರೈಡ್‌ಗೆ ಹೆಸರುವಾಸಿ.

ಇದಕ್ಕಾಗಿಯೇ ನವೀನ್ ಅವರಿಗೆ "ಎಕ್ಸ್‌ಪ್ರೆಸ್ ರೈಡರ್" ಎಂಬ ಹೆಸರು ಬಂದಿದೆ. ಅವರು ತಮ್ಮ ಅದ್ಭುತ ಪ್ರದರ್ಶನಗಳೊಂದಿಗೆ ಆವೃತ್ತಿ 8ನೇ ಪಿಕೆಎಲ್ ಟ್ರೋಫಿಯನ್ನು ದಂಬಾಗ್ ಎತ್ತುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ 7 ಮತ್ತು 8ನೇ ಆವೃತ್ತಿಗಳಲ್ಲಿ ಎರಡು ಬಾರಿ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದು, ಪಿಕೆಎಲ್‌ನಲ್ಲಿ ಅತಿ ಹೆಚ್ಚು ರೇಡ್ ಪಾಯಿಂಟ್‌ (1005) ಗಳಿಸಿದ 6ನೇ ಆಟಗಾರ.

2) ಸುರೇಂದರ್ ಗಿಲ್- ಯುಪಿ ಯೋಧಾಸ್

7ನೇ ಆವೃತ್ತಿಯಿಂದ ಸುರೇಂದರ್ ಗಿಲ್ ಯುಪಿ ಯೋಧಾಸ್ ತಂಡದೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಚೊಚ್ಚಲ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿ 71 ರೇಡ್ ಪಾಯಿಂಟ್‌ಗಳನ್ನು ಕಲೆ ಹಾಕಿ ತಂಡಕ್ಕೆ ನೆರವಾಗಿದ್ದರು.

ತಂಡ ಸಂಕಷ್ಟದಲ್ಲಿದ್ದಾಗಲೆಲ್ಲ ಸುರೇಂದರ್ ಗಿಲ್ ಸತತ ಅಂಕಗಳನ್ನು ಪಡೆದು ಗೆಲುವಿನ ಕಡಗೆ ಮುನ್ನಡೆಸಿದ್ದಾರೆ. ಈವರಗೆ ಅವರು 487 ರೇಡ್ ಪಾಯಿಂಟ್‌ಗಳನ್ನು ಸಂಗ್ರಹಿಸಿದ್ದಾರೆ.

3) ಸುಮಿತ್ - ಯುಪಿ ಯೋಧಾಸ್

ಯುಪಿ ಯೋಧಾಸ್ ತಂಡದಲ್ಲಿ 7ನೇ ಆವೃತ್ತಿಯಿಂದ ಸುಮಿತ್ ಪ್ರಮುಖ ಡಿಫೆಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಎಡ ಕಾರ್ನರ್‌ನಲ್ಲಿ ನಿತೇಶ್ ಕುಮಾರ್ ಜೊತೆ ಅವರು ಕೈ ಜೋಡಿಸಿ ಯೋಧಾಸ್ ರಕ್ಷಣಾ ವಿಭಾಗವನ್ನು ಬಲಪಡಿಸಿದ್ದಾರೆ. ಈ ಜೋಡಿಯು ಯುಪಿ ತಂಡದ ಪರ ಅದ್ಭುತ ದಾಖಲೆಗಳನ್ನು ಮಾಡಿದ್ದಾರೆ.

ಸುಮಿತ್‌ 89 ಪಂದ್ಯಗಳಲ್ಲಿ 254 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಅವರು ಪಿಕೆಎಲ್‌ನಲ್ಲಿ ಯೋಧಾಸ್‌ ಪರ ಎರಡನೇ ಅತ್ಯುತ್ತಮ ಟ್ಯಾಕ್ಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

4) ಅಶು ಸಿಂಗ್ - ಯುಪಿ ಯೋಧಾಸ್

ಪ್ರೊ ಕಬಡ್ಡಿ ಲೀಗ್‌ನಲ್ಲಿ ಒಂದೇ ತಂಡದ ಪರ ಹೆಚ್ಚು ಕಾಲ ಆಡಿದ ಆಟಗಾರರ ಪೈಕಿ ಅಶು ಸಿಂಗ್ ಕೂಡ ಯುಪಿ ಯೋಧಾಸ್‌ನಲ್ಲಿದ್ದಾರೆ. ಕಳೆದ ಮೂರು ಋತುಗಳಿಂದ ತಂಡದ ಆಧಾರಸ್ತಂಭವಾಗಿದ್ದಾರೆ. ಸೀಸನ್ 8 ರಿಂದ ಅವರು ಒಟ್ಟು 111 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ.

5) ಪಂಕಜ್ ಮೋಹಿತೆ- ಪುಣೇರಿ ಪಲ್ಟನ್

7ನೇ ಆವೃತ್ತಿಯಲ್ಲಿ ಪಂಕಜ್ ಮೋಹಿತೆ ಪುಣೇರಿ ಪಲ್ಟಾನ್‌ ತಂಡಕ್ಕೆ ಉದಯೋನ್ಮುಖ ತಾರೆಯಾಗಿ ಸೇರಿಕೊಂಡಿದ್ದರು. ಅವರು ತಮ್ಮ ಚೊಚ್ಚಲ ಋತುವಿನಲ್ಲಿ 110 ಬಾರಿ ಎದುರಾಳಿ ಆಟಗಾರನನ್ನು ರೈಡ್ ವೇಳೆ ಬಲಿ ಪಡೆದಿದ್ದಾರೆ. ಮುಂದಿನ ಎರಡು ಸೀಸನ್‌ಗಳಲ್ಲಿ ಅವರು ಹೆಚ್ಚಿನ ಪಂದ್ಯಗಳಿಂದ ಹೊರಗುಳಿದಿದ್ದರೂ ಸಹ ಅವರನ್ನು ತಂಡ ಕೈ ಬಿಡಲಿಲ್ಲ.

ಕಳೆದ ಋತವಿನಲ್ಲಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಲ್ಲಿಯವರೆಗೆ 58 ಪಂದ್ಯಗಳಲ್ಲಿ ಪುಣೇರಿ ಪಲ್ಟನ್ ಪರ 280 ರೇಡ್ ಪಾಯಿಂಟ್‌ಗಳನ್ನು ಪಡೆದಿದ್ದಾರೆ.

Story first published: Tuesday, August 27, 2024, 19:39 [IST]
Other articles published on Aug 27, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+