ಪ್ರೊ ಕಬಡ್ಡಿ ಫೈನಲ್: ಬೆಂಗಳೂರು ಬುಲ್ಸ್‌ಗೆ ಗುಡ್ ಲಕ್ ಹೇಳಿ
ಮುಂಬೈ, ಆಗಸ್ಟ್.22: ಭಾನುವಾರ ದೇಶಿಯ ಕ್ರೀಡೆ ಕಬಡ್ಡಿ ಪ್ರಿಯರಿಗೆ ಧಮಾಕಾ. ಬೆಂಗಳೂರು ಮತ್ತು ಮುಂಬೈ ತಂಡ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಲಿವೆ.
ಕಳೆದ ಬಾರಿಯೂ ಫೈನಲ್ ತಲುಪಿದ್ದ ಯು ಮುಂಬಾ ಮತ್ತು ಲೀಗ್ ಹಂತದ ಅಂತ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್ ಗೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್ ನಡುವಿನ ಹೋರಾಟ ಕ್ರೀಡಾ ಪ್ರೇಮಿಗಳನ್ನು ಸೆಳೆಯಲಿದೆ.[ಪ್ರೊ ಕಬಡ್ಡಿ: ಫೈನಲ್ ಗೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್]

ಆಗಸ್ಟ್ 23, ಭಾನುವಾರ ರಾತ್ರಿ 9 ಗಂಟೆಗೆ ಫೈನಲ್ ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಫೋರ್ಟ್ಸ್ ವಾಹಿನಿಯಲ್ಲಿ ಪಂದ್ಯದ ನೇರ ಪ್ರಸಾರವಿರುತ್ತದೆ.
ಬೆಂಗಳೂರು ತಂಡ ಚಾಂಪಿಯನ್ನ ಪಟ್ಟ ದ ಮೇಲೆ ತನ್ನ ಛಾಪು ಒತ್ತಬೇಕು ಎಂದು ಅಭಿಮಾನಿಗಳು ಹಾರೈಸತೊಡಗಿದ್ದಾರೆ. ಅಜಯ್ ಠಾಕೂರ್, ಧರ್ಮರಾಜ್ ಮತ್ತು ಸುರೇಂದರ್ ನಡಾ ಅವರ ಆಟವನ್ನು ನೆಚ್ಚಿಕೊಂಡಿದೆ.

ಆದರೆ ಯು ಮುಂಬಾ ತಂಡ ಆವೃತ್ತಿಯಲ್ಲಿ ಬಲಿಷ್ಠ ಪ್ರದರ್ಶನ ನೀಡಿಕೊಂಡು ಬಂದಿದೆ. ಆಡಿರುವ 15 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಅಪಜಯ ಕಂಡಿದೆ. ಲೀಗ್ ಹಂತದ ಎರಡು ಪಂದ್ಯಗಳಲ್ಲಿ ಬೆಂಗಳೂರು ವಿರುದ್ಧ ಯು ಮುಂಬಾ ಜಯ ಸಾಧಿಸಿದ್ದು ಆತ್ಮವಿಶ್ವಾಸದಲ್ಲಿದೆ.
ಪಂದ್ಯ ಎಲ್ಲಿ: ಮುಂಬೈ
ಸಮಯ: ರಾತ್ರಿ 9 ಗಂಟೆ
ಬಹುಮಾನ: ವಿನ್ನರ್ ಗೆ 1 ಕೋಟಿ, ರನ್ನರ್ ಗೆ 50ಲಕ್ಷ ರು.
ನೇರ ಪ್ರಸಾರ: ಸ್ಟಾರ್ ಸ್ಫೋರ್ಟ್ಸ್, ಕನ್ನಡದಲ್ಲಿ ಸುವರ್ಣ ಪ್ಲಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications