ಕಬಡ್ಡಿ: ಬೆಂಗಾಲ್ ವಿರುದ್ಧ ಗೆದ್ದು ಅಗ್ರಸ್ಥಾನಕ್ಕೇರಿದ ಬೆಂಗಳೂರು ಬುಲ್ಸ್
ನಾಗ್ಪುರ, ಆಗಸ್ಟ್ 10 : ಅಜಯ್ ಕುಮಾರ್ ಹಾಗೂ ರೋಹಿತ್ ಕುಮಾರ್ ಅವರ ಸೂಪರ್ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ಗೆಲುವಿನ ನಗೆ ಬೀರಿದೆ.
ಇಲ್ಲಿನ ಮಣಕಪುರ್ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಬುಲ್ಸ್ 31-25 ಅಂಕಗಳಿಂದ ಮಣಿಸಿತು. ಈ ಮೂಲಕ ಸತತ ಎರಡು ಜಯ ಗಳಿಸಿದ್ದ ವಾರಿಯರ್ಸ್ ಹ್ಯಾಟ್ರಿಕ್ ಜಯಕ್ಕೆ ಬೆಂಗಳೂರು ಬುಲ್ಸ್ ಬ್ರೇಕ್ ಹಾಕಿತು.

ಆರಂಭದಿಂದಲೂ ಎರಡು ತಂಡಗಳು ಸಮಬಲದ ಹೋರಾಟ ನಡೆಸಿದ್ದವು. ಅಜಯ್ ಕುಮಾರ್ ಅವರಿಗೆ ಉತ್ತಮ ಸಾಥ್ ನೀಡಿದ ನಾಯಕ ರೋಹಿತ್ ಕುಮಾರ್ ಬೆಂಗಾಲ್ ವಾರಿಯರ್ಸ್ ತಂಡವನ್ನು ಕಟ್ಟಿ ಹಾಕಿದರು.
ಈ ಗೆಲುವಿನಿಂದ ನಿರಂತರ ಎರಡು ಸೋಲು ಮತ್ತು ಒಂದು ಟೈ ಮೂಲಕ ನಿರಾಸೆಗೊಂಡಿದ್ದ ಬುಲ್ಸ್ ಆಟಗಾರರ ಮುಖದಲ್ಲಿ ಮಂದಹಾಸ ಮೂಡಿತು.
ಬೆಂಗಳೂರು ಬುಲ್ಸ್ ಆಡಿದ ಒಟ್ಟು 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದ್ದು 2 ಸೋಲುಕಂಡು ಒಂದರಲ್ಲಿ ಡ್ರಾ ಸಾಧಿಸುವ ಮೂಲಕ 19 ಅಂಕಗಳೊಂದಿಗೆ 'ಬಿ' ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.
Story first published: Wednesday, January 3, 2018, 10:15 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications