ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಗೆ ರೋಚಕ ಜಯ

ಪಾಟ್ನಾ, ಅಕ್ಟೋಬರ್ 31: ಪಾಟ್ನಾದ ಪಾಟಲೀಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ (ಅಕ್ಟೋಬರ್ 31) ನಡೆದ ಪ್ರೊ ಕಬಡ್ಡಿ 43ನೇ ಪಂದ್ಯದಲ್ಲಿ ಆತಿಥೇಯ ಪಾಟ್ನಾ ವಿರುದ್ಧ ಬೆಂಗಳೂರು ಬುಲ್ಸ್ 43-41ರ ಗೆಲುವನ್ನಾಚರಿಸಿತು. ಈ ಗೆಲುವಿನೊಂದಿಗೆ ಝೋನ್ ಬಿಯಲ್ಲಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ.
ಬೆಂಗಳೂರು ಪರ ಪವನ್ ಕುಮಾರ್ ಆಲ್ ರೌಂಡರ್ ಆಟ ಆಡಿದರು. ಪವನ್ ತಂಡಕ್ಕೆ 12 ರೈಡಿಂಗ್ ಪಾಯಿಂಟ್, 1 ಟ್ಯಾಕ್ಲ್ ಮತ್ತು 2 ಬೋನಸ್ ಸೇರಿ ಒಟ್ಟು 15 ಪಾಯಿಂಟ್ಸ್ ಸೇರಿಸಿದರು. ಪಂದ್ಯದ ಗೆಲುವಿಗೆ ಇದೇ ಪ್ರಮುಖ ನೆರವು ನೀಡಿತು. ಜೊತೆಗೆ ಮತ್ತೊಬ್ಬ ಡಿಫೆಂಡರ್ ಕಾಶಿಲಿಂಗ್ ಅಡೆಕೆ ಕೂಡ 1 ರೈಡಿಂಗ್, 3 ಟ್ಯಾಕ್ಲ್, 7 ಬೋನಸ್ ಪಾಯಿಂಟ್ ಗಳನ್ನು ಸೇರಿಸಿದ್ದು ತಂಡವನ್ನು ಗೆಲುವಿನಂಚಿಗೆ ತಂದಿತು.
ಪಾಟ್ನಾ ಪೈರೇಟ್ಸ್ ಪರ ದೀಪಕ್ ನರ್ವಾಲ್ ಮತ್ತು ಮನ್ಜೀತ್ ಉತ್ತಮ ಪ್ರದರ್ಶನ ನೀಡಿದರು. ಇಬ್ಬರೂ ತಲಾ 10 ಪಾಯಿಂಟ್ ಗಳನ್ನು ತಂಡಕ್ಕೆ ಸೇರಿಸಿದರು. ಅಂತಿಮ ಕ್ಷಣದಲ್ಲಿ ಪಂದ್ಯ ಸಾಕಷ್ಟು ಜಿದ್ದಾಜಿದ್ದಿಗೆ ಸಾಕ್ಷಿಯಾಯಿತಾದರೂ ಬೆಂಗಳೂರು ಮೇಲುಗೈ ಸಾಧಿಸಿತು.
ಇದಕ್ಕೂ ಮೊದಲಿನ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಪುಣೇರಿ ಪಲ್ಟಾನ್ 31-27ರ ಜಯ ಸಾಧಿಸಿತು. ಎರಡೂ ಪಂದ್ಯಗಳ ಬಳಿಕ ಝೋನ್ ಎಯಲ್ಲಿ ಪುಣೇರಿ ಪಲ್ಟಾನ್, ಯು ಮುಂಬೈ, ಗುಜರಾತ್ ಫಾರ್ಚೂನ್ ಜೈಂಟ್ಸ್ ಮೊದಲ ಮೂರು ಸ್ಥಾನಗಳಲ್ಲಿದ್ದರೆ, ಝೋನ್ ಬಿಯಲ್ಲಿ ಬೆಂಗಳೂರು ಬುಲ್ಸ್, ತೆಲುಗು ಟೈಟಾನ್ಸ್ ಮತ್ತು ಯುಪಿ ಯೋಧಾ ತಂಡಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications