For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ ಗೆ ಭರ್ಜರಿ ಜಯ

Pro Kabaddi 2018 Live Score, Bengaluru Bulls vs Tamil Thalaivas

ಸೋನಿಪತ್, ಅಕ್ಟೋಬರ್ 17: ಹರಿಯಾಣದ ಸೋನಿಪತ್ ನಲ್ಲಿ ನಡೆದ ಪ್ರೊ ಕಬಡ್ಡಿ 2018ರ 19ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ 44-35ರ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ತಮಿಳ್ ತಲೈವಾಸ್ ಪ್ರಶಸ್ತಿ ಕನಸು ಭಗ್ನಗೊಂಡಿದೆ.

ಬೆಂಗಳೂರು ಈ ಸೀಸನ್ ನಲ್ಲಿ ಈ ಮೊದಲು ಆಡಿದ್ದು ತಲೈವಾಸ್ ಎದುರೇ. ಅದರಲ್ಲಿ ಭರ್ಜರಿ ಜಯ ಸಾಧಿಸಿತ್ತು. ದ್ವಿತೀಯ ಪಂದ್ಯದಲ್ಲೂ ಬೆಂಗಳೂರು ತಂಡ ತಮಿಳ್ ತಲೈವಾಸ್ ವಿರುದ್ಧ ಗೆಲುವಿನ ನಗು ಬೀರಿದೆ. ತಲೈವಾಸ್ ಆರಂಭಿಕ ಪಂದ್ಯದಲ್ಲಿ ಗೆದ್ದಿದ್ದು ಬಿಟ್ಟರೆ ಉಳಿದ ಸತತ ಐದೂ ಪಂದ್ಯಗಳಲ್ಲಿ ಸೋತಂತಾಗಿದೆ.

ಪಂದ್ಯದ ಮೊದಲಾರ್ಧದಲ್ಲೂ ಬೆಂಗಳೂರು 25-14ರ ಮುನ್ನಡೆಯಲ್ಲಿತ್ತು. ಪರ್ಫೆಕ್ಟ್ ರೈಡರ್ ಆಫ್ ದ ಮ್ಯಾಚ್ ಪ್ರಶಸ್ತಿ ಬೆಂಗಳೂರಿನ ಪವನ್ ಶೆಹ್ರಾವತ್ (14 ರೈಡಿಂಗ್ ಪಾಯಿಂಟ್ಸ್) ಲಭಿಸಿದರೆ, ಟಾಟಾ ಏಸ್ ಡಿಫೆಂಡರ್ ಅಫ್ ದಿ ಮ್ಯಾಚ್ ಪ್ರಶಸ್ತಿ ಬುಲ್ಸ್ ನ ಆಶಿಷ್ ಸಾಂಗ್ವಾನ್ ಗೆ (3 ಟ್ಯಾಕ್ಲ್ ಪಾಯಿಂಟ್ಸ್) ಪಡೆದುಕೊಂಡರು.

Story first published: Wednesday, October 17, 2018, 21:59 [IST]
Other articles published on Oct 17, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+