ಪ್ರೊ ಕಬಡ್ಡಿ 2018: ತೆಲುಗು ಟೈಟಾನ್ಸ್ ಗುದ್ದಿ ಕೆಡವಿದ ಬೆಂಗಳೂರು ಬುಲ್ಸ್!

ವಿಶಾಖಪಟ್ನಂ, ಡಿಸೆಂಬರ್ 12: ಆಂಧ್ರಪ್ರದೇಶದ ವಿಶಾಖಪಟ್ನಂನಲ್ಲಿರುವ ರಾಜೀವ್ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಬುಧವಾರ (ಡಿಸೆಂಬರ್ 12) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ಗೆ ಬೆಂಗಳೂರು ಬುಲ್ಸ್ ಸೋಲಿನ ಗುದ್ದು ನೀಡಿದೆ. ಟೈಟಾನ್ಸ್ ವಿರುದ್ಧ ಬುಲ್ಸ್ 37-24ರ ಗೆಲುವು ಸಾಧಿಸಿದೆ.
ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಆಕರ್ಷಕ ಆಟವಾಡಿದರು. ಪವನ್ 12 ರೈಡಿಂಗ್ ಮತ್ತು 1 ಬೋನಸ್ ಸೇರಿ ಒಟ್ಟು 13 ಅಂಕಗಳನ್ನು ತಂಡದ ಖಾತೆಗೆ ಸೇರಿಸಿದರು. ಜೊತೆಗೆ ಮಣೀಂದರ್ ಸಿಂಗ್ 5, ಹರೀಶ್ ನಾಯಕ್ ಮತ್ತು ಅಮಿತ್ ಶಿಯೋರಾನ್ ತಲಾ 4 ಅಂಕ ಸೇರಿಸಿ ತಂಡವನ್ನು ಮೇಲೆತ್ತಲು ನೆರವಾದರು.
ತೆಲುಗು ಟೈಟಾನ್ಸ್ ಪರ ನೀಲೇಶ್ ಸಾಲುಂಕೆ, ಕಮಲ್ ಸಿಂಗ್ ಮತ್ತು ರಾಹುಲ್ ಚೌಧರಿ ಹೋರಾಟ ನಡೆಸಿದರಾದರೂ ಗೆಲುವು ಬೆಂಗಳೂರು ಕಡೆ ಸಾಗಿತು. ಈ ಪಂದ್ಯದ ಬಳಿಕ ಬೆಂಗಳೂರು ಬುಲ್ಸ್ ಬಿ ಝೋನ್ ಅಂಕಪಟ್ಟಿಯಲ್ಲಿ 64 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.
ಬಿ ಝೋನ್ ಅಂಕಟಪಟ್ಟಿಯಲ್ಲಿ ಬೆಂಗಳೂರಿನ ಬೆನ್ನಿಗೆ ಪಾಟ್ನಾ ಪೈರೇಟ್ಸ್ (51 ಅಂಕ), ತೆಲುಗು ಟೈಟಾನ್ಸ್ (45 ಅಂಕ) ತಂಡಗಳು ಇವೆ. ಬುಧವಾರವೇ ನಡೆದ ಮೊದಲ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಗುಜರಾತ್ ಫಾರ್ಚೂನ್ ಜೈಂಟ್ಸ್ 47-37ರ ಜಯ ದಾಖಲಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications