ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್ ಎದುರು ರೋಚಕ ಪಂದ್ಯ ಗೆದ್ದ ಬೆಂಗಳೂರು

ಪುಣೆ, ನವೆಂಬರ್ 28: ಪುಣೆಯ ಶ್ರೀ ಶಿವ್ ಛತ್ರಪತಿ ರಸ್ಲಿಂಗ್ ಹಾಲ್ ನಲ್ಲಿ ಬುಧವಾರ ನಡೆದ (ನವೆಂಬರ್ 28) ಪ್ರೊ ಕಬಡ್ಡಿ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬೆಂಗಳೂರು ಬುಲ್ಸ್ ತಂಡ ರೋಚಕ ರೀತಿಯಲ್ಲಿ 34-26ರ ಅಂತರದಿಂದ ಪಂದ್ಯ ಜಯಿಸಿಕೊಂಡಿತು.
ಪ್ರಾರಂಭದಿಂದಲೂ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಎರಡೂ ತಂಡಗಳು ಸಮ ಸಮ ಅಂಕಗಳಲ್ಲೇ ಮುಂದುವರೆಯುತ್ತ ರೋಚಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಕೊನೆಯ 10 ನಿಮಿಷಗಳ ಅವಧಿಯಲ್ಲಿ ಬೆಂಗಳೂರು ಮೆಲ್ಲಗೆ ಮುನ್ನಡೆ ಪಡೆಯುತ್ತಾ ಸಾಗಿತು. ಅಂತಿಮವಾಗಿ ಗೆಲುವು ತನ್ನದಾಗಿಸಿಕೊಂಡಿತು.
ಬೆಂಗಳೂರು ಪರ ರೋಹಿತ್ ಕುಮಾರ್ 8, ಪವನ್ ಕುಮಾರ್ 6, ಅಮಿತ್ ಶಿಯೋರಾನ್ 5, ಆಶೀಷ್ ಕುಮಾರ್ 4 ಅಂಕಗಳನ್ನು ಸೇರಿಸಿ ತಂಡಕ್ಕೆ ಬಲ ತುಂಬಿದರು. ತೆಲುಗು ಟೈಟಾನ್ಸ್ ಪರ ವಿಶಾಲ್ ಭಾರಧ್ವಾಜ್ ಮತ್ತು ರಾಹುಲ್ ಚೌಧರಿ ತಲಾ 6 ಅಂಕಗಳನ್ನು ಸೇರಿಸಿ ತಂಡದ ಪರ ಹೋರಾಟ ನಡೆಸಿದರು.
ಈ ಪಂದ್ಯದ ಬಳಿಕ ಬಿ ಝೋನ್‌ನಲ್ಲಿರುವ ಬೆಂಗಳೂರು 57 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ದ್ವಿತೀಯ ಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್ 43 ಅಂಕಗಳನ್ನು ಕಲೆ ಹಾಕಿದೆ. ಝೋನ್ ಎ ಯಲ್ಲಿ ಯು ಮುಂಬಾ 62 ಅಂಕಗಳೊಂದಿಗೆ ಮುಂದಿದ್ದು, ಗುಜರಾತ್ ಫಾರ್ಚೂನ್ ಜೈಂಟ್ಸ್ 58 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications