Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಬಾಂಗ್ ಡೆಲ್ಲಿ ಎದುರು ಜೈಪುರ್ ಪಿಂಕ್ ಪ್ಯಾಂಥರ್ಸ್‌ಗೆ ಹೀನಾಯ ಸೋಲು

Pro Kabaddi 2018: Dabang Delhi Beat Jaipur Pink Panthers

ನವದೆಹಲಿ, ನವೆಂಬರ್ 30: ದೆಹಲಿಯಲ್ಲಿನ ತ್ಯಾಗರಾಜ್ ಇಂಡೋರ್ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಮಬರ್ 30) ನಡೆದ ಪ್ರೊ ಕಬಡ್ಡಿ ಲೀಗ್ 89ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಆತಿಥೇಯ ಡೆಲ್ಲಿ ವಿರುದ್ಧ 48-35ರ ಹೀನಾಯ ಸೋಲನುಭವಿಸಿದೆ.

ಜೈಪರ್ ಪಿಂಕ್ ಪ್ಯಾಂಥರ್ಸ್ ಪರ ದೀಪಕ್ ಹೂಡ ಭರ್ಜರಿ 20 ಅಂಕಗಳನ್ನು ಸೇರಿಸಿದರಾದರೂ ಗೆಲುವು ದಬಾಂಗ್ ಡೆಲ್ಲಿ ಪರ ವಾಲಿತು. ದಬಾಂಗ್ ಡೆಲ್ಲಿಯಿಂದ ಮೇರಜ್ ಶೈಖ್ 15 ಪಾಂಯಿಂಟ್ಸ್ ಸೇರಿಸಿ ತಂಡವನ್ನು ಬೆಂಬಲಿಸಿದರು. ಜೊತೆಗೆ ನವೀನ್ ಕುಮಾರ್ ಮತ್ತು ಚಂದ್ರನ್ ರಂಜಿತ್ ತಲಾ 9 ಅಂಕ ಸೇರಿಸಿ ತಂಡದ ಗೆಲುವಿನಲ್ಲಿ ನೆರವಾದರು.

ಈ ಪಂದ್ಯದ ಬಳಿಕ ಝೋನ್ 'ಎ'ಯಲ್ಲಿ ದಬಾಂಗ್ ಡೆಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಜೈಪುರ್ 6ನೇ ಸ್ಥಾನದಲ್ಲಿದೆ. ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು 35-35ರಿಂದ ಸಮಬಲ ಸಾಧಿಸಿದವು.

Story first published: Friday, November 30, 2018, 22:46 [IST]
Other articles published on Nov 30, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+