ಪ್ರೊ ಕಬಡ್ಡಿ ಲೀಗ್ 2018: ಪಲ್ಟಾನ್ ವಿರುದ್ಧ ಫಾರ್ಚೂನ್ ಜೈಂಟ್ಸ್ ಗೆ ಜಯ

ಪಾಟ್ನಾ, ಅಕ್ಟೋಬರ್ 30: ಪಾಟ್ನಾದ ಪಾಟಲೀಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಮಂಗಳವಾರ (ಅ.30) ನಡೆದ ಪ್ರೊಕಬಡ್ಡಿ 40ನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಗುಜರಾತ್ ಫಾರ್ಚೂನ್ ಜೈಂಟ್ಸ್ 37-27ರ ಗೆಲುವನ್ನು ಸಂಭ್ರಮಿಸಿದೆ. ಇದು ಫಾರ್ಚೂನ್ ಜೈಂಟ್ಸ್ ಗೆ ಲಭಿಸಿದ ಮೂರನೇ ಗೆಲುವು.
ಪ್ರೊ ಕಬಡ್ಡಿ ಲೀಗ್ ಮೈಖೇಲ್ ಮುಖಪುಟ
ಪಂದ್ಯದ ಆರಂಭದಿಂದಲೂ ಫಾರ್ಚೂನ್ ಜೈಂಟ್ಸ್ ಮುನ್ನಡೆ ಸಾಧಿಸುತ್ತಾ ಬಂತು. ಜೊತೆಗೆ ಗುಜರಾತ್ ಪರ ಸಚಿನ್ ಅದ್ಭುತ ರೈಡ್ ಮೂಲಕ ಮಿಂಚಿದರು. ಸಚಿನ್ ಒಟ್ಟು 10 ರೈಡಿಂಗ್ ಪಾಯಿಂಟ್ ಗಳನ್ನು ಸೇರಿಸಿದ್ದು ತಂಡದ ಗೆಲುವನ್ನು ಬರೆಯಿತು. ರುತುರಾಜ್ ಕೊರಾವಿ ಕೂಡ 4 ಟ್ಯಾಕ್ಲ್ ಪಾಯಿಂಟ್ ಸೇರಿಸಿದ್ದು, ಗುಜರಾತ್ ಗೆಲುವಿಗೆ ನೆರವಾಯ್ತು.
ಈ ಪಂದ್ಯದ ಬಳಿಕ ಝೋನ್ ಎಯಲ್ಲಿ ಪುಣೇರಿ ಪಾಲ್ಟಾನ್ 32 ಅಂಕಗಳಿಂದ ಅಗ್ರ ಸ್ಥಾನದಲ್ಲಿದೆ. ಗುಜರಾತ್ 19 ಅಂಕಗಳಿಂದ ಮೂರನೇ ಸ್ಥಾನದಲ್ಲಿದೆ. ಮಂಗಳವಾರ (ಅಕ್ಟೋಬರ್ 30) ನಡೆದ ಎರಡನೇ (41ನೇ) ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ತೆಲುಗು ಟೈಟಾನ್ಸ್ 53-32ರ ಭರ್ಜರಿ ಗೆಲುವು ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications