ಕಬಡ್ಡಿ: ಬೆಂಗಾಲ್ ವಾರಿಯರ್ಸ್ ಸೋಲಿಸಿದ ಗುಜರಾತ್ ಫಾರ್ಚೂನ್ ಜೈಂಟ್ಸ್

ಅಹ್ಮದಾಬಾದ್, ನವೆಂಬರ್ 16: ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ದ ಅರೆನಾ ಮಲ್ಟಿ ಪರ್ಪೋಸ್ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 16) ನಡೆದ ಪ್ರೊ ಕಬಡ್ಡಿ ಲೀಗ್ ಇಂಟರ್ ಝೋನ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಆತಿಥೇಯ ಗುಜರಾತ್ ಫಾರ್ಚೂನ್ ಜೈಂಟ್ಸ್ 35-23ರ ಭರ್ಜರಿ ಅಂತರದಿಂದ ಸೋಲಿಸಿದೆ.
ಗುಜರಾತ್ ಪರ ಕೆ ಪ್ರಪಂಜನ್ 9, ಅಜಯ್ ಕುಮಾರ್ 6, ಪರ್ವೇಶ್ ಭೈನ್ಸ್ವಾಲ್ 4 ಅಂಕಗಳನ್ನು ಸೇರಿಸಿ ತಂಡದ ಗೆಲುವಿಗೆ ಕಾರಣರಾದರು. ಗುಜರಾತ್ ಪರ ಇನ್ನುಳಿದ ಆಟಗಾರರೂ ಉತ್ತಮ ಆಟ ಪ್ರದರ್ಶಿಸಿ ತಂಡವನ್ನು ಬೆಂಬಲಿಸಿದರು. ಹೀಗಾಗಿಯೇ ಗುಜರಾತ್ ಸುಲಭವಾಗಿ ಗೆಲುವಿನ ಗೆರೆ ದಾಟಿತು.
ಬೆಂಗಾಲ್ ವಾರಿಯರ್ಸ್ ಪರ ಮಣೀಂದರ್ ಸಿಂಗ್ 6, ಲೀ ಜಂಗ್ ಕುನ್ 5 ಅಂಕ ಸೇರಿಸಿ ಗೆಲುವಿನ ನೆಲೆಯಲ್ಲಿ ಹೋರಾಟ ನಡೆಸಿದರಾದರೂ ಇಡೀ ತಂಡದ ಬಲ-ಬೆಂಬಲ ಸಾಲದಾಯಿತು. ಎ ಝೋನ್ ನಲ್ಲಿರುವ ಗುಜರಾತ್ ಈಗ 39 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಯು ಮುಂಬ ಅಗ್ರ ಸ್ಥಾನದಲ್ಲಿದೆ.
Story first published: Friday, November 16, 2018, 22:19 [IST]
Other articles published on Nov 16, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications