ಪ್ರೊ ಕಬಡ್ಡಿ 2018: ಪಾಟ್ನಾ ಸೋಲಿಸಿ ಪ್ಲೇ ಆಫ್‌ಗೆ ಪ್ರವೇಶಿಸಿದ ಗುಜರಾತ್

ನವದೆಹಲಿ, ಡಿಸೆಂಬರ್ 4: ದೆಹಲಿಯ ತ್ಯಾಗರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಮಂಗಳವಾರ (ಡಿಸೆಂಬರ್ 4) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಗುಜರಾತ್ ಫಾರ್ಚೂನ್ ಜೈಂಟ್ಸ್ 45-27ರ ಗೆಲುವು ದಾಖಲಿಸಿದೆ. ಈ ಮೂಲಕ ಗುಜರಾತ್ ಪ್ಲೇ ಆಫ್ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಂಡಿದೆ.
ಹಾಲಿ ಚಾಂಪಿಯನ್ ಪಾಟ್ನಾ ಈ ಪಂದ್ಯದಲ್ಲಿ ಉತ್ತಮ ಪೈಪೋಟಿ ಪ್ರದರ್ಶಿಸಲಿಲ್ಲ. ತಂಡದ ಯಾವುದೇ ಆಟಗಾರ 5ಕ್ಕಿಂತ ಹೆಚ್ಚಿನ ಅಂಕ ಕದಿಯಲು ವಿಫಲನಾಗಿದ್ದು ಸೋಲಿಗೆ ಕಾರಣವಾಯಿತು. ಪಾಟ್ನಾ ಪರ ಜವಾಹರ್ ದಾಗರ್ 5 ಅಂಕ ಸೇರಿಸಿದರು. ಅದು ಬಿಟ್ಟರೆ ವಿಕಾಸ್ ಜಗ್ಲಾನ್, ದೀಪಕ್ ನರ್ವಾಲ್, ಮನ್ಜೀತ್, ಮನೀಶ್ ತಲಾ 4 ಅಂಕ ಸೇರಿಸಿದರು.
ಗುಜರಾತ್ ಪರ ಸಚಿನ್ ಭರ್ಜರಿ ಆಟದ ಮೂಲಕ ಮಿಂಚಿದರು. 9 ರೈಡ್ ಮತ್ತು 1 ಟ್ಯಾಕ್ಲ್ ಸೇರಿ ಒಟ್ಟು 10 ಅಂಕಗಳನ್ನು ಸಚಿನ್ ತಂಡದ ಖಾತೆಗೆ ನೀಡಿದರು. ಇನ್ನು ಕೆ ಪ್ರಪಂಜನ್ 9, ಪರ್ವೇಶ್ 8 ಅಂಕಗಳ ಕೊಡುಗೆ ಮೂಲಕ ತಂಡವನ್ನು ಬೆಂಬಲಿಸಿದರು.
Story first published: Tuesday, December 4, 2018, 22:19 [IST]
Other articles published on Dec 4, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications