For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ಬಲಿಷ್ಟ ಯು ಮುಂಬಾ ಸೋಲಿಸಿದ ಹರ್ಯಾಣ ಸ್ಟೀಲರ್ಸ್

Pro Kabaddi 2018: Haryana Steelers edge out U Mumba

ಮುಂಬೈ, ನವೆಂಬರ್ 12: ಮುಂಬೈನಲ್ಲಿನ ಸರ್ದಾರ್ ವಲ್ಲಭ ಭಾಯ್ ಪಟೇಲ್ ಇಂಡೋರ್ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 11) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಆತಿಥೇಯ ಮುಂಬೈಯನ್ನು ಹರ್ಯಾಣ ಸ್ಟೀಲರ್ಸ್ ತಂಡ 35-31ರ ಅಂತರದಿಂದ ಸೋಲಿಸಿದೆ.

ಹರ್ಯಾಣ ಪರ ವಿಕಾಶ್ ಖಂಡೋಲ 13 ರೈಡಿಂಗ್ ಮತ್ತು 2 ಬೋನಸ್ ಸೇರಿ 15 ಅಂಕ ಸೇರಿಸಿದ್ದು ತಂಡದ ಗೆಲುವನ್ನು ಬರೆಯಿತು. ಜೊತೆಗೆ ಸುನಿಲ್, ನವೀನ್ ಕೂಡ ತಲಾ 5 ಅಂಕಗಳನ್ನು ನೀಡಿ ತಂಡವನ್ನು ಬೆಂಬಲಿಸಿದರು. ಯು ಮುಂಬಾ ಪರ ಸಿದ್ಧಾರ್ಥ್ ದೇಸಾಯ್ ಹೋರಾಟ ನಡೆಸಿದರಾದರೂ ಗೆಲುವನ್ನು ತಂದುಕೊಡಲಾಗಲಿಲ್ಲ.

ಪಂದ್ಯದಿಂದ ಮುಂಬೈಗೆ ಅಂಥದ್ದೇನೂ ನಷ್ಟವಾದಂತೆ ಕಾಣಲಿಲ್ಲ. ಯಾಕೆಂದರೆ ಝೋನ್ ಎಯಲ್ಲಿರುವ ಮುಂಬೈ ಈಗಾಗಲೇ ಒಟ್ಟು 41 ಅಂಕಗಳಿಸಿ ಪಾಯಿಂಟ್ ಟೇಬಲ್ ನಲ್ಲಿ ಅಗ್ರ ಸ್ಥಾನದಲ್ಲಿದೆ. ಇದಕ್ಕೂ ಮುನ್ನ ದಬಾಂಗ್ ಡೆಲ್ಲಿ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಣ ಕಾಳಗದಲ್ಲಿ ಡೆಲ್ಲಿ 40-26ರ ಭರ್ಜರಿ ಗೆಲುವನ್ನಾಚರಿಸಿತ್ತು.

Story first published: Monday, November 12, 2018, 0:20 [IST]
Other articles published on Nov 12, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+