ಪ್ರೊ ಕಬಡ್ಡಿ: ದಬಾಂಗ್ ಡೆಲ್ಲಿ ವಿರುದ್ಧ ಯು ಮುಂಬಾಗೆ ಭರ್ಜರಿ ಗೆಲುವು

ವಿಶಾಖಪಟ್ನಂ, ಡಿಸೆಂಬರ್ 11: ಆಂಧ್ರಪ್ರದೇಶದ ವಿಶಾಖಪಟ್ನಂನಲ್ಲಿರುವ ರಾಜೀವ್ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಮಂಗಳವಾರ (ಡಿಸೆಂಬರ್ 11) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಬಲಿಷ್ಠ ಯು ಮುಂಬಾ ತಂಡ 44-19ರ ಭರ್ಜರಿ ಗೆಲುವನ್ನಾಚರಿಸಿದೆ.
ಯು ಮುಂಬಾ ಪರ ಇಡೀ ತಂಡವೇ ಅಂಕಗಳ ಉಡುಗೊರೆ ನೀಡಿದ್ದು ತಂಡದ ಗೆಲುವಿಗೆ ಕಾರಣವಾಯ್ತು. ಮುಂಬೈ ಮುಂಚೂಣಿಯ ಆಟಗಾರ ಸಿದ್ಧಾರ್ಥ್ ದೇಸಾಯ್ 12, ರೋಹಿತ್ ಬಳಿಯಾನ್ 8, ಫಝಲ್ ಅಟ್ರಾಚಲಿ 5 ಅಂಕಗಳನ್ನು ಕೂಡಿಸಿ ತಂಡವನ್ನು ಬೆಂಬಲಿಸಿದರು.
ದಬಾಂಗ್ ಡೆಲ್ಲಿ ಪರ ಶಬೀರ್ ಬಾಪ್ಪು, ಸತ್ಪಾಲ್, ಚಂದ್ರನ್ ರಂಜಿತ್ ತಲಾ 5 ಅಂಕಗಳ ಕೊಡುಗೆಯಿತ್ತರು. ಈ ಪಂದ್ಯದ ಬಳಿಕ ಮುಂಬೈ ಒಟ್ಟು 82 ಅಂಕಗಳೊಂದಿಗೆ ಎ ಝೋನ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಗುಜರಾತ್ ಫಾರ್ಚೂನ್ ಜೈಂಟ್ಸ್ ಮತ್ತು ದಬಾಂಗ್ ಡೆಲ್ಲಿ ಅನಂತರದ ಸ್ಥಾನಗಳಲ್ಲಿವೆ.
Story first published: Tuesday, December 11, 2018, 21:51 [IST]
Other articles published on Dec 11, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications