Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್ಸ್ ವಿರುದ್ಧ ಯು ಮುಂಬಾಕ್ಕೆ ಭರ್ಜರಿ ಜಯ

Pro Kabaddi 2018: Mumbai beat Haryana 53-26

ಸೋನಿಪತ್, ಅಕ್ಟೋಬರ್ 13: ಸೋನಿಪತ್ ನಲ್ಲಿ ನಡೆದ ಪ್ರೊ ಕಬಡ್ಡಿ 2018ರ 14ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಯು ಮುಂಬಾ 53-26 ಅಂತರದ ಭರ್ಜರಿ ಜಯ ಸಾಧಿಸಿದೆ. ಈ ಸೀಸನ್ ನ ದೊಡ್ಡ ಅಂಕವಾಗಿ ಮುಂಬಾದ ಅಂಕ 53 ಗುರುತಿಸಲ್ಪಟ್ಟಿತು.

ಯು ಮುಂಬ ಪಂದ್ಯಾರಂಭದಿಂದಲೂ ಮುನ್ನಡೆ ಸಾಧಿಸಿತ್ತು. ಪಂದ್ಯದ ಮೊದಲಾರ್ಧದಲ್ಲೂ ಮುಂಬಾ 27-15ರ ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲೂ ಅದೇ ಹುಮ್ಮಸ್ಸಿನಲ್ಲಿ ಆಟ ಮುಂದುವರೆಸಿತು. ಕಾಲಾವಧಿ ಮುಗಿಯುತ್ತ ಬಂದಂತೆ ಹರ್ಯಾಣ ಒತ್ತಡಕ್ಕೆ ಒಳಗಾಯಿತು.

ಪಂದ್ಯದುದ್ದಕ್ಕೂ ಸೀಸನ್ ಎರಡರ ಚಾಂಪಿಯನ್ ಯು ಮುಂಬಾ ಪಾರಮ್ಯ ಮೆರೆಯುತ್ತಾ ಸಾಗಿದರೆ ಹರ್ಯಾಣ ಸ್ಟೀಲರ್ಸ್ ನಿಂದ ನಾಯಕ ಮೋನು ಗೋಯಟ್ ಕೊಂಚ ಕೊಸರಾಡಿದ್ದು ಕಂಡುಬಂತು. ಆದರೂ ತವರಿನಲ್ಲಿ ನಡೆದ ಈ ಪಂದ್ಯದಲ್ಲಿ ಸ್ಟೀಲರ್ಸ್ ಬರೋಬ್ಬರಿ 27 ಅಂಕಗಳಿಂದ ಯು ಮುಂಬಾ ಎದುರು ಶರಣಾಯಿತು.

ಬೆಸ್ಟ್ ರೈಡರ್ ಆಗಿ ಯು ಮುಂಬಾದ ಅಭಿಷೇಕ್ ಸಿಂಗ್ (12 ಪಾಯಿಂಟ್ಸ್) ಗುರುತಿಸಿಕೊಂಡರೆ, ಯು ಮುಂಬಾದ ಫಜಲ್ ಅಟ್ರಾಚಲಿ ಅವರು ಬೆಸ್ಟ್ ಡಿಫೆಂಡರ್ (7 ಟ್ಯಾಕ್ಲ್ ಪಾಯಿಂಟ್ಸ್) ಪ್ರಶಸ್ತಿ ಪಡೆದುಕೊಂಡರು. ಮೊಮೆಂಟ್ ಆಫ್ ದ ಮ್ಯಾಚ್ ಪ್ರಶಸ್ತಿ ಮುಂಬೈಯ ಅಭಿಷೇಕ್ ಗೆ ಒಲಿಯಿತು.

Story first published: Saturday, October 13, 2018, 22:41 [IST]
Other articles published on Oct 13, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+