
ಚೆನ್ನೈ, ಅಕ್ಟೋಬರ್ 11: ಚೆನ್ನೈ ನಲ್ಲಿ ನಡೆದ ಪ್ರೊ ಕಬಡ್ಡಿ 9ನೇ ಪಂದ್ಯದಲ್ಲಿ ಗುರುವಾರ (ಅಕ್ಟೋಬರ್ 11) ಯುಪಿ ಯೋಧ ಎದುರು ಪಾಟ್ನಾ ಪೈರೇಟ್ಸ್ ತಂಡ 43-41ರ ರೋಚಕ ಗೆಲುವು ದಾಖಲಿಸಿತು. ನಾಯಕ ರಿಶಾಂಕ್ ದೇವಾಡಿಗ ಅವರ ಕೊಸರಾಟದ ನಡುವೆಯೂ ಪಾಟ್ನಾ ಗೆಲುವಿನ ನಗು ಬೀರಿತು.
ಪಂದ್ಯಾರಂಭದಲ್ಲಿ ಯುಪಿಯೇ ಮುನ್ನಡೆಯಲ್ಲಿತ್ತು. ಆಟ ಮುಂದುವರೆದಂತೆಲ್ಲ ಪಾಟ್ನಾ ಅಂಕ ಕದಿಯುತ್ತಾ ಸಾಗಿತು. ಕಡೇ ಘಳಿಗೆಯಲ್ಲಂತೂ ಪಾಟ್ನಾ ಆಟಗಾರ ಜವಾಹರ್ ದಾಳಿಗಿಳಿದು ತಂಡಕ್ಕೆ ಅಂಕ ಸೇರಿಸಿ ತಂಡವನ್ನು ವಿಜಯದ ದಡ ಸೇರಿಸುವಲ್ಲಿ ನೆರವಾದರು.
ಯುಪಿ ಯೋಧ: ಪ್ರಶಾಂತ್ ಕುಮಾರ್ ರೈ, ರಿಶಾಂಕ್ ದೇವಾಡಿಗ, ಶ್ರೀಕಾಂತ್ ಜಾಧವ್, ನಿತೀಶ್ ಕುಮಾರ್, ಅಮಿತ್, ನರೇಂದ್ರ, ಸಾಗರ್ ಕೃಷ್ಣ ಸಬ್ಸ್: ರೋಹಿತ್ ಕುಮಾರ್ ಚೌಧರಿ, ಪಂಕಜ್, ಸಚಿನ್ ಕುಮಾರ್, ಅರ್ಕಾಮ್ ಶೇಖ್.
ಪಾಟ್ನಾ ಪೈರೇಟ್ಸ್: ದೀಪಕ್ ನರ್ವಾಲ್, ಮಂಜೀತ್, ಪರ್ದೀಪ್ ನರ್ವಾಲ್, ವಿಕಾಸ್ ಕಾಲೆ, ಜೈದೀಪ್, ಜವಾಹರ್, ಟೇ ಡೆಯೋಕ್ ಇಮ್ಸ್ಬಬ್ಸ್: ತುಷಾರ್ ಪಾಟೀಲ್, ವಿಕಾಶ್ ಜಗಿಯನ್, ಮನೀಶ್, ಕುಲ್ದೀಪ್ ಸಿಂಗ್, ವಿಜಯ್.