ಪ್ರೊ ಕಬಡ್ಡಿ: ಬೆಂಗಾಲ್ ವಾರಿಯರ್ಸ್ ಎದುರು ಪಾಟ್ನಾ ಪೈರೇಟ್ಸ್‌ಗೆ ಗೆಲುವು

ಮುಂಬೈ, ನವೆಂಬರ್ 10: ಮುಂಬೈಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶನಿವಾರ (ನವೆಂಬರ್ 10) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ 50-30ರ ಭರ್ಜರಿ ಗೆಲುವು ದಾಖಲಿಸಿದೆ.
ಪಾಟ್ನಾ ಪರ ನರ್ವಾಲ್ ಜೋಡಿ ಅಮೋಘ ಆಟವಾಡಿದ್ದು ತಂಡಕ್ಕೆ ಗೆಲುವನ್ನು ತಂದಿತು. ದೀಪಕ್ ನರ್ವಾಲ್ ಅವರು 5 ರೈಡಿಂಗ್, 1 ಟ್ಯಾಕ್ಲ್, 7 ಬೋನಸ್ ಸೇರಿ ಒಟ್ಟಿಗೆ 13 ಅಂಕಗಳನ್ನು ತಂಡದ ಖಾತೆಗೆ ಸೇರಿಸಿ ಗೆಲುವಿನ ರುವಾರಿಯೆನಿಸಿದರು. ಮತ್ತೊಬ್ಬ ಆಟಗಾರ ಪರ್ದೀಪ್ ನರ್ವಾಲ್ ಕೂಡ 11 ಪಾಯಿಂಟ್ಸ್ ಸೇರಿಸಿದರು.
ಪೈರೇಟ್ಸ್ ಪರ ವಿಜಯ್, ಜೈದೀಪ್, ವಿಕಾಸ್ ಖಾಲೆ, ರವೀಂದ್ರ ಕುಮಾರ್ ಕೂಡ ಪಾಯಿಂಟ್ಸ್ ಕೊಡುಗೆ ನೀಡಿದರು. ಬೆಂಗಾಲ್ ವಾರಿಯಯರ್ಸ್ ಪರ ಅಮಿತ್ ನಗಾರ್, ಮಣೀಂದರ್ ಸಿಂಗ್ ಉತ್ತಮ ಆಟವಾಡಿದ್ದು ಕಾಣಿಸಿತಾದರೂ ಪೈರೇಟ್ಸ್ ಒಗ್ಗಟ್ಟಿನ ಆಟದ ಮುಂದೆ ಬೆಂಗಾಲ್ ತಲೆ ಬಾಗಿತು.
ಪಂದ್ಯದ ಬಳಿಕ ಬಿ ಝೋನ್ ಅಂಕಪಟ್ಟಿಯಲ್ಲಿ ಪಾಟ್ನಾ ಪೈರೇಟ್ಸ್ ದ್ವಿತೀಯ ಸ್ಥಾನದಲ್ಲಿ ಬೆಂಗಾಲ್ ವಾರಿಯಯರ್ಸ್ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಬೆಂಗಳೂರು ಬುಲ್ಸ್ ಇದೆ. ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಗುಜರಾತ್ ಫಾರ್ಚೂನ್ ಜೈಂಟ್ಸ್ 38-35ರ ರೋಚಕ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications