ಕಬಡ್ಡಿ: ಹೀರೋ ಆಗಿ ಮೆರೆದ ಪರ್ದೀಪ್, ಪಾಟ್ನಾ ಪೈರೇಟ್ಸ್‌ಗೆ ಭರ್ಜರಿ ಜಯ

ವಿಶಾಖಪಟ್ನಂ, ಡಿಸೆಂಬರ್ 8: ಆಂಧ್ರಪ್ರದೇಶದ ವಿಶಾಖಪಟ್ನಂನಲ್ಲಿರುವ ರಾಜೀವ್ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಶುಕ್ರವಾರ (ಡಿಸೆಂಬರ್ 7) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಪಾಟ್ನಾ ಪೈರೇಟ್ಸ್ 53-36ರ ಭರ್ಜರಿ ಗೆಲುವನ್ನಾಚರಿಸಿತು.
ಪಾಟ್ನಾ ಪೈರೇಟ್ಸ್ ಪರ ಪರ್ದೀಪ್ ನರ್ವಾಲ್ ಹೀರೋ ಆಗಿ ಮಿನುಗಿದರು. ನರ್ವಾಲ್ ಬರೋಬ್ಬರಿ 27 ರೈಡಿಂಗ್ ಅಂಕಗಳನ್ನು ತಂಡದ ಖಾತೆಗೆ ತುಂಬಿದರು. ಇದು ಪಿಕೆಎಲ್ ಇತಿಹಾಸದಲ್ಲಿ ದಾಖಲೆಯಾಗಿಯೂ ಉಳಿಯಿತು. ಜೊತೆಗೆ ಮನ್ಜೀತ್ 6, ವಿಜಯ್ 4 ಅಂಕಗಳನ್ನು ಸೇರಿಸಿ ತಂಡವನ್ನು ಬೆಂಬಲಿಸಿದರು.
ಪುಣೇರಿ ಪಲ್ಟಾನ್ ಪರ ಮೋರೆ ಜಿಬಿ 13, ಸಂದೀಪ್ ನರ್ವಾಲ್ 7, ಅಮಿತ್ ಕುಮಾರ್ 5 ಅಂಕದ ಕೊಡುಗೆ ನೀಡಿದರಾದರೂ ತಂಡಕ್ಕೆ ಗೆಲುವು ತರಲಾಗಲಿಲ್ಲ. ಶುಕ್ರವಾರವೇ ನಡೆದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಫಾರ್ಚೂನ್ ಜೈಂಟ್ಸ್ 29-27ರ ಜಯ ಸಾಧಿಸಿತು.
Story first published: Saturday, December 8, 2018, 0:38 [IST]
Other articles published on Dec 8, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications