ಪ್ರೊ ಕಬಡ್ಡಿ: ರೋಚಕ ಪಂದ್ಯದಲ್ಲಿ ಯು ಮುಂಬಾ ಎದುರು ಗೆದ್ದ ಪಲ್ಟಾನ್

ಪುಣೆ, ಅಕ್ಟೋಬರ್ 20: ಪುಣೆಯ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಗ್ರಾಮದಲ್ಲಿ ನಡೆದ ಪ್ರೋ ಕಬಡ್ಡಿ 2018ರ 26ನೇ ರೋಚಕ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡ ಯು ಮುಂಬಾ ವಿರುದ್ಧ 33-32ರ ಗೆಲುವು ಸಾಧಿಸಿದೆ. ತವರು ನೆಲದಲ್ಲಿ ಪಂದ್ಯ ನಡೆದಿದ್ದರಿಂದ ಪುಣೆ ತಂಡ ಅದ್ಭುತ ಆಟದ ಮೂಲಕ ಪಂದ್ಯವನ್ನು ವಶವಾಗಿಸಿಕೊಂಡಿತು.
ಪಂದ್ಯಾರಂಭದಿಂದಲೂ ಪುಣೆ ಮುನ್ನಡೆ ಕಾಯ್ದಿರಿಸಿಕೊಂಡಿತು. ಯು ಮುಂಬಾಕ್ಕೆ ಇದು ಮೊದಲ ಸೋಲು. ಆಡಿರುವ ಐದು ಪಂದ್ಯಗಳಲ್ಲಿ ಯು ಮುಂಬಾ ಮೂರು ಗೆಲುವು, ಒಂದು ಟೈ, ಒಂದು ಪಂದ್ಯವನ್ನು ಸೋತಿದೆ. ಏಳರಲ್ಲಿ ನಾಲ್ಕು ಗೆಲುವು, ಒಂದು ಟೈ, ಎರಡು ಪಂದ್ಯಗಳನ್ನು ಸೋತಿರುವ ಪುಣೇರಿ ಎ ಝೋನ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಇದಕ್ಕೂ ಮೊದಲಿನ ಯುಪಿ ಯೋಧ ಮತ್ತು ಬೆಂಗಾಲ್ ವಾರಿಯರ್ಸ್ ನಡುವಿನ ರೋಚಕ ಹಣಾಹಣಿ 40-40ರ ಸಮಬಲದೊಂದಿಗೆ ಅಂತ್ಯ ಕಂಡಿತ್ತು. ರಿಶಾಂಕ್ ದೇವಾಡಿಗ ನಾಯಕತ್ವದ ಯುಪಿ ಯೋಧ ಗೆಲುವಿಗಾಗಿ ಕೊಸರಾಡಿತಾದರೂ ತೀವ್ರ ಪೈಪೋಟಿ ನೀಡಿದ ಬೆಂಗಾಲ್ ಪಂದ್ಯವನ್ನು ಟೈಗೊಳಿಸಿಕೊಂಡಿತು.
Story first published: Saturday, October 20, 2018, 23:01 [IST]
Other articles published on Oct 20, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications