ಪ್ರೊ ಕಬಡ್ಡಿ: ಪುಣೆ ವಿರುದ್ಧ ಸೋತ ಬೆಂಗಳೂರು ಹರ್ಯಾಣ ಎದುರು ಗೆಲ್ಲುತ್ತಾ?

ಪುಣೆ, ಅಕ್ಟೋಬರ್ 22: ಪುಣೆಯ ಶ್ರೀ ಛತ್ರಪತಿ ಕ್ರೀಡಾಗ್ರಾಮದಲ್ಲಿ ಭಾನುವಾರ (ಅಕ್ಟೋಬರ್ 21) ನಡೆದ ಪ್ರೊ ಕಬಡ್ಡಿ 2018ರ ಮೊದಲ ಇಂಟರ್ ಝೋನ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಆತಿಥೇಯ ಪುಣೇರಿ ಪಲ್ಟಾನ್ ವಿರುದ್ಧ 27-25ರ ರೋಚಕ ಹಣಾಹಣಿಯಲ್ಲಿ ಸೋತಿತ್ತು. ಟೂರ್ನಿಯಲ್ಲಿ ಬುಲ್ಸ್ ಗೆ ಎದುರಾದ ಮೊದಲ ಸೋಲಿದು.
ಪಾಯಿಂಟ್ ಟೇಬಲ್, ಮೈಖೇಲ್ ಪ್ರೊ ಕಬಡ್ಡಿ ಮುಖಮುಟಕ್ಕೆ ಕ್ಲಿಕ್ ಮಾಡಿ
ಬಿ ಝೋನ್ ನಲ್ಲಿರುವ ಬೆಂಗಳೂರು ಬುಲ್ಸ್ ತಂಡ ಬುಧವಾರ (ಅಕ್ಟೋಬರ್ 24) ಎ ಝೋನ್ ನಲ್ಲಿರುವ ಹರ್ಯಾಣ ಸ್ಟೀಲರ್ಸ್ ಸವಾಲು ಸ್ವೀಕರಿಸಲಿದ್ದು, ಸ್ಟೀಲರ್ಸ್ ವಿರುದ್ಧ ಜಯ ಸಾಧಿಸುವ ನಿರೀಕ್ಷೆಯಿದೆ. ಹರ್ಯಾಣ ಸ್ಟೀಲರ್ಸ್ ಆಡಿರುವ 7 ಪಂದ್ಯಗಳಲ್ಲಿ 2 ಗೆಲುವನ್ನಷ್ಟೇ ಪಡೆದಿದ್ದು, 5 ಪಂದ್ಯಗಳನ್ನು ಸೋತಿದೆ.
ಅಂಕಪಟ್ಟಿಯಲ್ಲಿ ಎ ಝೋನ್ ನಲ್ಲಿ 8 ಪಂದ್ಯಗಳಲ್ಲಿ 5 ಗೆಲುವು, 2 ಸೋಲು, 1 ಪಂದ್ಯ ಟೈ ಮಾಡಿಕೊಂಡಿರುವ ಪುಣೆ ತಂಡ ಭರ್ಜರಿ 30 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮುಂಬೈ, ಡೆಲ್ಲಿ ಅನಂತರದ ಸ್ಥಾನಗಳಲ್ಲಿವೆ. ಬಿ ಝೋನ್ ನಲ್ಲಿ 16 ಪಾಯಿಂಟ್ಸ್ ಗಳಿಸಿರುವ ತೆಲುಗು ಟೈಟಾನ್ಸ್ ಅಗ್ರ ಸ್ಥಾನದಲ್ಲಿ, ಬೆಂಗಾಲ್ ವಾರಿಯರ್ಸ್ (13 ಪಾಯಿಂಟ್ಸ್), ಬೆಂಗಳೂರು ಬುಲ್ಸ್ (11) ಅನಂತರದ ಸ್ಥಾನಗಳಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications