ಪ್ರೊ ಕಬಡ್ಡಿ 2018: ತೆಲುಗು ಟೈಟಾನ್ಸ್‌ಗೆ ಸೋಲುಣಿಸಿದ ತಮಿಳ್ ತಲೈವಾಸ್

ಅಹ್ಮದಾಬಾದ್, ನವೆಂಬರ್ 20: ಗುಜರಾತ್ ನ ಅಹ್ಮದಾಬಾದ್‌ನಲ್ಲಿನ ಟ್ರಾನ್ಸ್‌ಸ್ಟೇಡಿಯಾ ಇಂಡೋರ್ ಅರೆನಾದಲ್ಲಿ ಮಂಗಳವಾರ (ನವೆಂಬರ್ 20) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ತೆಲುಗು ಟೈಟಾನ್ಸ್‌ಗೆ 27-23ರ ಸೋಲುಣಿಸಿದೆ. ಈ ಜಯದೊಂದಿಗೆ ತಲೈವಾಸ್, ಸೌದರ್ನ್ ಡರ್ಬಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ತಮಿಳ್ ತಲೈವಾಸ್ ಪರ ಅಜೈಯ್ ಠಾಕೂರ್ ಅತ್ಯುತ್ತಮ ಆಟವಾಡಿದರು. 6 ರೈಡಿಂಗ್ ಮತ್ತು 2 ಬೋನಸ್ ಸೇರಿ ಠಾಕೂರ್ ಒಟ್ಟು 8 ಅಂಕಗಳನ್ನು ತಂಡದ ಖಾತೆಗೆ ತುಂಬಿದರು. ಇದಕ್ಕಿಂತಲೂ ಹೆಚ್ಚಾಗಿ ಇಡೀ ತಂಡವೇ ಒಗ್ಗಟ್ಟಿನಾಟ ಪ್ರದರ್ಶಿಸಿದ್ದು ಗೆಲುವಿನಲ್ಲಿ ಪರಿಣಾಮ ಬೀರಿತು. ತಂಡದ ಬಹುತೇಕ ಆಟಗಾರರ ಅಂಕದ ಕೊಡುಗೆ ನಿರ್ಣಾಯಕವೆನಿಸಿತು.
ಸುಕೇಶ್ ಹೆಗ್ಡೆ 5, ಅತುಲ್ ಎಂಎಸ್ 4, ಮನ್‌ಜೀತ್ ಛಿಲ್ಲರ್ 3, ಪಿ ಸುಬ್ರಮಣಿಯನ್, ಡಿ ಗೋಪು, ಡಿ ಪ್ರದಾಪ್, ಸಿ ಅರುಣ್ ತಲಾ ಒಂದೊಂದು ಅಂಕ ಸೇರಿಸಿದ್ದು ತಂಡಕ್ಕೆ ಬಲ ತುಂಬಿತು. ತೆಲುಗು ತಂಡದ ಪರ ರಾಹುಲ್ ಚೌಧರಿ 8 ಪಾಯಿಂಟ್ ಸೇರಿಸಿ ಕೊಂಚ ಹೋರಾಟ ನಡೆಸಿದರಾದರೂ ಗೆಲುವು ತಂದುಕೊಳ್ಳಲಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications